ಮಂದಿರ-ಮಸೀದಿಗೆ ಒಂದೇ ಪ್ರವೇಶ ದ್ವಾರ, ಮುಸ್ಲಿಮರ ರ‍್ಯಾಲಿಗೆ ಸಿಹಿ ಹಂಚಿದ ದೇವಸ್ಥಾನ ಸಮಿತಿ!

ಕೇರಳದ ಕೊಲ್ಲಂ ಜಿಲ್ಲೆ ಸೌಹಾರ್ಧತೆ ಮೂಲಕ ವಿಶ್ವಕ್ಕೆ ಮಹತ್ವದ ಸಂದೇಶ ನೀಡಿದೆ. ಇಲ್ಲಿ ಮಸೀದಿ ಹಾಗೂ ಮಂದಿರಕ್ಕೆ ಒಂದೇ ಪ್ರವೇಶ ದ್ವಾರ ಮಾಡಲಾಗಿದೆ. ಇಷ್ಟೇ ಅಲ್ಲ ಮುಸ್ಲಿಮರ ನಬಿ ದಿನಕ್ಕೆ ದೇವಸ್ಥಾನ ಸಮಿತಿ ಸದಸ್ಯರು ಸಿಹಿ ಹಂಚಿ ಸ್ವಾಗತ ನೀಡಿದ್ದಾರೆ. ಈ ಧಾರ್ಮಿಕ ಭ್ರಾತೃತ್ವದ ಕ್ಷಣಗಳ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಕೊಲ್ಲಂ(ಸೆ.28) ಕೇರಳ ಕೊಲ್ಲಂ ಜಿಲ್ಲೆಯ ಅಂಚಲ್ ಧಾರ್ಮಿಕ ಭ್ರಾತೃತ್ವಕ್ಕೆ ಸಾಕ್ಷಿಯಾಗಿದೆ. ಕೇರಳದಲ್ಲಿ ರಾಜ್ಯಾದ್ಯಂತ ಮುಸ್ಲಿಂ ಸಮುದಾಯ ಪ್ರವಾದಿ ಮೊಹಮ್ಮದ್ ಜನ್ಮದಿನವನ್ನು ನಬಿ ದಿನಂ ಎಂದು ಆಚರಿಸುತ್ತಿದೆ. ಇಲ್ಲಿ ಮಸೀದಿ ಹಾಗೂ ಶಿವಪುರಂ ಶ್ರೀ ಮಹಾದೇವ ದೇವಸ್ಥಾನಕ್ಕೆ ಒಂದೇ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗಿದೆ. ಪ್ರವೇಶ ದ್ವಾರದ ಬಳಿಯೇ ಮಂದಿರ ಹಾಗೂ ಮಸೀದಿಯ ಆಕೃತಿ ಕೆತ್ತನೆ ನಿರ್ಮಾಣ ಮಾಡಲಾಗಿದೆ. ಇನ್ನು ನಬಿ ದಿನಂ ಆಚರಣೆ ಅಂಗವಾಗಿ ಮುಸ್ಲಿಮ್ ಸಮುದಾಯವರು ಮೆರವಣಿಗೆ ಮೂಲಕ ಸಾಗಿಬಂದರೆ ಹಿಂದೂ ದೇವಸ್ಥಾನ ಸಮಿತಿ ಸದಸ್ಯರು ಸಿಹಿ ಹಂಚಿ ಸ್ವಾಗತ ಕೋರಿದ್ದಾರೆ. 

Related Video