Asianet Suvarna News Asianet Suvarna News

IAF Chopper Crash: ದುರಂತದಲ್ಲಿ ಮಡಿದ ಹರ್ಜಿಂದರ್ ಸಿಂಗ್ ಕರ್ನಾಟಕದ ಅಳಿಯ!

Dec 9, 2021, 3:01 PM IST
  • facebook-logo
  • twitter-logo
  • whatsapp-logo

ವೆಲ್ಲಿಂಗ್ಟನ್(ಡಿ.09): ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಸಿಡಿಎಸ್‌ ಬಿಪಿನ್ ರಾವತ್ ಸೇರಿ ಹದಿಮೂರು ಮಂದಿ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರಲ್ಲಿ ಬಿಪಿನ್ ರಾವತ್ ಆಪ್ತ ಕಾರ್ಯದರ್ಶಿ ಹರ್ಜಿಂದರ್ ಕೂಡಾ ಒಬ್ಬರು. ಸದ್ಯ ಬಂದ ಮಾಹಿತಿ ಅನ್ವಯ ಹರ್ಜಿಂದರ್ ಸಿಂಗ್ ಕರ್ನಾಟಕದ ಜೊತೆ ನಂಟು ಹೊಂದಿದ್ದಾರೆ.

ಹೌದು ಸಾಲ್ಮರದ ಪ್ರಫುಲ್ಲ ಎಂಬುವವರನ್ನು ಮದುವೆಯಾಗಿದ್ದ ಹರ್ಜಿಂದರ್ ಸಿಂಗ್, ಕರ್ನಾಟಕದ ಅಳಿಯ. ಹರ್ಜಿಂದರ್ - ಪ್ರಫುಲ್ಲ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಪ್ರಫುಲ್ಲ ದೆಹಲಿಯ ಮಿಲಿಟರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸದ್ಯ ಅಳಿಯನನ್ನು ಕಳೆದುಕೊಂಡ ಕಾರ್ಕಳದ ಸಾಲ್ಮರದ ಪ್ರಫುಲ್ಲ ಮನೆಯಲ್ಲಿ ಶೋಕದ ಮಡುಗಟ್ಟಿದೆ. ಮೃತ ಸಿಂಗ್‌ರನ್ನು ನೆನಪಿಸಿಕೊಂಡ ಪ್ರಫುಲ್ಲ ತಾಯಿ, ಅಕ್ಕ- ಭಾವ ಎಲ್ಲರೂ ಕಣ್ನೀರು ಹಾಕಿದ್ದಾರೆ.