ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!

ಅಭಯ್​ ಸಿಂಗ್​ ಆಧ್ಯಾತ್ಮದ ಕಡೆ ವಾಲಿದ ಮೇಲೆ ಹೆತ್ತವರ ಸಂಪರ್ಕದಿಂದ ದೂರ ಉಳಿದಿದ್ದರು. ಮಗ ಎಲ್ಲಿರ್ತಾನೆ, ಹೇಗಿರ್ತಾನೆ ಅನ್ನೋ ಮಾಹಿತಿ ಅವರಿಗೆ ಸಿಗ್ತಿರ್ಲಿಲ್ಲ. ಈಗ ಮಹಾ ಕುಂಭಮೇಳದಲ್ಲಿ ಮಗ ಇದಾನೆ ಅನ್ನೋದು ತಿಳಿದ ಮೇಲೆ ಮಗನನ್ನು ಮನೆಗೆ ಕರೆತರುವ ಪ್ರಯತ್ನದಲ್ಲಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜ.18):  ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್ ​ನಾಗಸಾಧು..! ಕಾವಿ ತೊಟ್ಟು ಕಟು ದೀಕ್ಷೆ ಪಡೆದ ಏರೋಸ್ಪೇಸ್ ಇಂಜಿನಿಯರ್..! ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ..! ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಇಂಜಿನಿಯರ್​ ಬಾಬಾ. 

ಮನುಷ್ಯನ ಮನಸ್ಸು ಸದಾ ಕಾಣದ ಕಡಲಿಗೆ ಹಂಬಲಿಸುತ್ತಲೇ ಇರುತ್ತದೆ. ಉಳ್ಳವರು ಇನ್ನೂ ಬೇಕೆಂಬ ತುಡಿತದಲ್ಲಿರುತ್ತಾರೆ. ಇಲ್ಲದವರು ತಮಗೇನು ಇಲ್ಲವೆಂಬ ಹತಾಸೆಯಲ್ಲಿರುತ್ತಾರೆ. ಒಟ್ಟಿನಲ್ಲಿ ಇರುವುದನ್ನು ಬಿಟ್ಟು ಇರದಿರುವುದರ ಕಡೆಗೆನೇ ಮನುಷ್ಯನ ಮನಸ್ಸು ಸದಾ ಹಂಬಲಿಸುತ್ತಾ ಇರುತ್ತೆ. ಆದ್ರೆ, ಇರುವುದೆಲ್ಲವನ್ನು ತೊರೆದು ಭಗವಂತನಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವುದು ತುಂಬಾನೇ ವಿರಳ. ಅಂತ ಒಬ್ಬ ವಿರಳ ನಾಗಸಾಧುವಿನ ಪರಿಚಯವನ್ನು ಈ ವಿಶೇಷ ಕಾರ್ಯಕ್ರಮದಲ್ಲಿ ನಿಮಗೆ ಮಾಡಲಿದ್ದೇವೆ. 

ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?

ದೇಶದ ಎಲ್ಲ ಮಾಧ್ಯಮಗಳು ಅಭಯ್ ಸಿಂಗ್​ ಬಾಬಾರ ಹಿಂದೆ ಬೀಳುತ್ತಿದ್ದಂತೆ ಸಾಮಾನ್ಯವಾಗಿ ದೇಶದಲ್ಲಿ ಇವರ ಕುರಿತೇ ಚರ್ಚೆಯಾಗೋದಕ್ಕೆ ಶುರುವಾಯ್ತು. ಈ ಚರ್ಚೆ ಅಭಯ್ ಸಿಂಗ್ ಹೆತ್ತವರಿಗೂ ತಲುಪಿದ ನಂತರ ಮಗ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ ಅನ್ನೋದು ಗೊತ್ತಾಯ್ತು. ಈ ಸುದ್ದಿ ಗೊತ್ತಾಗುತ್ತಿದ್ದಂತೆ ಹೆತ್ತವರು ಮಾಡಿದ್ದೇನು ಗೊತ್ತಾ?. 

ಅಭಯ್​ ಸಿಂಗ್​ ಆಧ್ಯಾತ್ಮದ ಕಡೆ ವಾಲಿದ ಮೇಲೆ ಹೆತ್ತವರ ಸಂಪರ್ಕದಿಂದ ದೂರ ಉಳಿದಿದ್ದರು. ಮಗ ಎಲ್ಲಿರ್ತಾನೆ, ಹೇಗಿರ್ತಾನೆ ಅನ್ನೋ ಮಾಹಿತಿ ಅವರಿಗೆ ಸಿಗ್ತಿರ್ಲಿಲ್ಲ. ಈಗ ಮಹಾ ಕುಂಭಮೇಳದಲ್ಲಿ ಮಗ ಇದಾನೆ ಅನ್ನೋದು ತಿಳಿದ ಮೇಲೆ ಮಗನನ್ನು ಮನೆಗೆ ಕರೆತರುವ ಪ್ರಯತ್ನದಲ್ಲಿದ್ದಾರೆ. ಹಾಗಿದ್ರೆ ಚಿಕ್ಕ ವಯಸ್ಸಿನಲ್ಲಿ ಅಭಯ್ ಸಿಂಗ್​ ಹೇಗಿದ್ದರು? ಆಗಲೂ ಆಧ್ಯಾತ್ಮಕ ಕಡೆ ಹೆಚ್ಚಿನ ಒಲವು ಇತ್ತಾ? ಈ ಕುರಿತು ಅಭಯ್​​ ಸಿಂಗ್​ ಬಾಬಾ ತಂದೆ ಏನ್​ ಹೇಳ್ತಾರೆ. 
ಅಭಯ್​ ಸಿಂಗ್​ ಬಾಬಾ ಹೆತ್ತವರಿಗೆ ಒಬ್ಬನೇ ಮಗ. ತಂದೆ ತಾಯಿಗೆ ಈಗ ವಯಸ್ಸಾಗಿದೆ. ಇದ್ದ ಒಬ್ಬ ಮಗ ಸನ್ಯಾಸತ್ವ ಸ್ವೀಕರಿಸಿಯಾಗಿದೆ. ಈ ಸಂದರ್ಭದಲ್ಲಿ ತಂದೆಯಾದವರು ಹೇಳಿದ್ದೇನು ಗೊತ್ತಾ? 

ಇಲ್ಲಿ ಹೆತ್ತವರದ್ದು ಯಾವ ತಪ್ಪೂ ಇಲ್ಲ ಹಾಗೆನೇ ಅಭಯ್ ಸಿಂಗ್​​​ ಬಾಬಾರದ್ದು ತಪ್ಪು ಎಂದು ಹೇಳಲಾಗುವುದಿಲ್ಲ. ಮಕ್ಕಳು ಪ್ರಭುದ್ಧರಾದ ಮೇಲೆ ಅವರಿಚ್ಛೆಯಂತೆ ಬದುಕುವ ಅಧಿಕಾರವಿದೆ. ಇರುವುದೆಲ್ಲವನ್ನು ತೊರೆದು ಸನ್ಯಾಸತ್ವ ಸ್ವೀಕರಿಸುವುದು ಸುಲಭದ ಮಾತಲ್ಲ. 

Related Video