ಕೊರೋನಾಕ್ಕೆ ಕೇರಳ ಸವಾಲು, ಬ್ರೇಕ್ ದಿ ಚೈನ್..ನಾವಿರ್ತೇವೆ ಮಾಮೂಲು!
ಮುಗಿಯದ ಕೊರೋನಾ ಕಾಟ/ ಕೇರಳ ಸರ್ಕಾರದ ಮಾದರಿ ನಡೆ/ ಬ್ರೇಕ್ ದಿ ಚೈನ್ ಕ್ಯಾಂಪೇನ್/ ಸಾರ್ವಜನಿಕ ಸ್ಥಳದಲ್ಲಿ ಕೈ ತೊಳೆದುಕೊಳ್ಳುವ ವ್ಯವಸ್ಥೆ
ತಿರುವನಂತಪುರಂ(ಮಾ. 17) ಸದ್ಯಕ್ಕೆ ಕೊರೋನಾ ಬಿಟ್ಟರೆ ಬೇರೆ ಸುದ್ದಿ ಇಲ್ಲ. ಕೇರಳ ಸರ್ಕಾರ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಜಾಗೃತಿ ಮೂಡಿಸುವಲ್ಲಿ ಒಂದು ಹೆಜ್ಜೆ ಮುಂದಿದೆ.
ಭಾರತದ ಬೇಸಿಗೆಯಲ್ಲಿ ಕೊರೋನಾ ಬದುಕಲ್ಲ ಎಂದಿದ್ದ ಡಾಕ್ಟರ್‌ಗೆ ಎಂಥಾ ಸ್ಥಿತಿ ಬಂತು!
ಬ್ರೇಕ್ ದ ಚೈನ್ ಹೆಸರಿನಲ್ಲಿ ಕ್ಯಾಂಪೇನ್ ಶುರು ಮಾಡಿದೆ. ಇದೊಂದು ಎಲ್ಲರೂ ಕೈ ತೊಳೆದುಕೊಳ್ಳುವ ಅಭಿಯಾನ. ರೈಲ್ವೆ ನಿಲ್ದಾಣ ಸೇರಿದಂತೆ ಸಾರ್ವಜನಿಕರು ಸೇರುವ ಸ್ಥಳಗಳ ಪ್ರವೇಶ ಮತ್ತು ನಿರ್ಗಮನ ದ್ವಾರದಲ್ಲಿ ಕೇರಳ ಸರ್ಕಾರ ಕೊಳಾಯಿ ಮತ್ತು ಸಾನಿಟೈಸರ್ ಗಳನ್ನು ಇಟ್ಟಿದೆ. ಎಂಥ ಮಾದರಿ ಕೆಲಸ ಅಲ್ಲವೇ?