Asianet Suvarna News Asianet Suvarna News

ಲವ್ವಿ ಡವ್ವಿ ಒಬ್ಬಳ ಜೊತೆ, ಸಂಸಾರ ಇನ್ನೊಬ್ಬಳ ಜೊತೆ; ಕೇಳೋರಿಲ್ಲ ಯುವತಿಯ ವ್ಯಥೆ..!

Jul 11, 2021, 9:21 AM IST

ಬೆಂಗಳೂರು (ಜು. 11): ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಕೈ ಕೈ ಹಿಡಿದು ಲವ್ವಿ ಡವ್ವಿ ಎಂದು ಸುತ್ತಾಡಿದರು. 3 ವರ್ಷ ಗಂಡ ಹೆಂಡತಿಯಾಗಿ ಸಂಸಾರ ಮಾಡಿದ್ದಾರೆ. ಆದರೆ ಯುವಕ ಬೇರೆ ಮದುವೆಯಾಗುತ್ತಿರುವುದು ಗೊತ್ತಾಗಿದ್ದೇ ತಡ, ಮದುವೆ ಮನೆ ಮುಂದೆ ಬಂದು ಯುವತಿ ಕೂಗಾಡಿದ್ದಾಳೆ. ಯುವತಿ ಎಷ್ಟೇ ಕೂಗಾಡಿದರೂ ಮದುವೆ ಮಾತ್ರ ಯಾವುದೇ ಆತಂಕವಿಲ್ಲದೇ ಮದುವೆ ನಡೆದಿದೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶ ಹೋಶಾಂಗಬಾದ್‌ನಲ್ಲಿ..!