ಕದನ ಕಿಚ್ಚು.. ಟ್ರಂಪ್ ಸ್ವಹಿತಾಸಕ್ತಿಯ ಹುಚ್ಚು.. ಹೇಗಿತ್ತು ಭಾರತದ ಪಂಚು..?

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದಕ್ಕೆ ಟ್ರಂಪ್ ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ಭಾರತ ಮಾತ್ರ ಈ ವಿಚಾರವನ್ನು ಅಲ್ಲಗಳೆದಿದೆ. ಟ್ರಂಪ್ ಹೇಳಿಕೆ ಬಿಟ್ಟಿ ಬಿಲ್ಡಪ್ ಎಂದು ಭಾರತ ಪರೋಕ್ಷವಾಗಿ ಟೀಕಿಸಿದೆ.

Share this Video
  • FB
  • Linkdin
  • Whatsapp

ಭಾರತ ಪಾಕ್ ಸಂಘರ್ಷವನ್ನ ನಿಜಕ್ಕೂ ಟ್ರಂಪ್ ನಿಲ್ಲಿಸಿದ್ರಾ..? ಯುದ್ಧ ನಿಲ್ಲಿಸಿದೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ವಿದೂಷಕನಾದ್ರಾ ಟ್ರಂಪ್..? ಎರಡು ದೇಶಗಳ ನಡುವಿನ ಕದನ ಕಿಚ್ಚಿನ ಮಧ್ಯೆ ಟ್ರಂಪ್​ಗ್ಯಾಕೆ ಸ್ವಹಿತಾಸಕ್ತಿಯ ಹುಚ್ಚು..? ಹೇಗಿತ್ತು ಭಾರತದ ಪಂಚು..? ಬಿಟ್ಟಿ ಬಿಲ್ಡಪ್ಪು.. ಪುಕ್ಸಟ್ಟೆ ಪೋಸು.. ಟ್ರಂಪಣ್ಣ.. ಹಿಂಗ್ಯಾಕಣ್ಣಾ..? ಟ್ರಂಪ್ ಶಕುನಿಯಾಟಕ್ಕೆ ಭಾರತ ಕೊಟ್ಟಿದ್ದೆಂಥಹ ಖಡಕ್ ಉತ್ತರ. ಇದೇ ಇವತ್ತಿನ ಸುವರ್ಣ ಸ್ಪೆಷಲ್ ದೊಡ್ಡಣ್ಣನ ಬಿಟ್ಟಿ ಬಿಲ್ಡಪ್..

ಕದನ ವಿರಾಮದಲ್ಲಿ ಟ್ರಂಪ್ ಮಧ್ಯಸ್ಥಿಕೆಯಿತ್ತಾ..? ಈ ವಿಚಾರವಾಗಿ ಭಾರತ ಮತ್ತೊಂದು ಬಾರಿ ಸ್ಪಷ್ಟನೆ ಕೊಟ್ಟಿದೆ. ಹಾಗಿದ್ರೆ, ಭಾರತ ನೇರವಾಗಿ ಕೊಟ್ಟಿರೋ ಆ ಸ್ಪಷ್ಟ ಉತ್ತರ 
ನಾನೇ ಯುದ್ಧ ನಿಲ್ಲಿಸಿದ್ದು.. ನಾನೇ ಮಹಾ ಸಂಘರ್ಷ ತಪ್ಪಿಸಿದ್ದು ಅಂತ ಟ್ರಂಪ್ ಬಡಾಯಿ ಕೊಚ್ಚಿಕೊಳ್ತಾ ಇದ್ರೆ, ಇತ್ತ ಭಾರತದಲ್ಲಿ ಈ ವಿಚಾರ ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿತ್ತು. ಈ ಮಧ್ಯೆ ವಿದೇಶಾಂಗ ಸಚಿವಾಲಯ ಸ್ಪಷ್ಟೀಕರಣ ಕೊಟ್ಟಿದ್ದು, ಟ್ರಂಪ್ ಪಾತ್ರವನ್ನ ಅಲ್ಲಗಳೆಯಲಾಗಿದೆ.

ಟ್ರಂಪ್​ಗೆ ಒಂದು ಆಸೆಯಿದೆ.. ಅದೊಂತರ ಈಡೇರದ ಹುಚ್ಚು ಆಸೆ.. ಇಡೀ ಜಗತ್ತಿನ ಸೂತ್ರದಾರ ನಾನಾಗಬೇಕು ಅನ್ನೋ ಈಡೇರದ ಆಸೆಯಲ್ಲಿ ಟ್ರಂಪ್ ಇದ್ದಾರೆ. ಆದ್ರೆ, ಬದಲಾಗಿರೋ ಜಿಯೋ ಪಾಲಿಟಿಕ್ಸ್​​ನಿಂದ ಅಮೆರಿಕಾ ಹೇಳಿದ ಹಾಗೆ ಕುಣಿಯೋ ಸ್ಥಿತಿಯಲ್ಲಿ ಜಗತ್ತಿಲ್ಲ. ದೊಡ್ಡಣ್ಣನ ಕೈನಿಂದ ಜಗತ್ತಿನ ಕಂಟ್ರೋಲ್ ತಪ್ಪಿ ಬಹಳ ಸಮಯವೇ ಕಳೆದಿದೆ. 

Related Video