ಎನ್‌ಡಿಎ ಸರ್ಕಾರ ಅಧಿಕಾರಕ್ಕೇರುವ ಮುನ್ನವೇ 'ಸ್ಟಾಕ್‌ ಅವ್ಯವಹಾರ' ಆರೋಪ ಮಾಡಿದ ರಾಹುಲ್ ಗಾಂಧಿ!

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ದೊಡ್ಡ ಆರೋಪ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಸ್ಟಾಕ್‌ ಮಾರ್ಕೆಟ್‌ ಅವ್ಯವಹಾರ ಆರೋಪ ಮಾಡಿದ್ದಾರೆ.
 

Rahul Gandhi Demand JPC on fall stock market after the elections san

ನವದೆಹಲಿ (ಜೂ.6): ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಏರುವ ಮುನ್ನವೇ ರಾಹುಲ್‌ ಗಾಂಧಿ ಸರ್ಕಾರದ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ. ಜೂನ್‌ 4ರಂದು ಚುನಾವಣೆಯ ಫಲಿತಾಂಶದ ದಿನ ಸ್ಟಾಕ್‌ ಮಾರ್ಕೆಟ್‌ನಲ್ಲಿ 35 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಈ ಕುರಿತಾಗಿ ಜೆಪಿಸಿ ತನಿಖೆಗೆ ಅವರು ಆಗ್ರಹ ಮಾಡಿದ್ದಾರೆ. ಗುರುವಾರ ಈ ಕುರಿತಾಗಿ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, 'ಇಂದು ಮಹತ್ವದ ವಿಚಾರವೊಂದನ್ನು ನಾವು ಹೇಳಬೇಕಿದೆ. ಮೊದಲು ಒಂದು ಅಂಶ ನಾವು ಗಮನಿಸಿದ್ದು,  ಪ್ರಧಾನಿ, ಗೃಹ ಸಚಿವರು, ಹಣಕಾಸು ಸಚಿವರು ಸ್ಟಾಕ್ ಮಾರ್ಕೆಟ್ ಬಗ್ಗೆ ಉಲ್ಲೇಖ ಮಾಡಿದರು. ಪ್ರಧಾನಿ ಎರಡು ಮೂರು ಬಾರಿ ಇದರ ಬಗ್ಗೆ ಮಾತನಾಡಿದ್ದರು. ಗೃಹ ಸಚಿವರೂ ಕೂಡ ಅದನ್ನೇ ಹೇಳಿ ಜೂನ್ 4 ರಂದು ಸ್ಟಾಕ್ ಮೇಲೆ ಹೂಡಿಕೆ ಮಾಡಿ ಮೇಲೇರುತ್ತದೆ ಎಂದಿದ್ದರು. ಇದೇ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಉಲ್ಲೇಖಿಸಿದ್ದರು. ಮಾಧ್ಯಮ ಸುಳ್ಳು ನಕಲಿ ಎಕ್ಸಿಟ್ ಪೋಲ್ ರಿಲೀಸ್ ಮಾಡಿತು. ಬಿಜೆಪಿಯ ಆಂತರಿಕ ಸರ್ವೆ ಪ್ರಕಾರ 220 ಸೀಟುಗಳು ಬರಬಹುದು ಅನ್ನೋದು ಗೊತ್ತಿತ್ತು. ಜೂನ್ 3 ಕ್ಕೆ ಇಡೀ ಸ್ಟಾಕ್ ಮಾರ್ಕೆಟ್ ಮೇಲೇರುತ್ತದೆ. ಜೂನ್ 4 ಕ್ಕೆ ಖಟಾರ್ ಅಂತ ಸ್ಟಾಕ್ ಮಾರ್ಕೆಟ್ ಬೀಳುತ್ತದೆ. ಮೇ 31 ಕ್ಕೆ ದೊಡ್ಡ ಮೊತ್ತದ ಸ್ಟಾಕ್ ಆ್ಯಕ್ಟಿವಿಟಿಗಳು ನಡೆದಿವೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಇದರಿಂದ ರಿಟೇಲ್ ಹೂಡಿಕೆದಾರರಿಗೆ ದೊಡ್ಡ ಲಾಸ್ ಆಗಿದೆ. ಇದು ದೇಶದ ಇತಿಹಾಸದ ಬಹಳ ದೊಡ್ಡ ಹಗರಣ. ಯಾಕೆ ಪ್ರಧಾನಿ ಒಂದು ನಿಗದಿತ ಸ್ಟಾಕ್ ಮೇಲೆ ಹೂಡಿಕೆ ಮಾಡಲು ಹೇಳಿದರು. ಬಿಜೆಪಿ ಹಾಗೂ ಫೇಕ್ ಎಕ್ಸಿಟ್ ಪೋಲ್ ನ ನಡುವಿನ ಸಂಬಂಧ ಏನಿದೆ? ಯಾರೋ ಕೆಲವರಿಗ ಮಾತ್ರ ಮಾಹಿತಿ ಇದ್ದು ಅನಗತ್ಯ ಹೂಡಿಕೆ ಮಾಡಿಸಿದ್ದಾರೆ. ಮಾಹಿತಿಯನ್ನು ತಿರುಚಿ ಸ್ಟಾಕ್ ಮಾರ್ಕೆಟ್ ಹಗರಣ ಮಾಡಲಾಗಿದೆ. ಇದರ ಬಗ್ಗೆ ಜಂಟಿ ಸದನ ಸಮಿತಿ ತನಿಖೆ ಆಗಬೇಕಿದೆ. 5 ಕೋಟಿ ಸ್ಟಾಕ್ ಮಾರ್ಕೆಟ್ ಹೂಡಿಕೆ ಮಾಡುವ ಕುಟುಂಬಗಳಿಗೆ ಯಾಕೆ ಹಾದಿ ತಪ್ಪಿಸಲಾಯಿತು? ಅದಾನಿ ನೇತೃತ್ವದ ಎರಡು ಚಾನೆಲ್ ಗಳಿಗೆ ಇದರ ಬಗ್ಗೆ ಸಂದರ್ಶನ ನೀಡಲಾಗಿದೆ. ಸೆಬಿ ಚಾನೆಲ್ ಗಳ ಬಗ್ಗೆ ತನಿಖೆ ಮಾಡಬೇಕು ಎಂದು ರಾಹುಲ್‌ ಗಾಂಧಿ ಆಗ್ರಹಿಸಿದ್ದಾರೆ. ಪ್ರಧಾನಿ ಮೋದಿ ಮಾತಿನಿಂದ 30 ಲಕ್ಷ ಕೋಟಿ ರೂ ಗಳನ್ನು ಸಾಮಾನ್ಯ ಭಾರತೀಯರು ನಷ್ಟ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಖಾತೆ ಹಂಚಿಕೆಗೆ ಲಕ್ಷ್ಮಣ ರೇಖೆ ಎಳೆದ ಬಿಜೆಪಿ; ಯಾರಿಗೆ, ಯಾವ ಮಂತ್ರಿಗಿರಿ?

ಜನರನ್ನು ಮ್ಯಾನಿಪ್ಯುಲೇಟ್ ಮಾಡಲಾಗಿದೆ. ನಾನು ಪ್ರಧಾನಿ, ಅಮಿತ್ ಶಾ ಬಗ್ಗೆ ಆರೋಪ ಮಾಡುತ್ತಿದ್ದೇನೆ. ಎಕ್ಸಿಟ್ ಪೋಲ್ ನ ಮೆಥಡಾಲಜಿ ಏನು? ಯಾವ ಆಧಾರದ ಮೇಲೆ ಮಾಡಲಾಗಿದೆ. ಇದು ಅದಾನಿಗೂ ಮೀರಿದ ಬಹು ದೊಡ್ಡ ಹಗರಣ ಎಂದು ಹೇಳಿದ್ದಾರೆ.

ಪ್ರಜ್ವಲ್‌ ರೇವಣ್ಣಗೆ ಮತ್ತೆ ನಾಲ್ಕು ದಿನ ಎಸ್‌ಐಟಿ ಕಸ್ಟಡಿಯೇ ಗತಿ!

Latest Videos
Follow Us:
Download App:
  • android
  • ios