ಸಿದ್ದರಾಮಯ್ಯ ಸಂಜೆ 6 ಗಂಟೆ ಮೇಲೆ ಎಲ್ ಹೋಗ್ತಾರೆ? ಹೆಚ್‌ಡಿಕೆ ತಿರುಗೇಟು!

ಸಿದ್ದರಾಮಯ್ಯ ಆರೋಪಕ್ಕೆ ಹೆಚ್‌ಡಿ ಕುಮಾರಸ್ವಾಮಿ ತಿರುಗೇಟು, ರಾಮನಗರವನ್ನು ಬೆಂಗಳೂರಿಗೆ ಸೇರಿಸಲು ಡಿಕೆ ಶಿವಕುಮಾರ್ ಪ್ಲಾನ್ ಸೇರಿದಂತೆ ಇಂದಿನ ಇಡೀದ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Oct 24, 2023, 10:53 PM IST | Last Updated Oct 24, 2023, 10:53 PM IST

ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಕುಮಾರಸ್ವಾಮಿ ತಾಜ್ ವೆಸ್ಟ್‌ಎಂಡ್‌ ಹೊಟೆಲ್‌ನಲ್ಲಿ ಕುಳಿತು ಆಡಳಿತ ನಡೆಸಿದ್ದಾರೆ ಅನ್ನೋ ಆರೋಪಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ವೆಸ್ಟ್ ಎಂಡ್‌ ಆರೋಪಕ್ಕೆ ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ನಾನು ಬೇರೆ ವ್ಯವಹಾರಕ್ಕೆ ಹೋಗಿದ್ದರೆ ತನಿಖೆ ಮಾಡಲಿ, ಹೊಟೆಲ್‌ನಲ್ಲಿ ಸಿಸಿಟಿವಿಗಳಿವೆ. ತನಿಖೆ ಮಾಡಿ ಸತ್ಯ ಬಹಿರಂಗಪಡಿಸಲಿ ಎಂದು ಹೆಚ್‌ಡಿಕೆ ಹೇಳಿದ್ದಾರೆ. ಇದೇ ವೇಳೆ ಇದೇ ಸಿದ್ದರಾಮಯ್ಯ ಸಂಜೆ 6 ಗಂಟೆ ಮೇಲೆ ಎಲ್ಲೆಲ್ಲಿ ಹೋಗ್ತಾರೆ? ಅದನ್ನ ನಾವು ಚರ್ಚೆ ಮಾಡ್ತೀವಾ ಎಂದು ತಿರುಗೇಟು ನೀಡಿದ್ದಾರೆ. ಹೆಚ್‌ಡಿ ಮಾತು ಇದೀಗ ಹೊಸ ಸಂಚಲನ ಸೃಷ್ಟಿಸಿದೆ.