ಕುಂಭದ್ರೋಣ ಮಳೆಗೆ ಕಂಗೆಟ್ಟ ಕೇರಳ: ಕಡಲ ತೀರದಲ್ಲಿ ದೈತ್ಯ ಅಲೆಗಳು, ಜನರಲ್ಲಿ ಜೀವಭಯ!
ಮಳೆ ಅನ್ನೋ ಪದ ಕೇಳಿದ್ರೆ ಸಾಕು, ಜನ ಕೂತಲ್ಲೇ ನಡುಗೋ ಹಾಗೆ ಆಗಿಬಿಟ್ಟಿದೆ ವಾತಾವರಣ. ಅದರಲ್ಲೂ ಈ ಫೆಂಗಲ್ ಚಂಡಮಾರುತವಂತೂ, ಚಳಿಗಾಲದಲ್ಲಿ ರಣಮಳೆ ಸುರಿಸಿ, ಹೊಸ ಭೀತಿ ಹುಟ್ಟಿಸಿಬಿಟ್ಟಿದೆ.
ಬೆಂಗಳೂರು(ಡಿ.04): ಭಾರೀ ಮಳೆ.. ಭಯಾನಕ ಪ್ರವಾಹ. ಇನ್ನೆಷ್ಟು ಕಾಲ ಕಾಡಲಿದೆ ಈ ಜಲಗಂಡಾಂತರ..? ರಾಜ್ಯವನ್ನೇ ಕಂಗೆಡಿಸಿದ ಫೆಂಗಲ್ ಚಂಡಮಾರುತ ಏನೆಲ್ಲಾ ಅವಾಂತರ ಸೃಷ್ಟಿಸಿದೆ? ವಿನಾಶಕಾರಿ ಮಳೆಗೆ ಕೇರಳ.. ಪುದುಚೆರಿ ತತ್ತರಿಸ್ತಾ ಇರೋದ್ಯಾಕೆ? ತಮಿಳುನಾಡಲ್ಲಿ ರಣಮಳೆಯ ಭೀಕರ ಮರಣ ಮೃದಂಗ ಹೇಗಿದೆ? ಆ ಭಯಂಕರ ದೃಶ್ಯಗಳನ್ನ, ಅದರ ಹಿಂದಿರೋ ಭಯಾನಕ ಕತೆಗಳನ್ನ ಒಂದೊಂದಾಗೇ ತೋರಿಸ್ತೀವಿ ನೋಡಿ..
ಇದು ಮಳೆಯ ಅವಾಂತರದ ಟ್ರೇಲರ್ ಅಷ್ಟೆ.. ಅಸಲಿಗೆ ಈ ಮಳೆ ಸೃಷ್ಟಿಸಿರೋ ಅವಾಂತರ ಎಂಥದ್ದು ಅನ್ನೋದರ ಕಂಪ್ಲೀಟ್ ಚಿತ್ರಣ ನಿಮ್ಮ ಮುಂದೆ ತೆರೆದಿಡ್ತೀವಿ. ಮಳೆ, ರಣಮಳೆ. ಪ್ರಚಂಡ ಚಂಡಮಾರುತ ತಂದ, ಅತಿ ಭಯಾನಕ ಮಳೆ.. ಅಕಾಲದಲ್ಲಿ ಸುರೀತಿರೋ ಈ ಮಳೆ, ಏನೇನೆಲ್ಲಾ ಅನಾಹುತ ಮಾಡಿಟ್ಟಿದೆ, ಇನ್ನೆಷ್ಟು ಕಾಲ ಕಾಡಲಿದೆ ಅನ್ನೋದರ ರಿಪೋರ್ಟ್, ಇಲ್ಲಿದೆ ನೋಡಿ..
ಸಿಲ್ಕ್ ಸ್ಮಿತಾ ಬಯೋಪಿಕ್: ಮಾದಕ ಲೋಕದ ರಾಣಿ ಮತ್ತೆ ಬಂದ್ರು!
ಮಳೆ ಅನ್ನೋದು ಬರಬೇಕಾದಾಗ ಬಂದ್ರೆ ಮಾತ್ರ ಅದು ವರ.. ಅದೇ ಅಳತೆ ಮೀರಿ, ಅಕಾಲದಲ್ಲಿ ವಕ್ಕರಿಸಿದ್ರೆ, ಮಳೆಯಂಥಾ ಮಹಾಶತ್ರು ಮತ್ಯಾರೂ ಇಲ್ಲ. ಮಳೆ ಅನ್ನೋ ಪದ ಕೇಳಿದ್ರೆ ಸಾಕು, ಜನ ಕೂತಲ್ಲೇ ನಡುಗೋ ಹಾಗೆ ಆಗಿಬಿಟ್ಟಿದೆ ವಾತಾವರಣ. ಅದರಲ್ಲೂ ಈ ಫೆಂಗಲ್ ಚಂಡಮಾರುತವಂತೂ, ಚಳಿಗಾಲದಲ್ಲಿ ರಣಮಳೆ ಸುರಿಸಿ, ಹೊಸ ಭೀತಿ ಹುಟ್ಟಿಸಿಬಿಟ್ಟಿದೆ. ಅಷ್ಟಕ್ಕೂ ಈ ಗಂಡಾಂತರ ಕಳೆಯೋದು ಯಾವಾಗ?