Wayanad Landslide: ದೇವರನಾಡಿಗೆ ದೇವರೇ ಗತಿ!
ರಣ ಮಳೆಯ ರಕ್ಕಸ ಅಟ್ಟಹಾಸ ಒಂದು ಕಡೆ, ಬಾಯ್ತೆರೆದು ಅಬ್ಬರಿಸಿದ ಭೂಮಿಯ ಆಗ್ರಹ ಇನ್ನೊಂದು ಕಡೆ.. ಕೇರಳದ ಈ ಸರಣಿ ಭೂಕುಸಿತ ಪ್ರಾಣಭಯವನ್ನೇ ಸೃಷ್ಟಿಸಿದೆ..
ಬೆಂಗಳೂರು (ಜು.31): ಕೇರಳದಲ್ಲಿ ಸರಣಿ ಭೂಕುಸಿತಕ್ಕೆ ಈವರೆಗೂ 200 ಮಂದಿ ಬಲಿಯಾಗಿದ್ದಾರೆ. ಪ್ರವಾಹದ ನೀರಿನಲ್ಲಿ ಶವಗಳು ತೇಲಿಬರುತ್ತಿದೆ. ವಯನಾಡ್‌ನ ಘಟನೆ ದೇಶವನ್ನೇ ದಿಗ್ಭ್ರಾಂತಗೊಳಿಸಿದೆ ಎಂದರೂ ತಪ್ಪಲ್ಲ.
ಪ್ರವಾಹ ಜಲಕ್ಕೆ ನೂರಾರು ಮಂದಿ ಬಲಿಯಾದ ವರದಿ ಬರುತ್ತಿವೆ. ಸಾವು ನೋವುಗಳ ಸಂಖ್ಯೆ ಇನ್ನಷ್ಟು ಏರಬಹುದು ಎಂದೂ ಹೇಳಲಾಗುತ್ತಿದೆ. ಈ ಘಟನೆ ಮಹಾದುರಂತದ ಸುಳಿವು ಕೊಟ್ಟಿದೆಯಷ್ಟೆ, ಮುಂದೆ ಮಹಾಕಂಟಕವೇ ಕಾದಿದೆ ಎಂದು ಹೇಳಲಾಗ್ತಿದೆ.
Wayanad Landslide: 200ರ ಗಡಿ ದಾಟಿದ ಸಾವಿನ ಸಂಖ್ಯೆ, ಭಾರೀ ಮಳೆಯ ನಡುವೆ ಮುಂದುವರಿದ ರಕ್ಷಣಾ ಕಾರ್ಯ
ಕೇರಳ ಅಂದ್ರೆ, ಸೌಂದರ್ಯಕ್ಕೆ ಮತ್ತೊಂದು ಹೆಸರು ಅನ್ನೋ ಹಾಗಿತ್ತು.. ಆದ್ರೆ ಈಗ, ಅದೇ ಕೇರಳ ಪ್ರಕೃತಿಯ ರೌದ್ರ ಪ್ರತಾಪಕ್ಕೆ ಬೆಚ್ಚಿಬಿದ್ದಿದೆ.. ನೂರಾರು ಜೀವಗಳ ಬಲಿಯಾಗಿದೆ.. ಈ ಅನಾಹುತದ ಪರಿಣಾಮವೇನು? ಮುಂದಿನ ಕತೆ ಏನು? ಇಲ್ಲಿದೆ ನೋಡಿ ಪೂರ್ತಿ ವಿವರ..