Modi in USA: ಕ್ವಾಲ್ಕಾಮ್ CEO ಜೊತೆ ಪ್ರಧಾನಿ ಮೋದಿ ಸಭೆ, ಡಿಜಿಟಲ್ ಇಂಡಿಯಾಗೆ ಮತ್ತಷ್ಟು ಬಲ!
- ಕ್ವಾಲ್ಕಾಮ್ ಸಿಇಓ ಜೊತೆ ಪ್ರಧಾನಿ ನರೇಂದ್ರ ಮೋದಿ ಭೇಟಿ
- ಡಿಜಿಟಲ್ ಪರಿವರ್ತನೆ ಯೋಜನೆಗಳಲ್ಲಿ ಭಾರತದ ಜೊತೆ ಒಪ್ಪಂದ
- ಭಾರತ ಅತೀ ದೊಡ್ಡ ಮಾರುಕಟ್ಟೆ ಎಂದು ಕ್ವಾಲ್ಕಾಮ್
ವಾಶಿಂಗ್ಟನ್(ಸೆ.23): ಮೂರು ದಿನಗಳ ಭೇಟಿಗಾಗಿ ಅಮೆರಿಕಾದ(America) ವಾಶಿಂಗ್ಟನ್‌ನಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ(Narendra Modi) ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಹಲವು ಮಹತ್ವದ ಮಾತುಕತೆ ಹಾಗೂ ಒಪ್ಪಂದಕ್ಕೆ ಈ ಭೇಟಿ ಸಾಕ್ಷಿಯಾಗಲಿದೆ. ಈ ಪ್ರವಾಸದ ಮೊದಲ ಸಭೆ ಪೂರ್ಣಗೊಂಡಿದೆ. ಕ್ವಾಲ್ಕಾಮ್ ನ ಸಿಇಒ ಕ್ರಿಸ್ಟಿಯಾನೋ ಅಮೋನ್(Cristiano Amon) ಜೊತೆ ನಡೆಸಿದ ಮಹತ್ವದ ಸಭೆಯಲ್ಲಿ, ಭಾರತದ ಡಿಜಿಟಲ್ ಇಂಡಿಯಾಗೆ(Digital India) ಮತ್ತಷ್ಟು ಬಲ ಸಿಕ್ಕಿದೆ.
ಕಾಯಕವೇ ಕೈಲಾಸ: ದೀರ್ಘ ಕಾಲದ ಪ್ರಯಾಣದ ನಡುವೆಯೂ ಕೆಲಸಕ್ಕೆ ಒತ್ತು ಕೊಟ್ಟ ಪಿಎಂ!
ಕ್ರಿಸ್ಟಿಯಾನೋ ಅಮೋನ್ ಭೇಟಿಯಾಗಿ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಭಾರತದಲ್ಲಿ ಹೂಡಿಕೆಗಳ ಅವಕಾಶ ಕುರಿತು ಚರ್ಚಿಸಿದದ್ದಾರೆ. ಈ ವೇಳೆ ಭಾರತದಲ್ಲಿ 5ಜಿ ಸೇರಿದಂತೆ ಮಹತ್ವಾಕಾಂಕ್ಷೆಯ ಡಿಜಿಟಲ್ ಪರಿವರ್ತನೆ ಯೋಜನೆಗಳಲ್ಲಿ ಭಾರತದ ಜೊತೆ ಜಂಟಿಯಾಗಿ ಕೆಲಸ ಮಾಡಲು ಕ್ವಾಲ್ಕಾಮ್ ಉತ್ಸಾಹ ತೋರಿದೆ.
ಭಾರತದ ದೂರಸಂಪರ್ಕ ಮತ್ತು ಎಲೆಕ್ಟ್ರಾನಿಕ್ ವಲಯದಲ್ಲಿನ ಹೂಡಿಕೆ ಕುರಿತು ಪ್ರಧಾನಿ ಮೋದಿ ಕ್ವಾಲ್ವಾಮ್(Qualcomm) ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ESDM)ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ (PLI) ಹಾಗೂ ಭಾರತದಲ್ಲಿ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯಲ್ಲಿನ ಬೆಳವಣಿಗೆಗಳನ್ನು ಒಳಗೊಂಡಿದೆ. ಭಾರತದಲ್ಲಿ ಸ್ಥಳೀಯ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಕಾರ್ಯತಂತ್ರಗಳ ಬಗ್ಗೆಯೂ ಚರ್ಚಿಸಲಾಯಿತು.
ಅಮೆರಿಕದಲ್ಲಿ ಮೋದಿ, ವಿಶ್ವಸಂಸ್ಥೆ ಉದ್ದೇಶಿಸಿ ಪ್ರಧಾನಿ ಭಾಷಣ!
ಭಾರತದಲ್ಲಿನ(India) ಅವಕಾಶದ ಕುರಿತು ಕ್ರಿಸ್ಟಿಯಾನೋ ಅಮೋನ್, ಮೋದಿ ಜೊತೆ ಚರ್ಚಿಸಿದರು. ಭಾರತ ಅತೀ ದೊಡ್ಡ ಮಾರುಕಟ್ಟೆ. ಹೀಗಾಗಿ ಭಾರತವನ್ನು ದೊಡ್ಡ ರಫ್ತು ಮಾರುಕಟ್ಟೆಯಾಗಿ ನೋಡುತ್ತಿದ್ದೇವೆ. ಇತರ ದೇಶಗಳ ಬೇಡಿಕೆ ತಕ್ಕಂತೆ ಪೂರೈಕೆ ಮಾಡಲು ಭಾರತಕ್ಕೆ ಸಾಧ್ಯವಿದೆ ಎಂದರು. ಇದೇ ವೇಳೆ ಭಾರತದ ಜೊತೆ ಪಾಲುದಾರಿ ಮಾಡಲು ಕ್ವಾಲ್ಕಾಮ್ ಹೆಚ್ಚಿನ ಆಸಕ್ತಿ ತೋರಿದೆ.
