News Hour: ಲೋಕಸಭಾ ವಿಪಕ್ಷ ನಾಯಕ, ರಾಹುಲ್ ಗಾಂಧಿ ನಿರ್ಧಾರಕ್ಕೆ ಕಾತರ!
ರಾಹುಲ್ ವಿಪಕ್ಷ ನಾಯಕ ಎಂದು ಸಿಡಬ್ಲ್ಯುಸಿ ನಿರ್ಣಯ ಮಾಡಿದೆ. ಯೋಚನೆ ಮಾಡಿ ಹೇಳ್ತೀನಿ ಎಂದು ಕಾಂಗ್ರೆಸ್ ಯುವರಾಜ ತಿಳಿಸಿದ್ದಾರೆ. ಸಂಸದೀಯ ಅಧ್ಯಕ್ಷೆಯಾಗಿ ಸೋನಿಯಾ ಪುನಾರಾಯ್ಕೆ ಆಗಿದ್ದಾರೆ.
ನವದೆಹಲಿ (ಜೂ.8): ರಾಹುಲ್ ಗಾಂಧಿ ವಿಪಕ್ಷ ನಾಯಕರಾಗುವ ಸಾಧ್ಯತೆ ಇದೆ. ಈ ಬಗ್ಗೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ ನಿರ್ಧಾರ ಮಾಡಿದ್ದರೂ, ಈ ಬಗ್ಗೆ ಯೋಚನೆ ಮಾಡಿ ಹೇಳುವುದಾಗಿ ವಯನಾಡ್ ಹಾಗೂ ರಾಯ್‌ಬರೇಲಿ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಇದರಿಂದಾಗಿ ಲೋಕಸಭೆ ವಿಪಕ್ಷ ನಾಯಕರಾಗಲು ರಾಹುಲ್ ಗಾಂಧಿ ಅಧಿಕೃತ ಒಪ್ಪಿಗೆಯೊಂದೇ ಬಾಕಿ ಇದೆ. ವಿಪಕ್ಷ ನಾಯಕನಾಗಲೂ ಹಿರಿಯ ನಾಯಕರು ಒತ್ತಾಯ ಮಾಡಿದ್ದಾರೆ. ಹಿರಿಯರ ಸಲಹೆಗೆ ರಾಹುಲ್ ಯಾವುದೇ ನಿರ್ಧಾರ ತಿಳಿಸಿಲ್ಲ.
ಎನ್‌ಡಿಎ ಸರ್ಕಾರ ಅಧಿಕಾರಕ್ಕೇರುವ ಮುನ್ನವೇ 'ಸ್ಟಾಕ್ ಅವ್ಯವಹಾರ' ಆರೋಪ ಮಾಡಿದ ರಾಹುಲ್ ಗಾಂಧಿ!
ದೆಹಲಿಯ ಅಶೋಕ್ ಹೋಟೆಲ್ನಲ್ಲಿ ಸಿಡಬ್ಲ್ಯುಸಿ ಸಭೆ ನಡೆದಿದೆ. ಸಿದ್ದರಾಮಯ್ಯ, ಡಿಸಿಎಂ ಡಿಕೆ ಕೂಡ ಸಿಡಬ್ಲುಸಿ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಕರ್ನಾಟಕದ ಫಲಿತಾಂಶದ ಬಗ್ಗೆ ಚರ್ಚೆಯಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಫಲಿತಾಂಶಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.