ಮುಂಬೈ(ಮಾ. 17) ಕೊರೋನಾ ವೈರಸ್ ಗೆ ಸಂಬಂಧಿಸಿ ತಪ್ಪು ಮಾಹಿತಿ ಹರಡಿದ್ದಕ್ಕೆ ಮುಂಬೈನ ವೈದ್ಯರೊಬ್ಬರಿಗೆ ನೊಟೀಸ್ ನೀಡಲಾಗಿದೆ.  ಮಹಾರಾಷ್ಟ್ರ ಮೆಡಿಕಲ್ ಕೌನ್ಸಿಲ್ ವೈದ್ಯರಿಗೆ ನೊಟೀಸ್ ನೀಡಿದೆ. 

ಚೀನಾದಿಂದ ಬಂದ ಈ ವೈರಸ್ ಭಾರತದ ವಾತಾವರಣದಲ್ಲಿ ಅದರಲ್ಲೂ ಬೇಸಿಗೆಯಲ್ಲಿ ಬದುಕುವುದು ಅಸಾಧ್ಯ ಎಂದು ವೈದ್ಯರು ಹೇಳಿದ್ದರು. ಈ ಬಗ್ಗೆ ವೈದ್ಯ ಡಾ. ಅನುಲ್ ಪಾಟೀಲ್ ಬಳಿ ವಿವರಣೆ ಕೇಳಿದ್ದು ವೈರಸ್ ಬದುಕುವುದಿಲ್ಲ ಎಂಬ ಬಗ್ಗೆ ಯಾವುದಾದರೂ ಆಧಾರ ನಿಮ್ಮ ಬಳಿ ಇದೇಯಾ ಎಂದು ಕೇಳಿದ್ದಾರೆ.

ಡಾಲಿ VS ಸೂಲಿಬೆಲೆ; ಸೋಶಿಯಲ್ ಮೀಡಿಯಾ ಉಪ್ಪು, ಖಾರ!

ಕೇಂದ್ರ ಸರ್ಕಾರದ ನಿರ್ದೇಶನದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಸರಿಯಾದ ವಿವರಣೆ ನೀಡಲು ತಿಳಿಸಿದ್ದೇವೆ  ಎಂದು ಎಂಎಂಸಿ ಅಧ್ಯಕ್ಷ ಶಿವಕುಮಾರ್ ಉಟ್ಟೇಕರ್ ತಿಳಿಸಿದ್ದಾರೆ.

ಭಾರತದ ಮಟ್ಟಿಗೆ ಹೇಳುವುದಾದರೆ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಒಂದು ಕಡೆ ಆತಂಕ ಇದ್ದರೆ ಇನ್ನೊಂದು ಕಡೆ ಏನು ಮಾಡಬೇಕು ಎಂದು ಸರ್ಕಾರಗಳು ಚಿಂತಿಸುತ್ತ ಸರಕ್ಷಿತ ಕ್ರಮ ಎದುರಿಸಲು ಮುಂದಾಗಿವೆ.