ಹಿಂದೂ ಯುವಕನಿಗ ಚಾಕು ಇರಿತ, ಸಾವರ್ಕರ್ ಫೋಟೋ ವಿವಾದಿಂದ ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ!
ಸ್ವಾತಂತ್ರ್ಯ ಸಂಭ್ರಮದಲ್ಲಿ ಕರ್ನಾಟಕ ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿಯಾಗಿದೆ. ಚಾಕು ಇರಿತ, ಸಾವರ್ಕರ್ ಫೋಟೋ ವಿವಾದ ಭುಗಿಲೆದ್ದಿದೆ. ಮಂಗಳೂರಿನಲ್ಲಿ ಎಸ್‌ಡಿಪಿಐ ಗಲಾಟೆ ಎಬ್ಬಿಸಿದೆ. ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ 144 ಸಕ್ಷೆನ್ ಜಾರಿ ಮಾಡಲಾಗಿದೆ. ವೀರ್ ಸಾವರ್ಕರ್ ಫೋಟೋ ಕಿತ್ತೆಸೆದ ಪಂಡರು ಗಲಭೆ ಎಬ್ಬಿಸಿದ್ದಾರೆ. ಹೀಗಾಗಿ ಲಾಠಿ ಚಾರ್ಜ್ ಆರಂಭಗೊಂಡಿದೆ. ಇದರ ನಡುವೆ ಮನೆ ಮುಂದೆ ನಿಂತಿದ್ದ ಪ್ರೇಮ್ ಸಿಂಗ್‌ಗೆ ಪುಂಡರು ಚಾಕು ಇರಿದ್ದಾರೆ. ಇದರಿಂದ ಶಿವಮೊಗ್ಗ ಮತ್ತೆ ಹೊತ್ತಿ ಉರಿದಿದೆ.ಶಿವಮೊಗ್ಗದಲ್ಲಿ ಸ್ವಾತಂತ್ರ್ಯವೀರರ ಫೋಟೋ ಕೆತ್ತೆಸೆದ ಪ್ರಕರಣನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರೆ ಇಂದು ಶಿವಮೊಗ್ಗ ಹೊತ್ತಿ ಉರಿಯುತ್ತಿರಲಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ಎಸ್‌ಡಿಪಿಐ ಕಾರ್ಯಕರ್ತ ಆಸಿಫ್ ಪುಂಡಾಟಿಕೆಗೆ ತಕ್ಕ ಉತ್ತರ ನೀಡದ ಕಾರಣ ಇಂದು ಗಲಭೆ ಸೃಷ್ಟಿಸಿ ಓರ್ವನಿಗೆ ಚಾಕು ಇರಿಯಲಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.