Asianet Suvarna News Asianet Suvarna News

News Hour: ಸೋಮವಾರ ಸುಪ್ರೀಂನಲ್ಲಿ ಆರ್ಟಿಕಲ್ 370 ಭವಿಷ್ಯ!

ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದು ಸರಿಯೇ ಅಥವಾ ತಪ್ಪೇ ಎಂಬುದಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಉತ್ತರ ನೀಡಲಿದೆ..  ಸುಪ್ರೀಂನ ಪಂಚ ಸದಸ್ಯರ ಪೀಠ ಸತತ 16 ದಿನಗಳ ವಾದ- ಪ್ರತಿವಾದಗಳನ್ನ ಆಲಿಸಿದ್ದು... ಡಿಸೆಂಬರ್ 11ಕ್ಕೆ ತನ್ನ ತೀರ್ಪನ್ನ ಕಾದಿರಿಸಿದೆ. 
 

ಬೆಂಗಳೂರು (ಡಿ.9): ಆರ್ಟಿಕಲ್ 370 ರದ್ದು ಮಾಡುತ್ತೇವೆ ಎನ್ನುತ್ತಲೇ ಅಧಿಕಾರ ಹಿಡಿದಿದ್ದ ಬಿಜೆಪಿ.. ತನ್ನ ಎರಡನೇ ಅವಧಿಯಲ್ಲಿ ವಿವಾದಿತ ಕಾಯ್ದೆಗೆ ಇತಿಶ್ರೀ ಹಾಡಿತ್ತು.. ಆಗಸ್ಟ್ 5, 2019ರಂದು ರಾಜ್ಯಸಭೆಯಲ್ಲಿ ನಿರ್ಧಾರ ಪ್ರಕಟಿಸಿದ ಅಮಿತ್ ಶಾ, ಆರ್ಟಿಕಲ್ 370 ರದ್ದು ಮಾಡುವ ಬಿಲ್ ಮಂಡಿಸಿದ್ದರು. ಕಣಿವೆ ರಾಜ್ಯವನ್ನ 2 ಭಾಗಗಳನ್ನಾಗಿ ವಿಂಗಡಿಸಿದ ಕೇಂದ್ರ ಸರ್ಕಾರ. ಲಡಾಖ್ ಭಾಗವನ್ನು ಚುನಾವಣಾ ರಹಿತ ಕೇಂದ್ರಾಡಳಿತ ಪ್ರದೇಶ ಹಾಗೂ ಜಮ್ಮು ಕಾಶ್ಮೀರವನ್ನ ವಿಧಾನಸಭೆ ಒಳಗೊಂಡ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿತು. 

ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಕಾಶ್ಮೀರ ನಾಯಕರು., ಆರ್ಟಿಕಲ್ 370 ರದ್ದು ಸಂವಿಧಾನದ ವಿರುದ್ಧವಾಗಿದೆ ಎನ್ನುತ್ತಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.. ನ್ಯಾಷನಲ್ ಕಾನ್ಫರೆನ್ಸ್ ಸಂಸದ ಮೊಹಮ್ಮದ್ ಅಕ್ಬರ್ ಲೋನ್ ಹಾಗೂ ಇನ್ನಿತರು ಸಲ್ಲಿಸಿದ್ದ ಅರ್ಜಿಗಳನ್ನ ಒಟ್ಟಾಗಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಸತತ 16 ದಿನ, 3606 ನಿಮಿಷ ವಾದ-ಪ್ರತಿವಾದ ಆಲಿಸಿತ್ತು.

ಡಿ.11ಕ್ಕೆ ಜಮ್ಮು ಕಾಶ್ಮೀರದ ಆರ್ಟಿಕಲ್ 370 ರದ್ದು ಭವಿಷ್ಯ, ತೀರ್ಪು ಪ್ರಕಟಿಸಲಿದೆ ಸುಪ್ರೀಂ ಕೋರ್ಟ್!

ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಪಂಚಸದಸ್ಯ ಪೀಠದಲ್ಲಿ ನ್ಯಾಯಾಧೀಶರಾದ ಸಂಜೀವ್ ಖನ್ನಾ, ಎಸ್.ಕೆ ಕೌಲ್, ಬಿ.ಆರ್ ಗವಾಯಿ, ಜೆ.ಸೂರ್ಯ ಕಾಂತ್ರಿದ್ದ ಸೋಮವಾರ ಆರ್ಟಿಕಲ್ 370 ಕುರಿತಂತೆ ಐವರು ನ್ಯಾಯಾಧೀಶರು ಪ್ರತ್ಯೇಕ ತೀರ್ಪು ನೀಡಲಿದ್ದಾರೆ.