ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಪ್ರಸ್ತಾಪ, ಇಂಡಿ ಮೈತ್ರಿ ಒಕ್ಕೂಟದಲ್ಲಿ ಅಪಸ್ವರ?

ಖರ್ಗೆ ಪ್ರಧಾನಿ ಅಭ್ಯರ್ಥಿ ಪ್ರಸ್ತಾಪಕ್ಕೆ ಗಾಂಧಿ ಕುಟುಂಬ ಮೌನ, ಉತ್ತರ ಪ್ರದೇಶದಿಂದ ಖರ್ಗೆ ಸ್ಪರ್ಧೆಗೆ ಪ್ಲಾನ್, ದಲಿತ ಮತ ಸೆಳೆಯಲು ರಣತಂತ್ರ, ಉಪರಾಷ್ಟ್ರಪತಿಯ ಮಿಮಿಕ್ರಿ ಸಮರ್ಥಿಸಿದ ಕಲ್ಯಾಣ್ ಬ್ಯಾನರ್ಜಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ. 
 

Share this Video
  • FB
  • Linkdin
  • Whatsapp

ಮಲ್ಲಿಕಾರ್ಜುನ ಖರ್ಗೆ ಇಂಡಿ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಅನ್ನೋ ಪ್ರಸ್ತಾಪ ಇದೀಗ ಕೋಲಾಹಲ ಸೃಷ್ಟಿಸಿದೆ. ಇದು ರಾಹುಲ್ ಗಾಂಧಿಯನ್ನು ಹಣಿಯುವ ತಂತ್ರ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ 12 ಪಕ್ಷಗಳು ಖರ್ಗೆ ಪ್ರಧಾನಿ ಅಭ್ಯರ್ಥಿಗೆ ಸಹಮತ ವ್ಯಕ್ತಪಡಿಸಿದೆ. ಇನ್ನುಳಿದ ಪಕ್ಷಗಳ ನಾಯಕರ ಮೌನಕ್ಕೆ ಜಾರಿದ್ದಾರೆ. ಪ್ರಮುಖವಾಗಿ ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್ ಈ ಪ್ರಸ್ತಾವ ವಿರೋಧಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಆದರೆ ಈ ಪ್ರಸ್ತಾವನ್ನು ರಾಜ್ಯದ ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದಾರೆ. ಇದರ ಬೆನ್ನಲ್ಲೇ ಖರ್ಗೆ ಕಲಬುರಗಿ ಕ್ಷೇತ್ರ ತೊರೆದು ಉತ್ತರ ಪ್ರದೇಶದ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ಲಾನ್ ನಡೆಯುತ್ತಿದೆ ಅನ್ನೋ ಮಾತು ಬಲವಾಗಿ ಕೇಳಿಬರುತ್ತಿದೆ.

Related Video