ಭಾರತದಲ್ಲಿ ಟ್ರಂಪ್ ಮೋಡಿ, ಮತ್ತೆ ಪಾಕ್ ಜಿಂದಾಬಾದ್ ಎಂದ ಕಿಡಿಗೇಡಿ; ಫೆ.24ರ ಟಾಪ್ 10 ಸುದ್ದಿ!

ಭಾರತಕ್ಕೆ ಆಗಮಿಸಿದ್ದ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಅಹಮ್ಮದಾಬಾದ್‌ನಲ್ಲಿನ ಮೊಟೆರಾ ಕ್ರಿಕೆಟ್ ಕ್ರೀಡಾಂಗಣ ಉಧ್ಘಾಟಿಸಿದ್ದಾರೆ. ಪ್ರಧಾನಿ ಮೋದಿ, ಬಾಲಿವುಡ್ ಚಿತ್ರ, ಸಚಿನ್ ತೆಂಡುಲ್ಕರ್ ಸೇರಿದಂತೆ ಭಾರತದ ವೈವಿಧ್ಯತೆಯನ್ನು ಹಾಡಿ ಹೊಗಳಿದ್ದಾರೆ. ಭೂಗತ ಪಾತಕಿ ರವಿ ಪೂಜಾರಿಯನ್ನು ಬೆಂಗ್ಳೂರಿಗೆ ಕರೆತರುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.  ಹುಬ್ಬಳ್ಳಿ ಶಾಲೆಯಲ್ಲಿ ಪಾಕ್ ಪರ ಬರಹ, ಮಾರುತಿ ಬ್ರೆಜ್ಜಾ ಕಾರು ಬಿಡುಗಡೆ ಸೇರಿದಂತೆ ಫೆಬ್ರವರಿ 24ರ ಟಾಪ್ 10 ಸುದ್ದಿ ಇಲ್ಲಿವೆ. 

Donald Trump in India to Anti India Slogan top 10 news of February 24

ಚಾಯ್‌ವಾಲಾ ಪ್ರಧಾನಿಯಾಗಿದ್ದು ಎಲ್ಲರಿಗೂ ಪ್ರೇರಣೆ: ಮೋದಿಯನ್ನು ಹೊಗಳಿದ ಟ್ರಂಪ್...

Donald Trump in India to Anti India Slogan top 10 news of February 24

ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೊಟೆರಾ ಉದ್ಘಾಟಿಸಿ ಮಾತನಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿಯನ್ನೂ ಹಾಡಿ ಹೊಗಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮತ್ತೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಕಿಡಿಗೇಡಿಗಳು!

Donald Trump in India to Anti India Slogan top 10 news of February 24

 ನಗರದ ಪ್ರೇರಣಾ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಕಿಸ್ತಾನ ಜಿಂದಾಬಾದ್ ಕೂಗಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಂತಹದ್ದೇ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. 

ಆ್ಯಂಟನಿ ಫೆರ್ನಾಂಡಿಸೇ ರವಿ ಪೂಜಾರಿ ಎಂದು ಪೊಲೀಸರಿಗೆ ಖಚಿತ ಪಡಿಸಿದ ಆ ಒಂದು ವಿಷ್ಯ!

Donald Trump in India to Anti India Slogan top 10 news of February 24

ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟಾರ್ ರವಿ ಪೂಜಾರಿಯನ್ನು ಬೆಂಗ್ಳೂರಿಗೆ ಕರೆತರುವಲ್ಲಿ ಕೊನೆಗೂ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ವಿಶ್ವ ಸುಂದರಿ ಸ್ಪರ್ಧೆಗೆ ಮಂಗಳೂರು ಬೆಡಗಿ!

Donald Trump in India to Anti India Slogan top 10 news of February 24

ಮಂಗಳೂರು ಮೂಲದ ಅಡ್ಲೀನ್‌ ಕ್ಯಾಸ್ಟಲಿನೋ ಅವರು 2020ರ ಲಿವಾ ಮಿಸ್‌ ಡೀವಾ ಯೂನಿವರ್ಸ್‌ ಸೌಂದರ್ಯ ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾರೆ. ಆ ಮೂಲಕ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಸಚಿನ್ ತೆಂಡುಲ್ಕರ್ ಸಾಧನೆಗೆ 10 ವರ್ಷ; ಹಾಡಿ ಹೊಗಳಿದ ಅಮೆರಿಕ ಅಧ್ಯಕ್ಷ!

Donald Trump in India to Anti India Slogan top 10 news of February 24

ಕ್ರಿಕೆಟ್‌ನ ಬಹುತೇಕ ಎಲ್ಲಾ ದಾಖಲೆಗಳು ಆರಂಭವಾವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಿನಿಂದ. ಏಕದಿನ ಕ್ರಿಕೆಟ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ದ್ವಿಶತಕ ಸಿಡಿಸಿದ ದಾಖಲೆಯೂ ಸಚಿನ್ ಹೆಸರಿಗಿದೆ.  ಸಚಿನ್ ಬಳಿಕ ಹಲವು ದ್ವಿಶತಕ ದಾಖಲಾಗಿದೆ. ಇದೀಗ  ಸಚಿನ್ ಸಾಧನೆಗೆ 10 ವರ್ಷದ ಸಂಭ್ರಮ. 

