Asianet Suvarna News Asianet Suvarna News

ರಾಹುಲ್ ಗಾಂಧಿ ಗೆಲುವಿಗೆ ಬಿಜೆಪಿ ಒಳಜಗಳವೇ ಪ್ಲಸ್ ಆಗುತ್ತಾ..?

ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ರಾಯ್‌ಬರೇಲಿಯಿಂದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗ್ರೌಂಡ್‌ ರಿಪೋರ್ಟ್‌. ರಾಹುಲ್ ಗಾಂಧಿ ಗೆಲುವಿಗೆ ಬಿಜೆಪಿ ಒಳಜಗಳವೇ ಪ್ಲಸ್ ಆಗುತ್ತಾ ಎನ್ನುವ ಪ್ರಶ್ನೆಗಳು ದೊಡ್ಡ ಮಟ್ಟದಲ್ಲಿ ಎದ್ದಿವೆ.

ಬೆಂಗಳೂರು (ಮೇ.18): ಉತ್ತರ ಪ್ರದೇಶದ ಕಾಂಗ್ರೆಸ್‌ ಭದ್ರಕೋಟೆ ರಾಯ್‌ಬರೇಲಿಯಲ್ಲಿ ಸುವರ್ಣನ್ಯೂಸ್‌ ಬಿಗ್‌ ಗ್ರೌಂಡ್‌ ರಿಪೋರ್ಟ್‌ ನಡೆಸಿದೆ. ಅಂದಾಜಿನ ಪ್ರಕಾರ  ರಾಹುಲ್ ಗಾಂಧಿ ಗೆಲುವಿಗೆ ಬಿಜೆಪಿ ಒಳಜಗಳವೇ ಪ್ಲಸ್ ಆಗಬಹುದು ಎನ್ನಲಾಗಿದೆ.

ಇನ್ನು ರಾಯ್ ಬರೇಲಿಯಲ್ಲಿ ಅಣ್ಣನ ಗೆಲುವಿಗೆ ತಂಗಿಯ ಪ್ರತಿಜ್ಞೆ ಇದೆ. ಅದಕ್ಕಾಗಿ ಕ್ಷೇತ್ರದಲ್ಲಿ ಫುಲ್‌ ಆಕ್ಟೀವ್‌ ಆಗಿ ಪ್ರಚಾರ ಮಾಡುತ್ತಿದ್ದಾರೆ. ಅದರೊಂದಿಗೆ ದೇಶದ ಘಟಾನುಘಟಿ ನಾಯಕರು ರಾಹುಲ್‌ ಪರವಾಗಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.

ರಾಯ್‌ಬರೇಲಿಯಲ್ಲಿ ರಾಹುಲ್‌ ಗಾಂಧಿಯನ್ನು ಗೆಲ್ಲಿಸಲು ಕಾಂಗ್ರೆಸ್‌ನಿಂದ ಎಲ್ಲ ಅಸ್ತ್ರ ಪ್ರಯೋಗ..!

ಹೀಗಿದ್ದಾಗ  ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆಗೆ ಏನು ಕಾರಣ ಎನ್ನುವ ಪ್ರಶ್ನೆಯೂ ಬಂದಿದೆ. ಕಾಂಗ್ರೆಸ್ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಕೈ ಪಡೆ ಕಸರತ್ತು ನಡೆಸುತ್ತಿದೆ. ತಾತ, ಅಜ್ಜಿ, ಅಮ್ಮನ ಕ್ಷೇತ್ರದಲ್ಲೇ ರಾಹುಲ್ ಗೆಲುವಿನ ಹುಡುಕಾಟದಲ್ಲಿದ್ದಾರೆ. ಕ್ಷೇತ್ರ ಬದಲಾವಣೆ.. ಸೋಲಿನ ಭೀತಿಯೋ.. ಗೆಲುವಿನ ಲೆಕ್ಕಾಚಾರವೋ ಅನ್ನೋದು ಜೂನ್‌ 4ರಂದೇ ಗೊತ್ತಾಗಲಿದೆ.