ಕೊರೋನಾ ಸೋಂಕಿತರಿಗೆ ಕೇರಳದಲ್ಲಿ ಪ್ಲಾಸ್ಮಾ ಚಿಕಿತ್ಸೆ, 3-7 ದಿನದಲ್ಲಿ ಗುಣಮುಖ
ಕೊರೋನಾ ವೈರಸ್ ದೇಶದಲ್ಲಿ ದಿನೇ ದಿನೇ ವ್ಯಾಪಕವಾಗುತ್ತಿರುವಾಗಲೇ ಸೋಂಕಿನಿಂದ ಬಳಲುತ್ತಿರುವವರಿಗೆ ಪ್ಲಾಸ್ಮಾ ಥೆರಪಿ ನೀಡಲು ಕೇರಳ ಸರ್ಕಾರಕ್ಕೆ ಭಾರತೀಯ ವೈದ್ಯಕೀಯ ಮಂಡಳಿ ಅನುಮತಿ ನೀಡಿದೆ.
ತಿರುವನಂತಪುರಂ(ಏ.10): ಕೊರೋನಾ ವೈರಸ್ ದೇಶದಲ್ಲಿ ದಿನೇ ದಿನೇ ವ್ಯಾಪಕವಾಗುತ್ತಿರುವಾಗಲೇ ಸೋಂಕಿನಿಂದ ಬಳಲುತ್ತಿರುವವರಿಗೆ ಪ್ಲಾಸ್ಮಾ ಥೆರಪಿ ನೀಡಲು ಕೇರಳ ಸರ್ಕಾರಕ್ಕೆ ಭಾರತೀಯ ವೈದ್ಯಕೀಯ ಮಂಡಳಿ ಅನುಮತಿ ನೀಡಿದೆ.
ಇದರೊಂದಿಗೆ ಇಂಥ ಚಿಕಿತ್ಸೆ ನೀಡಲು ಅನುಮತಿ ಪಡೆದ ದೇಶದ ಮೊದಲ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ. ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ರೂಪುಗೊಂಡಿರುತ್ತದೆ.
ಪತ್ರಕರ್ತನ ಸಜೆಷನ್‌ಗೆ ಓಕೆ ಎಂದ ಆನಂದ್ ಮಹೀಂದ್ರ, ಊಟಕ್ಕೆ ಬಾಳೆ ಎಲೆ..!
ಅಂತಹ ವ್ಯಕ್ತಿಯ ರಕ್ತದಿಂದ ಪ್ಲಾಸ್ಮಾ ಕಣಗಳನ್ನು ಪಡೆದು ಸೋಂಕಿತ ಅಥವಾ ಸೋಂಕಿನ ಸಂಭಾವ್ಯತೆ ಇರುವ ವ್ಯಕ್ತಿಯ ರಕ್ಷಕ್ಕೆ ಸೇರಿಸಿದರೆಆತನಲ್ಲೂ ರೋಗ ನಿರೋಧಕ ಶಕ್ತಿ ರೂಪುಗೊಂಡು 3ರಿಂದ 7 ದಿನದಲ್ಲಿ ರೋಗ ನಿವಾರಣೆಯಾಗುತ್ತದೆ.