ರಾಜ್ಯಾದ್ಯಂತ ಮೆಡಿಕಲ್ ಕಾಲೇಜುಗಳಿಗೆ ಐಟಿ ಶಾಕ್!

ರಾಜಾದ್ಯಂತ ಮೆಡಿಕಲ್ ಕಾಲೇಜುಗಳಿಗೆ ಐಟಿ ಶಾಕ್ ನೀಡಿದೆ. ಬೆಂಗಳೂರು, ಮಂಗಳೂರು, ತುಮಕೂರು ಸೇರಿ ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  

Share this Video
  • FB
  • Linkdin
  • Whatsapp

ಬೆಂಗಳೂರು(ಫೆ.17): ರಾಜಾದ್ಯಂತ ಮೆಡಿಕಲ್ ಕಾಲೇಜುಗಳಿಗೆ ಐಟಿ ಶಾಕ್ ನೀಡಿದೆ. ಬೆಂಗಳೂರು, ಮಂಗಳೂರು, ತುಮಕೂರು ಸೇರಿ ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

Add Asianetnews Kannada as a Preferred SourcegooglePreferred

ರಾಜಧಾನಿ ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಮೆಡಿಕಲ್ ಕಾಲೇಜು, ಪ್ರತಿಷ್ಠಿತ ಬಿಜಿಎಸ್ ಶಿಕ್ಷಣ ಸಂಸ್ಥೆ, ತುಮಕೂರಿನ ಶ್ರೀದೇವಿ ಕಾಲೇಜು, ಮಂಗಳೂರಿನ ಖ್ಯಾತ ಉದ್ಯಮಿ ಬಿ ಆರ್ ಶೆಟ್ಟಿ ಸೇರಿದಂತೆ ಉದ್ಯಮಿಗಳ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಚೇರಿಗಳ ಮೇಲೆ ಐಟಿ ಇಲಾಖೆ ಬುಧವಾರ ದಾಳಿ ನಡೆಸಿದೆ.

ರಾಜ್ಯದಲ್ಲಿ ಮತ್ತೆ ಐಟಿ ಬೇಟೆ: ಖ್ಯಾತ ಉದ್ಯಮಿ ಮನೆ ಮೇಲೆ ದಾಳಿ

ಮಂಗಳೂರಿನ ವಿವಿಧ ಉದ್ಯಮಿಗಳ ಆಸ್ಪತ್ರೆ, ಮನೆ, ಕಚೇರಿಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಖ್ಯಾತ ಉದ್ಯಮಿ ಎ ಜೆ ಶೆಟ್ಟಿ ಅವರ ಬೆಂದೂರ್ ವೆಲ್ ನಲ್ಲಿರುವ ನಿವಾಸದ ಮೇಲೆ, ಮಂಗಳೂರಿನಲ್ಲಿರುವ ಎ ಜೆ ಆಸ್ಪತ್ರೆ, ಯೆನೆಪೋಯ ಆಸ್ಪತ್ರೆ ಮೇಲೆ ದಾಳಿ ನಡೆದಿದೆ.

ಅಕ್ರಮ ಆಸ್ತಿ ಸಂಪಾದನೆ, ಕಪ್ಪು ಹಣ ಸಂಗ್ರಹದ ಆರೋಪವಿದ್ದು, ವೈದ್ಯಕೀಯ ಕಾಲೇಜುಗಳಲ್ಲಿ ಸೀಟಿಗಾಗಿ ಲಕ್ಷ ಲಕ್ಷ ಸುಲಿಗೆ ನಡೆಸುತ್ತಿದ್ದಾರೆ, ಆಸ್ಪತ್ರೆಗಳಲ್ಲಿ ರೋಗಿಗಳಿಂದ ಚಿಕಿತ್ಸೆ ಹೆಸರಿನಲ್ಲಿ ಲಕ್ಷಗಟ್ಟಲೆ ಹಣ ಪೀಕಲಾಗುತ್ತಿದ್ದು ಸರಿಯಾದ ಆದಾಯ ತೆರಿಗೆ ವಿವರ ನೀಡುತ್ತಿಲ್ಲ, ತೆರಿಗೆ ಕಟ್ಟುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದ್ದು ಈ ಸಂಬಂಧ ದಾಳಿ ನಡೆದಿದೆ.

Related Video