Kerala Govt in Crisis: ದೇಶದಲ್ಲಿ ಆರ್ಥಿಕ ದಿವಾಳಿಯತ್ತ ಕೇರಳ ಹೆಜ್ಜೆ: ಕೇಂದ್ರ ಕೊಟ್ಟ ಸಾಲ ದುರುಪಯೋಗ ಮಾಡಿಕೊಂಡಿತಾ ?

ಸಾಲ ಕೊಡುವುದನ್ನು ನಿಲ್ಲಿಸಿದರ ಕೇಂದ್ರ ಸರ್ಕಾರ 
ಸಾಲಕ್ಕಾಗಿ ಸುಪ್ರೀಂ ಮೆಟ್ಟಿಲು ಹತ್ತಿದ್ದ ಕೇರಳ ಸರ್ಕಾರ
ಅಶಿಸ್ತಿನ ಆರ್ಥಿಕ ಆಡಳಿಕ್ಕೆ ಛೀಮಾರಿ ಹಾಕಿದ ಸುಪ್ರೀಂ

First Published Apr 5, 2024, 5:46 PM IST | Last Updated Apr 5, 2024, 5:46 PM IST

ದೇವರ ನಾಡೀಗ ಸಾಲದ ನಾಡಾಗಿದೆ. ಕೇರಳದಲ್ಲಿ(Kerala) ಈಗ ಸಾಲದಲ್ಲಿ ಸರ್ಕಾರ ನಡೆಯುತ್ತಿದೆ. ಇಲ್ಲಿವರೆಗೂ ಮಿತಿ ಮೀರಿದ ಸಾಲ ಮಾಡಿದ ಕೇರಳ ಸರ್ಕಾರ ಮತ್ತಷ್ಟು ಸಾಲಬೇಕೆಂದು ಕೇಂದ್ರದ ಮೊರೆ ಹೋಗಿತ್ತು. ಆದ್ರೆ ಹೆಚ್ಚಿನ ಸಾಲ(Debt) ಕೊಡಲು ಕೇಂದ್ರ ಒಪ್ಪಲಿಲ್ಲ. ಆಗ ಕೇಂದ್ರ ಸರ್ಕಾರದ(Central Government)ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕೇರಳ ಸರ್ಕಾರಕ್ಕೆ ಈಗ ಸುಪ್ರೀಂ ಕೋರ್ಟ್(Supreme court)ಸಹ ಉಗಿದು ಕಳುಹಿಸಿದೆ. ಕೇರಳ ಈಗ ಕಷ್ಟದ ಸುಳಿಯಲ್ಲಿ ಒದ್ದಾಡುತ್ತಿದೆ. ಕೇರಳ ಸರ್ಕಾರ ವಿಪರೀತ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಈಗಾಗ್ಲೇ ಕೇರಳ ಸರ್ಕಾರ ಆದಾಯಕ್ಕಿಂತ ಮೂರು ಪಟ್ಟು ಸಾಲವನ್ನು ಮಾಡಿಯಾಗಿದೆ. ಕೇರಳ ಸರ್ಕಾರದ ಅಶಿಸ್ತಿನ ಆರ್ಥಿಕತೆಗೆ ಸುಪ್ರಿಂ ಕೋರ್ಟ್ ಛೀಮಾರಿ ಹಾಕಿ ಕಳುಹಿಸಿದೆ. ಬೇಕೆಂದಾಗೆಲ್ಲ ಕೇಂದ್ರವನ್ನು ಸಾಲ ಕೇಳ್ತಿದ್ದ ಕೇರಳ ಸರ್ಕಾರಕ್ಕೆ ಈಗ ಕೇಂದ್ರ ಸರ್ಕಾರ ಸಹ ಸಾಲ ಕೊಡೋದಿಲ್ಲವೆಂದು ಹೇಳಿದೆ. ಹೀಗಾಗಿ ಸಧ್ಯಕ್ಕೆ ಕೇರಳ ಸರ್ಕಾರ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿ ವಿಲ ವಿಲ ಒದ್ದಾಡುತ್ತಿದೆ. 

ಇದನ್ನೂ ವೀಕ್ಷಿಸಿ:  Watch Video: ಚಿನ್ನದ ನಾಡು ಕೋಲಾರದಲ್ಲಿ ಕಾಂಗ್ರೆಸ್ V/S ದೋಸ್ತಿ ಕಾಳಗ! ಕಾಂಗ್ರೆಸ್ ಬಣ ಬಡಿದಾಟ ದೋಸ್ತಿಗೆ ವರವಾಗುತ್ತಾ?