340 ರೂಮ್ಸ್..2.5 KM ಉದ್ದದ ಕಾರಿಡಾರ್, ರಾಷ್ಟ್ರಪತಿ ಮನೆ ಹೀಗಿದೆ

ದೇಶದ 15ನೇ ರಾಷ್ಟ್ರಪತಿಯನ್ನು (President Of India) ಆಯ್ಕೆ ಮಾಡಲು ದೇಶಾದ್ಯಂತ ಚುನಾಯಿತ ಸಂಸದರು ಮತ್ತು ಶಾಸಕರು ಮತ ಚಲಾಯಿಸಿದ್ದಾರೆ. ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು. ಮತ್ತೊಂದೆಡೆ, ಪ್ರತಿಪಕ್ಷದಿಂದ ಯಶವಂತ್ ಸಿನ್ಹಾ ಅಭ್ಯರ್ಥಿಯಾಗಿದ್ದಾರೆ. 

First Published Jul 19, 2022, 4:43 PM IST | Last Updated Jul 19, 2022, 5:22 PM IST

ದೇಶದ 15ನೇ ರಾಷ್ಟ್ರಪತಿಯನ್ನು (President Of India) ಆಯ್ಕೆ ಮಾಡಲು ದೇಶಾದ್ಯಂತ ಚುನಾಯಿತ ಸಂಸದರು ಮತ್ತು ಶಾಸಕರು ಮತ ಚಲಾಯಿಸಿದ್ದಾರೆ. ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು. ಮತ್ತೊಂದೆಡೆ, ಪ್ರತಿಪಕ್ಷದಿಂದ ಯಶವಂತ್ ಸಿನ್ಹಾ ಅಭ್ಯರ್ಥಿಯಾಗಿದ್ದಾರೆ. 

ಲಂಕಾ ಅಲ್ಲ ಇನ್ನೂ ಒಂದು ಡಜನ್ ದೇಶದಲ್ಲಿ ಆರ್ಥಿಕ ಜ್ವಾಲಾಮುಖಿ ಸ್ಫೋಟ!

ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 10,86,431 ಲಕ್ಷ ಮತಗಳು ಇದ್ದು, ಈ ಪೈಕಿ ಅರ್ಧಕ್ಕಿಂತ ಹೆಚ್ಚು ಪಡೆದವರು ಆಯ್ಕೆಯಾಗುತ್ತಾರೆ. ಪ್ರಾದೇಶಿಕ ಪಕ್ಷಗಳ ಬೆಂಬಲ ಘೋಷಣೆ ಬಳಿಕ ಎನ್‌ಡಿಎ ಅಭ್ಯರ್ಥಿ ಬಳಿ ಈಗಾಗಲೇ 6.67 ಲಕ್ಷ ಮತಗಳು ಇವೆ. ಹೀಗಾಗಿ ದ್ರೌಪದಿ ಅವರು ಮೂರನೇ ಎರಡರಷ್ಟುಬಹುಮತದೊಂದಿಗೆ ಆಯ್ಕೆಯಾದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ. ಜು.21ರಂದು ಮತಗಳ ಎಣಿಕೆ ನಡೆಯಲಿದ್ದು, ನೂತನ ರಾಷ್ಟ್ರಪತಿ ಜು.25ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಭಾರತದಲ್ಲಿ ರಾಷ್ಟ್ರಪತಿ ಜೀವನ ಹೇಗಿರುತ್ತೆ..? ಸರ್ಕಾರದಿಂದ ದೇಶದ ಮೊದಲ ಪ್ರಜೆಗೆ ಸಿಗುವ ಸೌಲಭ್ಯಗಳು ಎಂಥದ್ದು..? ಲೈಫ್ ಆಫ್ ಪ್ರೆಸಿಡೆಂಟ್ ಹೇಗಿರಲಿದೆ..? ಅವರ ಸಂಬಳ ಎಷ್ಟಿರುತ್ತೆ..? ಇದೆಲ್ಲದರ ಮಾಹಿತಿ ಇಲ್ಲಿದೆ ನೋಡಿ.