Asianet Suvarna News Asianet Suvarna News

ಮಹಾತ್ಮ ಗಾಂಧಿ ಸಮಾಧಿಗೆ ವಿಶ್ವ ಗಣ್ಯರಿಂದ ನಮನ: ಖಾದಿ ಶಾಲು ಹಾಕಿ ಸ್ವಾಗತ ಕೋರಿದ ಮೋದಿ

ರಾಜ್‌ಘಾಟ್‌ಗೆ ತೆರಳಿ ಗಣ್ಯರು ಮಹಾತ್ಮಗಾಂಧಿ ಅವರ ಸಮಾಧಿಗೆ ನಮನ ಸಲ್ಲಿಸಿದ್ದಾರೆ. ಈ ವೇಳೆ ಮೋದಿ ಅವರಿಗೆ ಖಾದಿ ಶಾಲು ಹಾಕಿ ಸ್ವಾಗತಿಸಿದ್ದಾರೆ.
 

ನವದೆಹಲಿ: ಭಾರತದ ನಾಯಕತ್ವದಲ್ಲಿ ನಡೆಯುತ್ತಿರೋ ಜಿ-20 ಸಭೆಯಲ್ಲಿ ಉಕ್ರೇನ್ ಯುದ್ದದ ವಿಚಾರ ಚರ್ಚೆ ನಡೆದಿದೆ. ಉಕ್ರೇನ್ ನಲ್ಲಿ ಸಮಗ್ರ ನ್ಯಾಯಯುತ ಮತ್ತು ಶಾಶ್ವತ ಶಾಂತಿ ನಿರ್ಮಾಣಕ್ಕೆ ಕರೆ ನೀಡಲಾಗಿದೆ. ಎರಡನೇ ದಿನದ ಶೃಂಗ ಸಭೆಗೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್(US President Joe Biden) ಗೈರಾಗಲಿದ್ದಾರೆ.ಈಗಾಗ್ಲೇ ಒಂದು ದಿನದ ಶೃಂಗ ಸಭೆಗೆ ಹಾಜರಾಗಿದ್ದಾರೆ. ಮೋದಿ ಜೊತೆಗಿನ ದ್ವಿಪಕ್ಷೀಯ ಸಭೆಯನ್ನು ಸಹ ಬೈಡನ್‌ ಮುಗಿಸಿದ್ದಾರೆ. ಅವರು ರಾಜ್‌ಘಾಟ್‌ನಲ್ಲಿರುವ(Rajghat) ಮಹಾತ್ಮಾ ಗಾಂಧಿಗೆ(Mahatma Gandhi) ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಈ ಕಾರ್ಯಕ್ರಮದ ಬಳಿಕ ಬೆಳಗ್ಗೆ 10.25ಕ್ಕೆ ವಿಯೆಟ್ ನಾಮ್ ಗೆ ಅಮೆರಿಕಾ ಅಧ್ಯಕ್ಷ ಬೈಡೆನ್ ತೆರಳಿದರು. ಹಲವಾರು ನಾಯಕರು ಸಹ ರಾಜ್‌ಘಾಟ್‌ಗೆ ತೆರಳಿ ಗೌರವ ನಮನ ಸಲ್ಲಿಸಿದರು. ಈ ವೇಳೆ ವಿಶ್ವ ನಾಯಕರಿಗೆ ಖಾದಿ ಶಾಲು ಹಾಕಿ, ಖುದ್ದು ಪ್ರಧಾನಿ ಮೋದಿ(Narendra modi) ಸ್ವಾಗತಿಸಿದರು. ಇಂದು ಕೊನೆ ದಿನದ ಜಿ 20 ಶೃಂಗಸಭೆ ನಡೆಯುತ್ತಿದೆ.

ಇದನ್ನೂ ವೀಕ್ಷಿಸಿ:  ಸರ್ವೆ ಮಾಡಿ ಯಾವ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುತ್ತೆ ಅಲ್ಲಿ ಸೀಟು ಕೊಡಿ: ಜಿ.ಟಿ.ದೇವೇಗೌಡ

Video Top Stories