Asianet Suvarna News Asianet Suvarna News

ಎಲ್ಲರಂಥಲ್ಲ ಈ ಪವಾಡ ಪುರುಷ ಭೋಲೇಬಾಬಾ! ಪೊಲೀಸ್ ಆಗಿದ್ದ ವ್ಯಕ್ತಿ ಭೋಲೇ ಬಾಬಾ ಆಗಿದ್ದೇ ರೋಚಕ!

ಸತ್ಸಂಗಕ್ಕೆ ಸೇರಿರೋ ಭಕ್ತರ ಸಂಖ್ಯೆ ನೋಡ್ತಿದ್ರೆ ಗೊತ್ತಾಗುತ್ತೆ. ಭೋಲೆ ಬಾಬಾನನ್ನ ನಂಬುವ ಭಕ್ತರು ಎಷ್ಟಿದ್ದಾರೆ ಅಂತ ಅರ್ಥವಾಗಿ ಬಿಡುತ್ತೆ. ಇಲ್ಲಿ ಒಂದು ಇಂಟ್ರಸ್ಟಿಂಗ್ ಆಗಿ ಇರೋ ವಿಚಾರ ಏನಂದ್ರೆ, ಇವರು ಪವಾಡ ಪುರುಷ ಅವತಾರ ತಾಳುವ ಮುನ್ನ ಪೊಲೀಸ್ ಆಗಿ ಕೆಲಸ ಮಾಡಿದ್ದರಂತೆ. 

ನವದೆಹಲಿ(ಜು.04): ಬಾಬಾನ ಪಾದಧೂಳಿಗಾಗಿ ಮುಗಿಬಿದ್ದು ಶವವಾದ ಭಕ್ತರು.. 80 ಸಾವಿರ ಜನ ಎಂದಿದ್ದ ಜಾಗ.. ಸೇರಿದ್ದು ಎರಡೂವರೆ ಲಕ್ಷ ಜನ.. ಪೊಲೀಸ್ ಆಗಿದ್ದವನು ಬೋಲೇ ಬಾಬಾ ಆಗಿದ್ದೇ ರೋಚಕ.. ಸ್ವಯಂಘೋಷಿತ ದೇವಮಾನವನ ದರ್ಶನ.. 4 ತಪ್ಪುಗಳೇ ಅನಾಹುತಕ್ಕೆ ಕಾರಣ.. ಇದೇ ಈ ಹೊತ್ತಿನ ಸ್ಪೆಷಲ್ ಎಪಿಸೋಡ್ ಬಾಬಾ ಸತ್ಸಂಗ.. ಮರಣ ಮೃದಂಗ

ಸತ್ಸಂಗ ಕೇಳೋಕೆ ಬಂದ ಭಕ್ತರು, ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಇನ್ನೂ ಕೆಲ ಭಕ್ತರು ಕುಟುಂಬದವರನ್ನ ಕಳೆದುಕೊಂಡ ನೋವಲ್ಲಿ ಕಣ್ಣೀರು ಹಾಕ್ತಿದ್ದಾರೆ. ಆದರೆ ಆ ಪವಾಡ ಪುರುಷ ಮಾತ್ರ ಯಾರ ಕಣ್ಣಿಗೂ ಕಾಣದಂತೆ ಮಾಯವಾಗಿ ಹೋಗಿದ್ದ. ಅಷ್ಟಕ್ಕೂ ಈ ಭೊಲೋಬಾಬನ ಹಿಸ್ಟರಿ ಏನು ಗೊತ್ತಾ..? 

ಸ್ವಯಂಘೋಷಿತ ದೇವಮಾನವ ಮಾಡಿರೋ ಎಡವಟ್ಟುಗಳು ಒಂದೆರಡಲ್ಲ, ಇಲ್ಲಿದೆ ನೋಡಿ ಬೋಲೆ ಬಾಬಾನ ಕಥೆ

ಈ ಸತ್ಸಂಗಕ್ಕೆ ಸೇರಿರೋ ಭಕ್ತರ ಸಂಖ್ಯೆ ನೋಡ್ತಿದ್ರೆ ಗೊತ್ತಾಗುತ್ತೆ. ಭೋಲೆ ಬಾಬಾನನ್ನ ನಂಬುವ ಭಕ್ತರು ಎಷ್ಟಿದ್ದಾರೆ ಅಂತ ಅರ್ಥವಾಗಿ ಬಿಡುತ್ತೆ. ಇಲ್ಲಿ ಒಂದು ಇಂಟ್ರಸ್ಟಿಂಗ್ ಆಗಿ ಇರೋ ವಿಚಾರ ಏನಂದ್ರೆ, ಇವರು ಪವಾಡ ಪುರುಷ ಅವತಾರ ತಾಳುವ ಮುನ್ನ ಪೊಲೀಸ್ ಆಗಿ ಕೆಲಸ ಮಾಡಿದ್ದರಂತೆ. 

ಸದ್ಯಕ್ಕೆ ಭೋಲೇಬಾಬಾ ಹುಡುಕಾಟದಲ್ಲಿದೆ ಪೊಲೀಸ್ ಪಡೆ. ಈಗ ಹತ್ರಾಸ್ನಲ್ಲಿ ಹೇಗೆ ಕಾಲ್ತುಳಿತದ ದುರಂತ ಸಂಭವಿಸಿದೆಯೋ. ಈ ಹಿಂದೆ ಇದಕ್ಕಿಂತಲೂ ಭೀಕರವಾಗಿ ಕಾಲ್ತುಳಿತದ ಘಟನೆಗಳು ನಡೆದಿವೆ. 
ಈ ಹಿಂದೆಯೂ ಅನೇಕ ಧಾರ್ಮಿಕ ಸಭೆಗಳಲ್ಲಿ ಕಾಲ್ತುಳಿತ ದುರ್ಘಟನೆಗಳು ನಡೆದಿವೆ. ಕೆಲಘಟನೆಗಳಂತೂ ಈ ಹತ್ರಾಸ್ ಕಾಲ್ತುಳಿತ ಘಟನೆಗಿಂತಲೂ ಭೀಕರವಾಗಿದೆ. ಆ ಘಟನೆಗಳು ಯಾವವು ಗೊತ್ತಾ ಇಲ್ಲಿದೆ ನೋಡಿ ಅದರ ಪಟ್ಟಿ. 

Video Top Stories