ಪಥಸಂಚಲನದ ವೇಳೆ ನೆತ್ತಿಗೆ ಏರಿದ ಆನೆಯ ಪಿತ್ತ: ಸೈಲೆಂಟ್ ಆಗಿದ್ದ ಗಜ ಏಕಾಏಕಿ ವೈಲೆಂಟ್ ಆಗಿದ್ದೇಕೆ?
ಗಜ.. ಮದಗಜವಾಗಿ ಬಿಟ್ರೆ ಮುಗೀತು ಕಥೆ.. ಆನೆ, ಆಕ್ರೋಶಕ್ಕೆ ಒಳಗಾಗಿ ಬಿಟ್ರೆ ಎಲ್ಲವೂ ಸರ್ವವಾಶ. ಕುಂಜರನ ಕೋಪಾತಾಪಕ್ಕೆ ಅದುರಿ ಹೋಗುತ್ತೆ ಆಕಾಶ, ಭೂಮಿ. ಸಿಂಗಾರಗೊಂಡು ಪೂಜೆಗೆ ನಿಂತಿರೋ ಆನೆಗಳು ಯಾವಾಗ ಸಿಡಿದೇಳ್ತವೋ ಗೊತ್ತಿಲ್ಲ.
ಗಜ.. ಮದಗಜವಾಗಿ ಬಿಟ್ರೆ ಮುಗೀತು ಕಥೆ.. ಆನೆ, ಆಕ್ರೋಶಕ್ಕೆ ಒಳಗಾಗಿ ಬಿಟ್ರೆ ಎಲ್ಲವೂ ಸರ್ವವಾಶ. ಕುಂಜರನ ಕೋಪಾತಾಪಕ್ಕೆ ಅದುರಿ ಹೋಗುತ್ತೆ ಆಕಾಶ, ಭೂಮಿ. ಸಿಂಗಾರಗೊಂಡು ಪೂಜೆಗೆ ನಿಂತಿರೋ ಆನೆಗಳು ಯಾವಾಗ ಸಿಡಿದೇಳ್ತವೋ ಗೊತ್ತಿಲ್ಲ. ಅವು ಆರ್ಭಟಿಸೋಕೆ ಶುರು ಮಾಡಿದ್ರೆ, ಸಂಭ್ರಮದ ಜಾಗದಲ್ಲಿಯೇ ಭಯ, ಆತಂಕದ ಕಾರ್ಮೋಡ ಆವರಿಸುತ್ತೆ. ಆ ಆರ್ಭಟ ಇನ್ನೂ ವಿಕೋಪಕ್ಕೆ ಹೋದ್ರೆ, ಅಲ್ಲಿ ಸೂತಕದ ಛಾಯೆಯೂ ವ್ಯಾಪಿಸಿ ಬಿಡುತ್ತೆ. ಕೇರಳದಲ್ಲಿ ನಡೆದಿರೋ ಅದೊಂದು ದುರ್ಘಟನೆ, ಈ ಹಿಂದೆ ನಡೆದಿದ್ದ ಅಂತಹುದೇ ದುರ್ಘಟನೆಗಳನ್ನ ನೆನಪಿಸುವಂತೆ ಮಾಡಿದೆ. ಇದೇ ಈ ಹೊತ್ತಿನ ವಿಶೇಷ ಪಿತ್ತಮತ್ತ ಗಜಾಕ್ರೋಶ. ಅಲಂಕಾರಗೊಂಡು ಪೂಜೆಗೆ ನಿಂತಿದ್ರೂ ಆಕ್ರೋಶದಿಂದ ಹೂಃಕರಿಸಿ ಆರ್ಭಟಿಸಿರೋ ಇನ್ನಷ್ಟು ಆನೆಗಳ ಸ್ಟೋರಿಯನ್ನ ತೋರಿಸ್ತೀವಿ. ಆನೆ ಕೆರಳಿದ್ರೆ ಅಲ್ಲಿ ಕಥೆ ಮುಗೀತು..
ಅದನ್ನ ಕಂಟ್ರೋಲ್ಗೆ ತೋರೋದು ಬಹಳ.. ಬಹಳ ಕಷ್ಟ. ಅಷ್ಟೊತ್ತಿಗಾಗಲೇ ಎಷ್ಟು ಅನಾಹುತಗಳು ಆಗಿರ್ಬೇಕು ಅಷ್ಟು ಆಗಿರುತ್ವೆ. ಧಾರ್ಮಿಕ ಕಾರ್ಯಕ್ಕೆ ನಿಂತಿದ್ದ ಆನೆಗಳ ಮಧ್ಯೆಯೇ ನಡೆದ ದಂಗಲ್ ವಿಡಿಯೋ ಜೊತೆಗೆ, ಮತ್ತೊಂದು ಕಡೆ ಹೂಃಕರಿಸಿ ನುಗ್ಗಿದ ಆನೆ ಏನೆಲ್ಲಾ ಅವಾಂತರಗಳನ್ನ ಸೃಷ್ಟಿಸಿತ್ತು ಅನ್ನೋದನ್ನ ತೋರಿಸ್ತೀವಿ ನೋಡಿ. ಪಳಗಿಸಿ, ಪಾಠ ಹೇಳಿಕೊಟ್ಟ ಆನೆಗಳೇ ಹೀಗೆ ಆಡ್ಬೇಕಾದ್ರೆ, ಕಾಡಾನೆಗಳು ನಾಡಿಗೆ ಎಂಟ್ರಿ ಕೊಟ್ರೆ, ಅಲ್ಲಿ ನರಕದರ್ಶನವೇ ಆಗುತ್ತೆ. ಅಂತಹ ಇನ್ನೊಂದಿಷ್ಟು ವಿಡಿಯೋಗಳನ್ನ ತೋರಿಸ್ತೀವಿ. ರಸ್ತೆ ಮಧ್ಯೆ ನಿಂತ್ಕೊಂಡು ಕಾಡಾನೆಗಳು ಕೊಡೋ ಕ್ವಾಟ್ಲೆಗಳು ಅಷ್ಟಿಷ್ಟಲ್ಲ. ಹಾಗೇ ಅದೇ ಕಾಡಾನೆಗಳು ನಾಡಿಗೆ ನುಗ್ಗಿದ್ರೆ, ಅಲ್ಲಿ ನರಕ ದರ್ಶನವೇ ಆಗುತ್ತೆ. ಎದೆ ಝಲ್ ಎನ್ನಿಸುವಂತಹ ಕಾಡಾನೆಗಳ ವಿಡಿಯೋಗಳನ್ನ ನೋಡ್ಕೊಂಡು ಬರೋಣ ಬನ್ನಿ.