Asianet Suvarna News Asianet Suvarna News

ಅಗ್ನಿ ಹೆಸರಿಗೆ ಚೀನಾಕ್ಕೆ ನಡುಕ.. ಅಗ್ರ ನಾಯಕರ ಮುನಿಸು ಮರೆ?

Sep 23, 2021, 11:26 PM IST

ಬೆಂಗಳೂರು(ಸೆ. 23)   ಐದು ಸಾವಿರದಿಂದ ಎಂಟು ಸಾವಿರ ಕಿಮೀ ದೂರಕ್ಕೆ ತೆರಳಿ ದಾಳಿ ಮಾಡಬಲ್ಲ ಅಗ್ನಿ ಕ್ಷಿಪಣಿ ಪ್ರಯೋಗಕ್ಕೆ ಭಾರತ ಸಿದ್ಧವಾಗಿದ್ದು ಅತ್ತ ಚೀನಾ ಸದ್ದಿಲ್ಲದೆ ಕ್ಯಾತೆ ತೆಗೆದಿದೆ. ಮೀಸಲಾತಿ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಪಂಚಮಸಾಲಿ, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿಗೆ ಬಿಜೆಪಿ ನಾಯಕರೇ ಆಗ್ರಹಿಸಿದ್ದಾರೆ.

ಅಮೆರಿಕ ಪ್ರವಾಸಲದಲ್ಲಿ ಪ್ರಧಾನಿ ಮೋದಿ

ಕೊರೋನಾ ಸಾವಿನ ಲೆಕ್ಕದಲ್ಲಿ ಸರ್ಕಾರ ದೊಡ್ಡ ಸುಳ್ಳು ಹೇಳಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇನ್ನು ಅದೆಷ್ಟೋ ಜನಕ್ಕೆ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಅಪಘಾತ ಸರಣಿ ಮುಂದುವರಿದಿದೆ. ಪಟಾಕಿ ಸ್ಫೋಟದಿಂದ ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಒಂದೆಲ್ಲಾ ಒಂದು ಅಪಘಾತ ಮತ್ತು ಅವಘಡ ಪ್ರಕರಣ ವರದಿಯಾಗುತ್ತಲೇ ಇದೆ. ಕಾರು ಅಪಘಾತ, ಬೆಂಕಿಮ, ಸ್ಫೋಟ.. ದುರಂತಗಳ ಸರಮಾಲೆಯಾಗಿದೆ ಹಿಂದುಳಿದ ವರ್ಗಗಳನ್ನು ಸೆಳೆಯಲು ಕಾಂಗ್ರೆಸ್ ಅಗ್ರ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಒಳಗಿನ ಶೀತಲ ಸಮರ ಕಡಿಮೆಯಾಯಿತೆ? ಮುಂದಿನ ಚುನಾವಣೆಗೆ ಈಗಲೇ ಸಿದ್ಧತೆ ನಡೆಸಿದ್ದಾರೆ ಎನ್ನುವ ಮಾತಿದೆ