Asianet Suvarna News Asianet Suvarna News

ಸದ್ಯದಲ್ಲೇ ಬರಲಿದೆ ಕೋವಿಡ್‌ ಲಸಿಕೆ ; ಖದೀಮರಿಂದ ಭಾರೀ ಸ್ಕೆಚ್.. ಎಚ್ಚರ..ಎಚ್ಚರ

ಪ್ರಧಾನಿ ಮೋದಿ ಕೋವಿಡ್ ಲಸಿಕೆ ನೀಡಲಿ ತಯಾರಿ ನಡೆಸುತ್ತಿದ್ದರೆ, ಇನ್ನೊಂದು ಕಡೆ ಫೇಕ್ ದಂಧೆ ಶುರುವಾಗಿದೆ. ಕ್ರಿಮಿನಲ್‌ ಸಿಂಡಿಕೇಟ್‌ಗಳು ನಕಲಿ ಕೋವಿಡ್‌ ಲಸಿಕೆಗಳನ್ನು ಭೌತಿಕವಾಗಿ ಹಾಗೂ ಅಂತರ್ಜಾಲದ ಮೂಲಕ ಮಾರಾಟ ಮಾಡಲು ಯತ್ನಿಸಬಹುದು ಎಂದು ಜಾಗತಿಕ ತನಿಖಾ ಸಂಸ್ಥೆ ‘ಇಂಟರ್‌ಪೋಲ್‌’ ಎಚ್ಚರಿಕೆ ನೀಡಿದೆ.

ಬೆಂಗಳೂರು (ಡಿ. 05): ಪ್ರಧಾನಿ ಮೋದಿ ಕೋವಿಡ್ ಲಸಿಕೆ ನೀಡಲಿ ತಯಾರಿ ನಡೆಸುತ್ತಿದ್ದರೆ, ಇನ್ನೊಂದು ಕಡೆ ಫೇಕ್ ದಂಧೆ ಶುರುವಾಗಿದೆ. ಕ್ರಿಮಿನಲ್‌ ಸಿಂಡಿಕೇಟ್‌ಗಳು ನಕಲಿ ಕೋವಿಡ್‌ ಲಸಿಕೆಗಳನ್ನು ಭೌತಿಕವಾಗಿ ಹಾಗೂ ಅಂತರ್ಜಾಲದ ಮೂಲಕ ಮಾರಾಟ ಮಾಡಲು ಯತ್ನಿಸಬಹುದು ಎಂದು ಜಾಗತಿಕ ತನಿಖಾ ಸಂಸ್ಥೆ ‘ಇಂಟರ್‌ಪೋಲ್‌’ ಎಚ್ಚರಿಕೆ ನೀಡಿದೆ.

ಹೈದರಾಬಾದ್‌ನಲ್ಲಿ ನಿರೀಕ್ಷೆಗೂ ಮೀರಿ ಸ್ಥಾನಗಳಿಸಿದ ಬಿಜೆಪಿ; ಕೇಸರಿ ಮಾಡಿದ ಕಮಾಲ್

ಈ ಸಂಬಂಧ ಬುಧವಾರ ತನ್ನ 194 ಸದಸ್ಯ ದೇಶಗಳಿಗೆ ‘ಆರೆಂಜ್‌ ನೋಟಿಸ್‌’ ನೀಡಿರುವ ಇಂಟರ್‌ಪೋಲ್‌, ಇದರಲ್ಲಿ ಕ್ರೈಮ್‌ ಸಿಂಡಿಕೇಟ್‌ ನಡೆಸುತ್ತಿರುವ ಯತ್ನದ ಕೆಲವು ಉದಾಹರಣೆಗಳನ್ನು ನೀಡಿದೆ. ಜಾಹೀರಾತಿನಲ್ಲಿ ಈ ಬಗ್ಗೆ ಕ್ರಿಮಿನಲ್‌ಗಳು ಪ್ರಚಾರ ನಡೆಸುತ್ತಿರುವುದನ್ನು ಉಲ್ಲೇಖಿಸಿದೆ. ಹಾಗಾಗಿ ಯಾವುದೇ ಅಪರಿಚಿತ ಮೇಲ್‌ಗಳು ಬಂದ್ರೆ ಎಚ್ಚರ ವಹಿಸುವುದು ಉತ್ತಮ. 

Video Top Stories