ಪಾಲುದಾರಿಕೆ ಹಾಗೂ ಭಾರದಲ್ಲಿ ಕೆಲಸ ಮಾಡಲು ಉತ್ಸುಕತೆ ತೋರಿದ ಕ್ವಾಲ್ಕಾಮ್ ಪ್ರಸ್ತಾಪವನ್ನು ಭಾರತ ಗಂಭೀರವಾಗಿ ಪರಿಗಣಿಸುತ್ತದೆ. ಜೊತೆಗೆ ಭಾರತ ಈ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು. ಭಾರತ ಈಗಾಗಲೇ 5ಜಿ ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾಗಿದೆ. ಇದರ ಜೊತೆ ಭಾರತದ ಡಿಜಿಟಲ್ ಇಂಡಿಯಾ ಪರಿವರ್ತನೆಯೂ ಅಷ್ಟೇ ವೇಗದಿಂದ ನಡೆಯುತ್ತಿದೆ. ಇದಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ಮೋದಿ ಹೇಳಿದರು.
ಅಮೆರಿಕದಲ್ಲಿ ಮೋದಿ: ಅನಿವಾಸಿ ಭಾರತೀಯರ ಭೇಟಿಯಾದ 'ನಮೋ'
ಕ್ವಾಲ್ಕಾಮ್ ಭಾರತದ ಮೇಲೆ ಶೇಕಡಾ 100 ರಷ್ಟು ನಂಬಿಕೆ ಇಡಬಹುದು. ಇಲ್ಲಿನ ಪ್ರತಿಭೆ, ಮಾನವ ಸಂಪೂನ್ಮೂಲದ ಮೇಲೆ ಭರವಸೆ ಇಟ್ಟು ಯೋಜನೆ ಕಾರ್ಯಗತಗೊಳಿಸಬೇಕು. ಇದಕ್ಕೆ ಕೇಂದ್ರ ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದು ಮೋದಿ ಹೇಳಿದರು. ಇದೇ ವೇಳೆ ಡ್ರೋನ್ ನೀತಿ ಕುರಿತು ಮೋದಿ ಮಾತನಾಡಿದ್ದಾರೆ. ಕ್ವಾಲ್ಕಾಮ್ ಹೊಸ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ ಬಳಸಿಕೊಳ್ಳಬಹುದು ಎಂದು ಮೋದಿ ಹೇಳಿದರು.
ಅದ್ಧೂರಿ ಸ್ವಾಗತ:
ಪ್ರಧಾನಿ ನರೇಂದ್ರ ಮೋದಿ ವಾಶಿಂಗ್ಟನ್(washington) ಬಂದಿಳಿಯುತ್ತಿದ್ದಂತೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಮೋದಿ ನೋಡಲು ಜನಸ್ತೋಮವೇ ನೆರೆದಿತ್ತು. ಇತ್ತ ಮೋದಿ ಮಳೆಯನ್ನೂ ಲೆಕ್ಕಿಸಿದೇ ಜನರೊಂದಿಗೆ ಮೋದಿ ಬೆರೆತಿದ್ದಾರೆ. ಭಾರತೀಯ ರಾಯಭಾರಿ ಸೇರಿದಂತೆ ಹಲವು ಅಧಿಕಾರಿಗಳು ವಾಶಿಂಗ್ಟನ್ ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ಬರಮಾಡಿಕೊಂಡರು. ವಿಮಾನ ನಿಲ್ದಾಣದಲ್ಲಿ ಭಾರತೀಯ ಸಮುದಾಯವೇ ನೆರೆದಿತ್ತು. ಮೋದಿ ಮೋದಿ ಘೋಷಣೆ ಕೂಗಿ ಪ್ರಧಾನಿಯನ್ನು ಸ್ವಾಗತಿಸಿದರು.
ಮಹತ್ವ ಭೇಟಿ:
ಪ್ರಧಾನಿ ನರೇಂದ್ರ ಮೋದಿ ನಾಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ಭೇಟಿಯಾಗಲಿದ್ದಾರೆ. ಬೈಡನ್ ಶ್ವೇತಭವನದಲ್ಲಿ ಮೋದಿಗೆ ಅತಿಥ್ಯವಹಿಸಲಿದ್ದಾರೆ. ಮೋದಿ ಹಾಗೂ ಬೈಡನ್ ಮೊದಲ ಮುಖಾಮುಖಿಯಾಗಿದೆ. ಇದಕ್ಕೂ ಮೊದಲು ವಿಡಿಯೋ ಕಾನ್ಫೆರನ್ಸ್ ಮೂಲಕ ಉಭಯ ನಾಯಕರು ಭೇಟಿಯಾಗಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನದ ಸಾಮಾನ್ಯ ಸಭೆಯಲ್ಲಿ ಮೋದಿ ಭಾಷಣ ಮಾಡಲಿದ್ದಾರೆ.