ಡಿ.11ಕ್ಕೆ ಜಮ್ಮು ಕಾಶ್ಮೀರದ ಆರ್ಟಿಕಲ್ 370 ರದ್ದು ಭವಿಷ್ಯ, ತೀರ್ಪು ಪ್ರಕಟಿಸಲಿದೆ ಸುಪ್ರೀಂ ಕೋರ್ಟ್!
ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದು ಮಾಡಿದ ಕೇಂದ್ರ ಸರ್ಕಾರ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ಇದೀಗ ಡಿಸೆಂಬರ್ 11ಕ್ಕೆ ತೀರ್ಪು ಪ್ರಕಟಿಸಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ಸಿಗುತ್ತಾ? ಇಲ್ಲಾ ಕೇಂದ್ರ ನಿರ್ದಾರವನ್ನು ಕೋರ್ಟ್ ಗೌರವಿಸುತ್ತಾ?
ನವದೆಹಲಿ(ಡಿ.07) ಕೇಂದ್ರ ಸರ್ಕಾರ 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ (ಆರ್ಟಿಕಲ್ 270) ರದ್ದು ಮಾಡಿ ಐತಿಹಾಸ ನಿರ್ಧಾರವನ್ನು ಘೋಷಿಸಿತ್ತು. ಜಮ್ಮು ಮತ್ತು ಕಾಶ್ಮೀರ, ಲಡಾಖ್ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿತ್ತು. ಇದು ಕೋಲಾಹಲವನ್ನೇ ಸೃಷ್ಟಿಸಿತ್ತು. ಹಲವು ವಿಪಕ್ಷಗಳು ಕೇಂದ್ರದ ನಿರ್ಧಾರವನ್ನು ವಿರೋಧಿಸಿತ್ತು. ಕೇಂದ್ರದ ಸರ್ಕಾರದ ನಿರ್ಧಾರದ ವಿರುದ್ದ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ದಾಖಲಾಗಿತ್ತು. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರದ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇದೀಗ ತೀರ್ಪನ್ನು ಡಿಸೆಂಬರ್ 11ಕ್ಕೆ ಕಾಯ್ದಿರಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಹಾಗೂ ಸೂರ್ಯಕಾಂತ್ ನೇತೃತ್ವ ಪೀಠ ಅರ್ಜಿ ವಿಚಾರಣೆ ನಡೆಸಿದೆ. 16 ದಿನ ವಿಚಾರಣೆ ಬಳಿಕ ಇದೀಗ ಡಿಸೆಂಬರ್ 11ಕ್ಕೆ ತೀರ್ಪು ಪ್ರಕಟಿಸಲಿದೆ.
ಭಾರತದ 2 ಪ್ರಧಾನಿ, 2 ಸಂವಿಧಾನ, 2 ಧ್ವಜ ಪ್ರಮಾದ ಸರಿಪಡಿಸಿದ ಮೋದಿ, ಶಾ ಮಾತಿಗೆ ಸದನ ಸೈಲೆಂಟ್!
ಕೇಂದ್ರ ಸರ್ಕಾರದ ನಿರ್ಧಾರ ಒಕ್ಕೂಟ ವ್ಯವಸ್ಥೆ ಮೇಲೆ ಮಾಡಿದ ದಾಳಿಯಾಗಿದೆ. ಕೇಂದ್ರ ಸರ್ಕಾರದ ತೆಗೆದುಕೊಂಡ ನಿರ್ಧಾರದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುುಪ್ರೀಂ ಕೋರ್ಟ್‌ನಲ್ಲಿ 23 ಅರ್ಜಿ ಸಲ್ಲಿಕೆಯಾಗಿತ್ತು. ಹಿರಿಯ ವಕೀಲರಾದ ಕಪಿಲ್ ಸಿಬಲ್, ದುಷ್ಯಂತ್ ದಾವೆ ಸೇರಿದಂತೆ ಪ್ರಮುಖ ವಕೀರಲು ಕೇಂದ್ರದ ನಿರ್ಧಾರ ಪ್ರಶ್ನಿಸಿ ವಾದ ಮಾಡಿದ್ದರು.
ಇತ್ತ ಕೇಂದ್ರ ಸರ್ಕಾರ ದಾಖಲೆ ಮೂಲಕ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು. ಆರ್ಟಿಕಲ್ 370 ರದ್ದಿನಿಂದ ಜಮ್ಮು ಮತ್ತು ಕಾಶ್ಮೀರದಲ್ಲಾದ ಬದಲಾವಣೆ ಮಾಹಿತಿಯನ್ನೂ ಕೋರ್ಟ್ ಮುಂದೆ ಇಟ್ಟಿತ್ತು. ವಿಶೇಷ ಸ್ಥಾನಮಾನ ರದ್ದತಿಯಿಂದ ಕಾಶ್ಮೀರದಲ್ಲಿ 890 ಕೇಂದ್ರೀಯ ಕಾನೂನು ಅಳವಡಿಸಲಾಗಿದೆ. ಇದರಿಂದ ಮೊದಲು ಹಕ್ಕುಗಳಿಂದ ವಂಚಿತರಾದವರು ಈಗ ಸರ್ಕಾರಿ ಉದ್ಯೋಗಗಳನ್ನು ಪಡೆಯಬಹುದಾಗಿದೆ. ಆಸ್ತಿ ಖರೀದಿಸಬಹುದಾಗಿದೆ. ಇದಲ್ಲದೇ ಅನ್ಯಾಯ, ತಾರತಮ್ಯ ಮಾಡುವ 250 ರಾಜ್ಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಕಾಶ್ಮೀರದಲ್ಲಿ ಕೈಗಾರಿಕಾ ಸ್ಥಾಪನೆಯ ಹಾದಿ ಸುಲಭವಾಗಿದ್ದು, ಹೂಡಿಕೆ ಪರಿಸರ ನಿರ್ಮಾಣವಾಗಿದೆ ಎಂದಿತ್ತು.
ಕಾಶ್ಮೀರದಲ್ಲಿ 370ನೇ ವಿಧಿ ರದ್ದು ನಿರ್ಧಾರಕ್ಕೆ ನಾಲ್ಕು ವರ್ಷ, ಶಾಂತಿ-ಸ್ಥಿರತೆಯಲ್ಲಿ ಕಣಿವೆ ರಾಜ್ಯ!
2021ರಲ್ಲಿ ಕಾಶ್ಮೀರದಲ್ಲಿ ಒಳನುಸುಳುವಿಕೆ ಪ್ರಮಾಣ ಶೇ. 33ಕ್ಕೆ ಇಳಿಕೆಯಾಗಿದೆ. ಕದನ ವಿರಾಮ ಉಲ್ಲಂಘನೆಯಲ್ಲಿ ಶೇ. 90ರಷ್ಟುಇಳಿಕೆ, ಶೇ.61ರಷ್ಟುಭಯೋತ್ಪಾದಕ ಕೃತ್ಯಗಳಲ್ಲಿ ಇಳಿಕೆ ಹಾಗೂ ಉಗ್ರರಿಂದ ಅಪಹರಣಕ್ಕೊಳಗಾಗುವ ಪ್ರಮಾಣ ಶೇ.80 ರಷ್ಟುಇಳಿಕೆಯಾಗಿದೆ ಎಂದು ಮಾಹಿತಿ ನೀಡಿತ್ತು.