Asianet Suvarna News Asianet Suvarna News

ಚಾಯ್‌ವಾಲಾ ಪ್ರಧಾನಿಯಾಗಿದ್ದು ಎಲ್ಲರಿಗೂ ಪ್ರೇರಣೆ: ಮೋದಿಯನ್ನು ಹೊಗಳಿದ ಟ್ರಂಪ್!

ಮೊಟೆರಾ ಸ್ಡೇಡಿಯಂ ಉದ್ಘಾಟಿಸಿ ಮಾತನಾಡಿದ ಟ್ರಂಪರ್, ಭಾರತ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಹಾಡಿ ಹೊಗಳಿದ್ದಾರೆ. ಇಲ್ಲಿದೆ ನೋಡಿ ಟ್ರಂಪ್ ಭಾಷಣದ ಹೈಲೈಟ್ಸ್

ಅಹಮದಾಬಾದ್[ಫೆ.24]: ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೊಟೆರಾ ಉದ್ಘಾಟಿಸಿ ಮಾತನಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿಯನ್ನೂ ಹಾಡಿ ಹೊಗಳಿದ್ದಾರೆ.

ನರೇಂದ್ರ ಮೋದಿ ಸಾಧನೆಯ ದಂತಕಥೆ. ಮೋದಿಯನ್ನು ಎಲ್ಲರೂ ಪ್ರೀತಿಸುತ್ತಾರೆ, ಮೋದಿ ಬಹಳ ಕಠಿಣ ವ್ಯಕ್ತಿ. ಚಾಯ್ವಾಲಾ ಪ್ರಧಾನಿಯಾಗಿದ್ದು ಎಲ್ಲರಿಗೂ ಪ್ರೇರಣೆ. ಮೋದಿ ಅತ್ಯದ್ಭುತ ನಾಯಕ, ಹಗಲುರಾತ್ರಿ ದೇಶಕ್ಕಾಗಿ ದುಡಿಯುತ್ತಾರೆ. ಪ್ರಧಾನಿ ಮೋದಿ ಭಾರತದ ಚಾಂಪಿಯನ್ ಎಂದು ಹಾಡಿ ಹೊಗಳಿದ್ದಾರೆ. 

ಇದೇ ವೇಳೆ ಭಾರತವನ್ನು ಕೊಂಡಾಡಿದ ಟ್ರಂಪ್ 'ಭಾರತ ಶಾಂತಿಪ್ರಿಯ, ಸಹಿಷ್ಣು, ಸ್ವತಂತ್ರ ಪ್ರಜಾಪ್ರಭುತ್ವ ದೇಶ. ಭಾರತ ಇಷ್ಟೊಂದು ಸಾಧನೆ ಮಾಡಿದ್ದು ಅದ್ಭುತ. ಭಾರತವನ್ನು ಅಮೆರಿಕ ಗೌರವಿಸುತ್ತದೆ, ಪ್ರೀತಿಸುತ್ತದೆ. ಶಾಶ್ವತವಾಗಿ ಭಾರತದೊಂದಿಗೆ ಅಮೆರಿಕ ಸ್ನೇಹ ಬೆಳೆಸುವೆ. ಜಗತ್ತಿನ ಅತ್ಯುತ್ತಮ ಆಯುಧಗಳನ್ನು ನಾವು ತಯಾರಿಸಿದ್ದೇವೆ. ಆ ಆಯುಧಗಳನ್ನು ಭಾರತದೊಂದಿಗೆ ಹಂಚಿಕೊಳ್ಳುತ್ತೇವೆ. ಭಾರತಕ್ಕೆ 3 ಬಲಿಯನ್ ಡಾಲರ್ ಮೌಲ್ಯದ ಮಿಲಿಟರಿ ಹೆಲಿಕಾಪ್ಟರ್ ಪೂರೈಕೆ ಮಾಡುತ್ತೇವೆ ಎಂದಿದ್ದಾರೆ. 

ಫೆಬ್ರವರಿ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories