Asianet Suvarna News Asianet Suvarna News

ದಿಢೀರ್ ದೆಹಲಿಗೆ ಹಾರಿದ ಜಾರಕಿಹೊಳಿ; ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ!

Jun 30, 2021, 12:45 AM IST

ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಇತ್ತೀಚೆಗೆ ಕೆಲ ಬಾರಿ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಯಾಗಿದ್ದಾರೆ. ಆದರೆ ಇಂದಿನ ಭೇಟಿ ರಾಜ್ಯ ರಾಜಕೀಯದಲ್ಲಿ ಮಾತ್ರವಲ್ಲ, ಮಹಾರಾಷ್ಟ್ರ ರಾಜಕೀಯದಲ್ಲೂ ಬಿರುಗಾಳಿ ಎಬ್ಬಿಸಿದೆ. ಆರ್‌ಎಸ್ಎಸ್ ಕಚೇರಿಯಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿಯಾಗಿದ್ದಾರೆ. ಇದು ಮಹಾರಾಷ್ಟ್ರ ರಾಜಕೀಯದಲ್ಲೂ ಸಂಚಲನ ಮೂಡಿಸಿದೆ. ಇನ್ನು ಟ್ವಿಟರ್ ಬಳಿಕ ಇದೀಗ ಗೂಗಲ್ ಕೂಡ ಭಾರತದ ಭೂಪಟದಿಂದ ಕಾಶ್ಮೀರ, ಲಡಾಖ್ ತೆಗೆದು ಹಾಕಿದೆ. ಜುಲೈ 5 ರಿಂದ ಅನ್‌ಲಾಕ್ 3.0 ಸೇರಿದಂತೆ ಇಂದಿನ ನ್ಯೂಸ್ ಹವರ್ ಸುದ್ದಿ ಇಲ್ಲಿದೆ.