ಕನ್ನಡದ ಏಕೈಕ ಪ್ರಧಾನಿ ದೇವೇಗೌಡರದ್ದು ಗಂಡೆದೆಯ ಗುಂಡಿಗೆ; ಉಗ್ರರ ಅಗ್ನಿಕುಂಡಕ್ಕೆ ಕಾಲಿಟ್ಟಿದ್ದ ದೊಡ್ಡಗೌಡ್ರು!

ದೇಶದ ಏಕೈಕ ಕನ್ನಡಿಗ ಪ್ರಧಾನಿ ಹೆಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಉಗ್ರರ ಬೆಂಕಿ ಚೆಂಡಿನಂತಿದ್ದ ಕಾಶ್ಮೀರಕ್ಕೆ ಭೇಟಿ ನೀಡುವ ಮೂಲಕ ಗಟ್ಟಿ ಗುಂಡಿಗೆಯನ್ನು ಪ್ರದರ್ಶನ ಮಾಡಿದ್ದರು.

First Published Sep 1, 2024, 1:45 PM IST | Last Updated Sep 1, 2024, 1:45 PM IST

ದೇಶದ ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗ ಹೆಚ್.ಡಿ. ದೇವೇಗೌಡರದ್ದು ನಿಜಕ್ಕೂ ಗಂಡೆದೆಯ ಗುಂಡಿಗೆ ಎಂದೇ ಹೇಳಬಹುದು. ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಉಗ್ರರ ಉಪಟಳದಿಂದಾಗಿ ಅಗ್ನಿಕುಂಡದಂತಿದ್ದ ಕಾಶ್ಮೀರಕ್ಕೆ ಎರೆಡೆರಡು ಬಾರಿ ಭೇಟಿ ನೀಡಿ ಕ್ರಾಂತಿ ಚರಿತ್ರೆಯನ್ನೇ ಸೃಷ್ಟಿಸಿದ್ದಾರೆ. ಎಲ್ಲ ಪ್ರಧಾನಿಗಳು ಕಾಶ್ಮೀರಕ್ಕೆ ಹೋದರೆ ಜೀವಕ್ಕೆ ಉಳಿಗಾಲವಿಲ್ಲ ಎಂಬ ಭಯದಿಂದ ಹಿಂಜರಿಯುತ್ತಿದ್ದ ಭಯದ ವಾತಾವರಣ ಇದ್ದಾಗ. ಅಲ್ಲಿಗೆ ಭೇಟಿ ನೀಡಿದ್ದ ದೇವೇಗೌಡರು ಹೆಚ್ಚು ಭಧ್ರತೆಯನ್ನೂ ಪಡೆಯದೇ ಓಪೆನ್ ಜೀಪಿನಲ್ಲಿ ಕಾಶ್ಮೀರದಲ್ಲಿ ಸುತ್ತಾಡಿದ್ದಾರೆ. ಇದನ್ನು ನೋಡಿದ ದೇಶದ ಜನರು ನಿಜಕ್ಕೂ ದೇವೇಗೌಡರದ್ದು ಗಂಡೆದೆಯ ಗುಂಡಿಗೆಯೇ ಇರಬೇಕು ಎಂದು ಕೊಂಡಾಡಿದ್ದರು.

ಕಳೆದ 27 ವರ್ಷಗಳ ಹಿಂದೆ ಪ್ರಧಾನಮಂತ್ರಿ ಆಗಿದ್ದಾಗ ಕಾಶ್ಮೀರ ಕಣಿವೆಗೆ 2 ಬಾರಿ ಭೇಟಿ ನೀಡಿದ್ದ ದೇವೇಗೌಡರು ಈಗ ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ 92ನೇ ವಯಸ್ಸಿನಲ್ಲಿ ಮತ್ತೆ ಕಣಿವೆ ರಾಜ್ಯಕ್ಕೆ ಹೋಗಿದ್ದಾರೆ. ಶಂಕರಾಚಾರ್ಯ ಬೆಟ್ಟವನ್ನೇರಿ ಶಿವನ ದರ್ಶನ ಪಡೆದಿದ್ದಾರೆ. ಅದು ತಮ್ಮ ಜೀವಮಾನದ ಕನಸಾಗಿತ್ತು ಅಂದಿದ್ದಾರೆ. ಕಾಶ್ಮೀರದಿಂದ ನೇರವಾಗಿ ಹುಟ್ಟೂರಿಗೆ ಬಂದ ದೇವೇಗೌಡರು, ಶ್ರಾವಣಮಾಸದ ಕಡೇ ಶನಿವಾರ ರಂಗನಾಥ ಸ್ವಾಮಿ ದರ್ಶನ ಪಡೆದಿದ್ದಾರೆ. ಈ ವೇಳೆ ತಮ್ಮ ಕಾಶ್ಮೀರ ಭೇಟಿಯ ಬಗ್ಗೆ ದೇವೇಗೌಡರು ಮಾತಾಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ 27 ವರ್ಷಗಳ ಹಿಂದೆ ದೊಡ್ಡ ಕ್ರಾಂತಿಯನ್ನು ಮಾಡಿದ್ದರು.