Maharashtra Winter session: ಕರ್ನಾಟಕ ಸಿಎಂಗೆ ಅವರ ಭಾಷೆಯಲ್ಲೇ ಉತ್ತರಿಸಿ: ಮಹಾ ಶಾಸಕನ ಉದ್ಧಟತನ

ಕರ್ನಾಟಕ ಸಿಎಂಗೆ ಮಸ್ತಿ ಹೆಚ್ಚಾಗಿದ್ದರೆ ಅವರ ಭಾಷೆಯಲ್ಲೇ ಉತ್ತರಿಸಿ ಎಂದು ಕಲಾಪದಲ್ಲಿ ಮಾಜಿ ಸಚಿವ ಜಯಂತ್‌ ಪಾಟೀಲ್‌ ಉದ್ಧಟತನ ತೋರಿದ್ದಾರೆ. 
 

Share this Video
  • FB
  • Linkdin
  • Whatsapp

ಮಹಾರಾಷ್ಟ್ರ ವಿಧಾನಸಭಾ ಕಲಾಪದಲ್ಲಿ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವಮಾನ ಮಾಡಲಾಗಿದೆ. ಕಲಾಪದಲ್ಲಿ ಮಾಜಿ ಸಚಿವ ಜಯಂತ್‌ ಪಾಟೀಲ್‌ ಉದ್ಧಟತನ ತೋರಿದ್ದಾರೆ. ಕರ್ನಾಟಕದಲ್ಲಿ ಮರಾಠಿ ಭಾಷಿಕರು ಸಭೆ ಆಯೋಜಿಸಿದ್ದರು, ಶಾಸಕ ಹಸನ್‌ ಮುಶ್ರಿಫ್‌ ಮೇಲೆ ಲಾಠಿ ಪ್ರಹಾರ ನಡೆಸಿದರು. ಬೆಳಗಾವಿಯಲ್ಲಿ ಮರಾಠಿಗರು ಹೊರಬರದ ಸ್ಥಿತಿ ನಿರ್ಮಾಣವಾಗಿದೆ ಮರಾಠಿಗರಿಗೆ ಉದ್ಧೇಶ ಪೂರ್ವಕವಾಗಿ ಕಿರುಕುಳ ನೀಡಲಾಗ್ತಿದೆ. ಕರ್ನಾಟಕ ಸಿಎಂಗೆ ಅವರದ್ದೇ ಭಾಷೆಯಲ್ಲಿ ಉತ್ತರವನ್ನು ನೀಡಬೇಕು ಎಂದು ಜಯಂತ್‌ ಪಾಟೀಲ್‌ ಹೇಳಿದ್ದಾರೆ. ನಿಮ್ಮ ನೀರು ನಮ್ಮ ಕೈಯಲ್ಲಿದೆ ಎಂದ ಎನ್‌ಸಿಪಿ ನಾಯಕ ಎನ್‌.ಸಿ.ಪಿ ಶಾಸಕ ಹಸನ್‌ ಮುಶ್ರಿಫ್‌ ಮೇಲೆ ಲಾಠಿ ಬೀಸಿದ ಆರೋಪದಲ್ಲಿ ವಿಧಾನಸಭೆಯಲ್ಲಿ ಎನ್‌ ಸಿ ಪಿ ನಿಲುವಳಿ ಸೂಚನೆ ಮಂಡಿಸಿದೆ. ಮಹಾ ಕಲಾಪದಲ್ಲಿ ಶಾಸಕ ಜಯಂತ್‌ ಪಾಟೀಲ್‌ ಉದ್ಧಟತನ ತೋರಿದ್ದು, ಕಲಾಪದಲ್ಲಿ ಸುಳ್ಳು ಮಾಹಿತಿ ನೀಡಿ ರಾಜಕೀಯ ಲಾಭಕ್ಕೆ ಯತ್ನಿಸಿದ್ದಾರೆ.

Related Video