ಸಣ್ಣಗಿರೋ ದಿಶಾ ಇಷ್ಟೊಂದು ತಿನ್ತಾರಾ? ಅನಿಲ್ ಕಪೂರ್ ಧನ್ಯವಾದ ಹೇಳಿದ್ದೇಕೆ?

Donald Trump in India to Anti India Slogan top 10 news of February 24

ಸಣ್ಣಗೆ ಇರುವವರನ್ನು ಕಂಡರೆ ಇವರೇನು ಊಟವನ್ನೇ ಮಾಡುವುದಿಲ್ಲವಾ? ಮಾಡಿದರೂ ಎಷ್ಟುಮಾಡುತ್ತಾರೆ? ಅದು ತಿನ್ನಬೇಕು, ಇದು ತಿನ್ನಬೇಕು ಎನ್ನುವ ಕನಿಷ್ಟಆಸೆಯೂ ಇವರಿಗೆ ಬರುವುದಿಲ್ಲವಾ ಎನ್ನುವುದರೆ ಜೊತೆಗೆ ಇನ್ನಷ್ಟುಪ್ರಶ್ನೆಗಳು ಬರುವುದು ಸಹಜ.

ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದ್ದೇ ಬಿಪಾಶಾ ಬಸು ಪಶ್ಚಾತ್ತಾಪಕ್ಕೆ ಕಾರಣವಾಯ್ತಾ?

Donald Trump in India to Anti India Slogan top 10 news of February 24

2001ರಲ್ಲಿ 'Ajnabee' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಬಿಪಾಶಾ ಬಸು ಬಗ್ಗೆ ತಿಳಿಯದ ವಿಚಾರಗಳು ಇಲ್ಲಿವೆ. ವಿದ್ಯಾಬ್ಯಾಸ ಅರ್ಧಕ್ಕೆ ನಿಲ್ಲಿಸಿದ ಬಳಿಕ ಬಿಪಾಶ ಪಶ್ಚಾತ್ತಾಪಕ್ಕೆ ಕಾರಣಗಳು ಬಹಿರಂಗವಾಗಿದೆ.

ಅಮೂಲ್ಯಾ ಪ್ರಕರಣ: JDS ಕಾರ್ಪೊರೇಟರ್ ಪಾಷಗೆ ಹೊಸ ಸಂಕಟ!

Donald Trump in India to Anti India Slogan top 10 news of February 24

 ವಿದ್ಯಾರ್ಥಿ ಹೋರಾಟಗಾರ್ತಿ ಅಮುಲ್ಯಾಳ 'ಜೈ ಪಾಕಿಸ್ತಾನ' ಪ್ರಕರಣದ ತನಿಖೆ  ಮುಂದುವರಿದಿದೆ. ಆಯೋಜಕರಿಗೆ ಪೊಲೀಸರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಜೆಡಿಎಸ್ ಕಾರ್ಪೊರೇಟರ್‌ ಇಮ್ರಾನ್‌ ಪಾಷಾಗೆ 120 ಪ್ರಶ್ನೆಗಳ ಪಟ್ಟಿಯನ್ನು ಕೊಟ್ಟಿದ್ದಾರೆ. 

ಮಾರುತಿ ಬ್ರೆಜ್ಜಾ ಪೆಟ್ರೋಲ್ ಕಾರು ಬಿಡುಗಡೆ, ಇಲ್ಲಿದೆ ಬೆಲೆ, ವಿಶೇಷತೆ!...

Donald Trump in India to Anti India Slogan top 10 news of February 24

ಬಹುನಿರೀಕ್ಷಿತ ಮಾರುತಿ ಸುಜುಕಿ ಬ್ರೆಜ್ಜಾ ಫೇಸ್‌ಲಿಫ್ಟ್ ಪೆಟ್ರೋಲ್ ಕಾರು ಬಿಡುಗಡೆಯಾಗಿದೆ. ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ಮಾರುತಿ ಬ್ರೆಜ್ಜಾ ಅತ್ಯಂತ ಯಶಸ್ವಿ ಕಾರಾಗಿ ಮಾರ್ಪಟ್ಟಿದೆ. ಇದೀಗ ಡೀಸೆಲ್ ಎಂಜಿನ್ ಸ್ಥಗಿತಗೊಳ್ಳುತ್ತಿತ್ತು, ನೂತನ BS6 ಎಂಜಿನ್ ಪೆಟ್ರೋಲ್ ಕಾರು ಮಾರುಕಟ್ಟೆ ಪ್ರವೇಶಿಸಿದೆ. 

ಕರ್ನಾಟಕ ಪೊಲೀಸ್‌ ನೇಮಕಾತಿ: ವಿವಿಧ ಹುದ್ದೆಗೆ ಅರ್ಜಿ ಹಾಕಿ

Donald Trump in India to Anti India Slogan top 10 news of February 24

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 54 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.  ಪೊಲೀಸ್ ಇಲಾಖೆಯು ಬೆಂಗಳೂರಿನ ನ್ಯಾಯ ವಿಜ್ಞಾನ ಪ್ರಾಯೋಗಾಲಯ, ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಾಯೋಗಾಲಯದ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿಗೆ ಮೂಲಕ ಭರ್ತಿ ಮಾಡುತ್ತಿದೆ.

Latest Videos
Follow Us:
Download App:
  • android
  • ios