ಮೋದಿ ಮಾತಲ್ಲಿ ವಾಗ್ದಾಳಿ + ವಾಗ್ದಾನ : ವಿಪಕ್ಷಗಳ ಟೀಕೆಗೆ ಮಾತಿನ ಮಿಸೈಲ್ ಉಡಾಯಿಸಿದ ಪ್ರಧಾನಿ..!

ಸಂಸತ್ತಿನಲ್ಲಿ ನರೇಂದ್ರ ಮೋದಿಯವರು ಅಕ್ಷರಷಃ ಅಬ್ಬರಿಸಿದ್ದರು. ತಮ್ಮ ಮೊನಚಾದ ಮಾತಿನ ಮೂಲಕ ಲೋಕಸಭೆಯಲ್ಲೇ ಟೀಕಾಕಾರರಿಗೆ ಮೋದಿ ಉತ್ತರ ಕೊಟ್ಟಿದ್ದರು. ಮೋದಿ ಅವರ ಮಾತಿನಲ್ಲಿ ಇನ್ನೂ ಯಾವೆಲ್ಲಾ ವಿಚಾರಗಳು ಮೊಳಗಿದವು ?ಮೋದಿ ತಗೊಂಡ ಪ್ರತಿಜ್ಞೆ ಎಂಥದ್ದು.? ಇಲ್ಲಿದೆ ಸುವರ್ಣ ಫೋಕಸ್‌ನಲ್ಲಿ ಕಂಪ್ಲೀಟ್ ಹೈಲೆಟ್ಸ್.

Share this Video
  • FB
  • Linkdin
  • Whatsapp

ಸಂಸತ್ತಿನಲ್ಲಿ ನರೇಂದ್ರ ಮೋದಿಯವರು ಅಕ್ಷರಷಃ ಅಬ್ಬರಿಸಿದ್ದರು. ತಮ್ಮ ಮೊನಚಾದ ಮಾತಿನ ಮೂಲಕ ಲೋಕಸಭೆಯಲ್ಲೇ ಟೀಕಾಕಾರರಿಗೆ ಮೋದಿ ಉತ್ತರ ಕೊಟ್ಟಿದ್ದರು. ವಿಪಕ್ಷಗಳ ವಿರುದ್ಧ ಸರಣಿ ಸಿಡಿಗುಂಡು ಹಾರಿಸಿದ್ರು.. ಕುಟುಂಬ ರಾಜಕಾರಣ, ಭ್ರಷ್ಟಾಚಾರ ಪ್ರಸ್ತಾಪಿಸಿ ಅಬ್ಬರಿಸಿದ ಮೋದಿ, ಮತ್ತೊಮ್ಮೆ ನಮ್ಮದೇ ಸರ್ಕಾರ ಅನ್ನೋ ಶಪಥ ಮಾಡಿದ್ರು. ತುಂಬಾ ಪ್ರಮುಖವಾದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟ 400ರ ಗಡಿ ದಾಟುತ್ತೆ ಅನ್ನೋದನ್ನ ಮಾತ್ರ ಹೇಳಿಲ್ಲ. ಕಾಂಗ್ರೆಸ್ ನಾಯಕರ, ಅದ್ರಲ್ಲೂ ಮಾಜಿ ಪ್ರಧಾನಿಗಳಾಗಿದ್ದ ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿಯವರ ಪ್ರಸ್ತಾಪ ಮಾಡಿ ಕಾಂಗ್ರೆಸ್ ಮೇಲೆ ಹರಿಹಾಯ್ದರು.ಮೋದಿ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಪಕ್ಷದ ಮೇಲೆ ಪ್ರಬಲ ದಾಳಿ ಮಾಡಲೇ ಬೇಕು ಅನ್ನೋ ಸಿದ್ಧತೆಯಲ್ಲಿ ಮೋದಿ ಬಂದಂತಿತ್ತು. ಅವರ ಮಾತಿನಲ್ಲಿ ಇನ್ನೂ ಯಾವೆಲ್ಲಾ ವಿಚಾರಗಳು ಮೊಳಗಿದವು ಮೋದಿ ತಗೊಂಡ ಪ್ರತಿಜ್ಞೆ ಎಂಥದ್ದು.? ಇಲ್ಲಿದೆ ಸುವರ್ಣ ಫೋಕಸ್‌ನಲ್ಲಿ ಕಂಪ್ಲೀಟ್ ಹೈಲೆಟ್ಸ್.

Related Video