ಮೂರನೆ ಬಾರಿಗೆ ಅಧಿಕಾರಕ್ಕೇರುವ ಮೂಲಕ ಮೋದಿ ದಾಖಲೆ, ಇಂಡಿಯಾ ಒಕ್ಕೂಟದಲ್ಲಿ ಪುಟಿದೆದ್ದ ಸಂಭ್ರಮ!

ಎನ್‌ಡಿಎ ಮೈತ್ರಿಗೆ 291, ಇಂಡಿಯಾ ಒಕ್ಕೂಟಕ್ಕೆ 234 ಸ್ಥಾನ. ಮೋದಿಗೆ ಮೂರನೇ ಭಾರಿಗೆ ಅಧಿಕಾರ, ಹೊಸ ಜೀವ ಪಡೆದುಕೊಂಡ ಕಾಂಗ್ರೆಸ್, ಈ ಬಾರಿಯ ಲೋಕಸಭಾ ಚುನಾವಣೆಯ ತೀರ್ಪು ನೀಡಿದ ಅಚ್ಚರಿ ಸೇರಿದಂತೆ ಇಂದಿನ ಇಡೀ ದಿನದ ಬೆಳವಣಿಗೆಯ ಪ್ರಮುಖ ಸುದ್ದಿ ನ್ಯೂಸ್ ಹವರ್ ಇಲ್ಲಿದೆ.

Share this Video
  • FB
  • Linkdin
  • Whatsapp

ಲೋಕಸಭಾ ಚುನಾವಣೆ ತೀರ್ಪು ಬಿಜೆಪಿಗೆ ನಿರಾಸೆ ತಂದರೂ 3ನೇ ಬಾರಿಗೆ ಸರ್ಕಾರ ರಚಿಸುತ್ತಿರುವ ಟಾನಿಕ್ ನೀಡಿದೆ. 10 ವರ್ಷದ ಆಡಳಿತದ ಬಳಿಕ ಮತ್ತೆ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗುತ್ತಿದ್ದಾರೆ. ಇತ್ತ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟ ದೇಶಾದ್ಯಂತ ಸಂಭ್ರಮಾಚರಣೆಯಲ್ಲಿದೆ. ಕಾಂಗ್ರೆಸ್ ಮರು ಜೀವ ಪಡೆದುಕೊಂಡಿದ್ದರೆ, ಇಂಡಿಯಾ ಒಕ್ಕೂಟ ಪ್ರಬಲ ಪ್ರತಿಸ್ಪರ್ಧೆ ನೀಡುವಲ್ಲಿ ಯಶಸ್ವಿಯಾಗಿದೆ. ಆಪ್ ಆಟಕ್ಕಂಟು ಲೆಕ್ಕಕ್ಕಿಲ್ಲ ಎಂದಾದರೆ, ಟಿಎಂಸಿ ಬಿಜೆಪಿಯ ಒಟಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದೆ. ಕೆರಳದಲ್ಲಿ ಬಿಜೆಪಿ ಖಾತೆ ತೆರೆದರೆ, ತಮಿಳುನಾಡಿನಲ್ಲಿ ಬಿಜೆಪಿ ಒಂದೂ ಸ್ಥಾನ ಗೆಲ್ಲುವಲ್ಲಿ ವಿಫಲವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಕಳೆದುಕೊಂಡರೆ ಆಂಧ್ರದಲ್ಲಿ ಪಡೆದುಕೊಂಡಿದೆ. 

Related Video