PM Modi Turns 72: ಶತಾಯುಷಿಯ ಹೆಮ್ಮೆಯ ಮಗ ಜಗದೇಕವೀರನಾಗಿದ್ದು ಹೇಗೆ?

ಪ್ರಧಾನಿ ಮೋದಿ ಇಡೀ ವಿಶ್ವದಲ್ಲೇ ಪ್ರಸಿದ್ಧ ನಾಯಕರಲ್ಲಿ ಒಬ್ಬರಾಗಿದ್ದಾರೆ. ಜಗದೇಕವಿರರಾಗಿದ್ದಾರೆ. ಹಾಗಾದ್ರೆ ಅದು ಹೇಗೆ ಅಂತೀರಾ..? ವಿವರ ಇಲ್ಲಿದೆ..

Share this Video
  • FB
  • Linkdin
  • Whatsapp

ಮೋದಿ ದೇಶದ ಪ್ರಧಾನಿ ಮಾತ್ರವಲ್ಲ, ಅಮ್ಮನ ಮಗ ಕೂಡ ಹೌದು. ಶತಾಯುಷಿಯ ಹೆಮ್ಮೆಯ ಮಗ. ಇವರು ಮಹಾತಾಯಿಯ ಮುದ್ದಿನ ಮಗನೂ ಹೌದು. ಹೀರಾಬೇನ್‌ ಮಗ ಜಗದೇಕ ವೀರನಾಗಿದ್ದಾರೆ.. 72 ವರ್ಷಕ್ಕೆ ಕಾಲಿಡ್ತಿರುವ ಮೋದಿಗೆ ಜಗತ್ತಿನ ಮೂಲೆ ಮೂಲೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ತಾಯಿ ಹಾಗೂ ಮಗನ ನಡುವಿನ ಕರುಳ ಸಂಬಂಧ ಬಹಳ ವಿಶೇಷವಾಗಿದೆ. ರಜೆಯನ್ನು ತೆಗೆದುಕೊಳ್ಳದಿದ್ದರೂ, ವಿಶೇಷ ದಿನಗಳಂದು ಪ್ರಧಾನಿ ಮೋದಿ ತಾಯಿಯ ಆಶೀರ್ವಾದ ಪಡೀತಾರೆ. ನನ್ನ ತಾಯಿ 90 ವರ್ಷಗಳಾದರೂ ತಮ್ಮ ಎಲ್ಲ ಕೆಲಸಗಳನ್ನು ಅವರೇ ಮಾಡ್ಕೋತಾರೆ ಎಂದು ಮೋದಿ ಈ ಹಿಂದೆ ಹೇಳಿದ್ದರು. ಮೋದಿಯಂತೆ ಅವರ ತಾಯಿಯ ಜೀವನಶೈಲಿಯೂ ಅದ್ಭುತವಾಗಿದೆ. 

Related Video