
ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಕಾದು ಕುಳಿತು ಹೊಡೆಯುವ ನಿರ್ಧಾರಕ್ಕೆ ಬಂತಾ ಭಾರತ?
ಪೆಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಲು ಭಾರತ ತಯಾರಿ ನಡೆಸುತ್ತಿದೆ. ಆದರೆ ದಾಳಿ ನಡೆದು ಮೂರು ದಿನ ಆಗಿದೆ. ಭಾರತ ಪ್ರತೀಕಾರಕ್ಕೆ ಯಾವ ರೀತಿ ಸಜ್ಜಾಗುತ್ತಿದೆ. ಭಾರತದ ತಿರುಗೇಟು ಹೇಗಿರುತ್ತೆ?
ಬೆಂಗಳೂರು(ಏ.25) ಪೆಹಲ್ಗಾಂ ಉಗ್ರ ದಾಳಿಗೆ ಭಾರತದ ಪ್ರತೀಕಾರವೇನು? ಭಾರತ ತೆಗೆದುಕೊಂಡಿರುವ ಸದ್ಯದ ನಿರ್ಧಾರಗಳು ನಿಧಾನವಾಗಿ ಪಾಕ್ ಮೇಲೆ ಪರಿಣಾಮ ಬೀರಲಿದೆ. ಆದರೆ ತಕ್ಷಣಕ್ಕೆ ಭಾರತದ ಪ್ರತೀಕಾರ ಯುದ್ಧವಲ್ಲ. ಕಾದು ನೋಡಿ ಪಾಕಿಸ್ತಾನದ ಮೇಲೆ ಹೊಡೆಯುವ ತಂತ್ರಕ್ಕೆ ಭಾರತ ಮುಂದಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಕುರಿತು ನಿವೃತ್ತ ಸೇನಾಧಿಕಾರಿಗಳು ಹೇಳುವುದೇನು?