ಸಿಲ್ಕ್ ಸ್ಮಿತಾ ಬಯೋಪಿಕ್: ಮಾದಕ ಲೋಕದ ರಾಣಿ ಮತ್ತೆ ಬಂದ್ರು!

ಸಿಲ್ಕ್ ಸ್ಮಿತಾ ಅವರ ಅಧಿಕೃತ ಬಯೋಪಿಕ್ ಚಿತ್ರ ಘೋಷಣೆಯಾಗಿದೆ. 5 ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ರಾಧಿಕಾ ರವಿ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ಸಿಲ್ಕ್ ಸ್ಮಿತಾ ಅವರ ಜೀವನದ ಕುತೂಹಲಕಾರಿ ಘಟನೆಗಳನ್ನು ಬಿಚ್ಚಿಡಲಿದೆ.

Share this Video
  • FB
  • Linkdin
  • Whatsapp

14ನೇ ವಯಸ್ಸಿಗೆ ಬಣ್ಣ ಹಚ್ಚಿ ಪಡ್ಡೆಗಳ ಮೈ ಒದ್ದೆ ಮಾಡಿದ್ದ ಈ ಐಟಂ ಬಾಂಬ್​ ಬದುಕಿದ್ದ 35 ವರ್ಷಗಳಲ್ಲಿಯೇ 450 ಸಿನಿಮಾಗಳಲ್ಲಿ ವಿಜೃಂಭಿಸಿದ್ರು. 1996, ಸೆಪ್ಟೆಂಬರ್ 23ರಂದು ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡ್ರು. ಅಂದಿನಿಂದ ಸಿಲ್ಕ್ ಸ್ಮಿತಾ ಸೃಷ್ಟಿಸುತ್ತಿದ್ದ ಮಾದಕ ಲೋಕ ಬಣ್ಣದ ಜಗತ್ತು ಕಣ್ಮರೆಯಾಗಿಬಿಡ್ತು. ಆದ್ರೆ ಈಗ ಮತ್ತೆ ಸಿಲ್ಕ್ ಸ್ಮಿತಾ ಘಮಲು ಸೃಷ್ಟಿಯಾಗಿದೆ. ಅದಕ್ಕೆ ಕಾರಣ ಸಿಲ್ಕ್ ಸ್ಮಿತಾಳ ಅಫೀಷಿಯಲ್ ಬಯೋಪಿಕ್​ ಸಿನಿಮಾ ಆಗಿ ಬರುತ್ತಿದೆ. ನೆನಪಿರಲಿ ಇದು ಅಫೀಶಿಯಲ್ ಬಯೋಪಿಕ್.ಮಾಧಕ ಅನ್ನೋ ಪದಕ್ಕೆ ಬ್ರ್ಯಾಂಡ್ ಅಂಬಾಸೀಡರ್ ಆಗಿದ್ದವರು ಸಿಲ್ಕ್ ಸ್ಮಿತಾ. ದಕ್ಷಿಣ ಭಾರತ ಚಿತ್ರರಂಗವನ್ನ ಅನಭಿಶಕ್ತ ರಾಣಿಯಂತೆ ಆಳಿದ ಹಾಟೆಸ್ಟ್​ ಹುಡುಗಿ ಸಿಲ್ಕ್ ಸ್ಮಿತಾ.

ಸಿಲ್ಕ್ ಸ್ಮಿತಾ ಜನ್ಮದಿನದಂದೇ ಟೀಸರ್ ಸಮೇತ 'ಸಿಲ್ಕ್ ಸ್ಮಿತಾ'- ಕ್ವೀನ್ಆಫ್ದಿ ಸೌತ್ಘೋಷಣೆ ಆಗಿದೆ. 5 ಭಾಷೆಗಳಲ್ಲಿ ಸಿದ್ಧವಾಗುತ್ತಿರೋ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ಆಗಿ ಹಾಟ್ ಬ್ಯೂಟಿ ರಾಧಿಕಾ ರವಿ ನಟಿಸುತ್ತಿದ್ದಾರೆ. ಜಯರಾಮ್ಸಂಕರನ್ಸಿಲ್ಕ್ ಬಯೋಪಿಕ್​​​ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಿಲ್ಕ್ ಸ್ಮಿತಾ ಜೀವನ ಕಥೆ ಆಧರಿಸಿ 'ಡರ್ಟಿ ಪಿಕ್ಚರ್' ಸಿನಿಮಾ ಬಂದಿದೆ. ವಿಧ್ಯಾ ಬಾಲನ್ ಸಿಲ್ಕ್​ ಸ್ಮಿತಾ ಆಗಿ ನಟಿಸಿದ್ದಾಗಿದೆ. ಈಗ ಬಂದಿರೋ ಸಿಲ್ಕ್​ ಸ್ಮಿತಾ ಬಯೋಪಿಕ್​ನಲ್ಲಿ ಸಿಲ್ಕ್ ಕ್ರೇಜ್ ಹೇಗಿತ್ತು ಎನ್ನುವುದನ್ನು ಸಣ್ಣ ಟೀಸರ್ ಮೂಲಕ ಹೇಳಿದ್ದಾರೆ.

Related Video