NewsHour ಕೆಜಿ ಹಳ್ಳಿ, ಡಿಜೆ ಹಳ್ಳಿ ರೀತಿಯಲ್ಲಿ ಮತ್ತೊಂದು ಗಲಭೆಗೆ ಸಂಚು, 14 ಮಂದಿ ಅರೆಸ್ಟ್!
ಸದನದಲ್ಲಿ ಪೋಸ್ಟರ್ ರಾಜಕೀಯ ಬಲು ಜೋರಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ದಿನಕ್ಕೊಂದು ಪೋಸ್ಟರ್ ಬಿಡುಗಡೆ ಮಾಡುತ್ತಿದ್ದು, ಹೊಸ ರಾಜಕೀಯ ಕೆಸರೆರಚಾಟ ಆರಂಭಿಸಿದ್ದಾರೆ. ಇತ್ತ ಶಂಕಿತರ ಉಗ್ರರ ಬಂಧನ, ಪಿಎಫ್ಐ ಮೇಲಿನ ದಾಳಿ ಪ್ರಕರಣದಲ್ಲಿ ಕೆಲ ಆತಂಕಕಾರಿ ಬೆಳವಣಿಗೆಗಳು ನಡೆದಿದೆ. ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಎನ್ಐಎ ದಾಳಿ ಜೊತೆಗೆ ನಿನ್ನೆ ಬೆಂಗಳೂರು ಪೊಲೀಸರು ಬೆಂಗಳೂರಿನ 19 ಕಡೆಗಳಲ್ಲಿ ದಾಳಿ ಮಾಡಿದೆ. ಈ ವೇಳೆ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ರೀತಿ ಮತ್ತೊಂದು ಗಲಭೆ ಸೃಷ್ಟಿಸಲು ಬಹುದೊಡ್ಡ ಪ್ಲಾನ್ ನಡೆದಿರುವ ವಿಚಾರ ಬಹಿರಂಗವಾಗಿದೆ. ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ 19 ಕಡೆಗಳಲ್ಲಿ 19 ಶಂಕಿತರನ್ನು ಗುರುತಿಸಿದ ಬೆಂಗಳೂರು ಪೊಲೀಸರು ದಾಳಿ ನಡೆಸಿದ್ದಾರೆ. ಇದರ ಪೈಕಿ 14 ಶಂಕಿತರನ್ನು ಪೊಲೀಸರು ಅರೆಸ್ಟ್ ಮಾಡಿದ್ದರೆ, ಐವರು ಪರಾರಿಯಾಗಿದ್ದಾರೆ. ಇವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ 10 ದಿನಗಳ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇನ್ನು ಪಿಎಫ್ಐ ದಾಳಿ ವಿರೋಧಿಸಿ ಪ್ರತಿಭಟನೆ, ಶಿವಮೊಗ್ಗದಲ್ಲಿ ಅರೆಸ್ಟ್ ಆಗಿರುವ ಶಂಕಿತ ಉಗ್ರರ ಬಂಧನ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.