"ಇನ್ನೊಂದು ಮಸೀದಿ ಕಳೆದುಕೊಳ್ಳಲ್ಲ" ಓವೈಸಿ ಎಚ್ಚರಿಕೆ: ಭಯದ ನಡುವೆಯೇ ಕಾಶಿ ಜ್ಞಾನ​ವಾಪಿ ಸಮೀಕ್ಷೆ!

*ಮಸೀದಿ ಸರ್ವೆಗೆ ಆದೇಶ ಕೊಟ್ಟ ಜಡ್ಜ್ ಕುಟುಂಬಕ್ಕೂ ಜೀವಭಯ..!
*ವಾರ್ನಿಂಗ್.. ಭಯದ ನಡುವೆಯೇ.ಜ್ಞಾನ​ವಾಪಿ ಸಮೀಕ್ಷೆ..!
*ಬಾಬ್ರಿ ಮಸೀದಿ ನೆನಪಿಸಿಕೊಂಡ ಅಸಾದುದ್ದೀನ್ ಓವೈಸಿ

First Published May 14, 2022, 8:47 PM IST | Last Updated May 14, 2022, 8:47 PM IST

ನವದೆಹಲಿ (ಮೇ. 14): ಅಸಾದುದ್ದೀನ್ ಓವೈಸಿ ಜ್ಞಾನವಾಪಿ ಮಸೀದಿ ಕುರಿತು ಒಂದು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಒಂದು ಮಸೀದಿಯನ್ನ ನಾವು ಕಳೆದುಕೊಂಡಿದ್ದೇವೆ ಇನ್ನೊಂದು ಮಸೀದಿ ಕಳೆದುಕೊಳ್ಳಲ್ಲಾ ಅನ್ನೋ ಮೂಲಕ ನ್ಯಾಯಾಲಯದ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 1991ರಲ್ಲಿ ತಂದಿದ್ದ ಒಂದು ಕಾಯ್ದೆಯನ್ನ ನೆನಪು ಮಾಡಿ ಈ ಆದೇಶ ಕಾಯ್ದೆಯನ್ನ  ಉಲ್ಲಂಘನೆ ಮಾಡಿದೆ ಎಂದಿದ್ದಾರೆ. ಏನದು ಆಕ್ಟ್ 1991..? ಓವೈಸಿ ವಾದವೇನು..? ನ್ಯಾಯಾಲಯದ ಆದೇಶ ಬಂದ ಮೇಲೆ ಅವರ ಮುಂದಿನ ನಡೆ ಏನು ಅನ್ನೋದ್ರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಜ್ಞಾನ್​ವಾಪಿ ಮಸೀದಿ ಹಿಂದೂಗಳಿಗೆ ಸೇರಿದ್ದು, ನಮ್ಮ ಮಂದಿರವನ್ನ ಕೆಡವಿ ಅಕ್ರಮವಾಗಿ ಮಸೀದಿ ಕಟ್ಟಲಾಗಿದೆ..ನಮಗೆ ಅಲ್ಲಿ ಶೃಂಗಾರ ಗೌರಿಯನ್ನ ಪೂಜೆ ಮಾಡೋಕೆ ಅವಕಾಶ ಕಲ್ಪಿಸಿಕೊಡಿ ಅಂತ ಐದು ಹಿಂದೂ ಮಹಿಳೆಯರು ಕೋರ್ಟ್ ಮೆಟ್ಟಿಲನ್ನೇರಿದ್ದು ಇಡೀ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿತ್ತು..  ಮೇ 17ರೊಳಗೆ ವರದಿ ನೀಡಲು ವಾರಾಣಸಿ ಕೋರ್ಟ್ ಆದೇಶವನ್ನೂ ನೀಡಿತ್ತು. ಸರ್ವೆ ಬೇಡವೆಂದಿದ್ದ ಮಸೀದಿ ಕಮಿಟಿಗೆ ಭಾರೀ ಹಿನ್ನೆಡೆಯಾಗಿತ್ತು..ಆದ್ರೆ ಈಗ ಓವೈಸಿ ಇದೊಂದು ಆದೇಶಕ್ಕೆ ಕಿಡಿ ಕಾರ್ತಾ ಇದಾರೆ. ನ್ಯಾಯಾಲಯದ ತೀರ್ಪನ್ನ ಪ್ರಶ್ನೆಮಾಡ್ತಾ ಇದಾರೆ.

ಇದನ್ನೂ ಓದಿ: ಗ್ಯಾನವಾಪಿ ಮಸೀದಿ ಸಮೀಕ್ಷೆ ವೇಳೆ ಪ್ರತ್ಯಕ್ಷವಾದ ನಾಗರ ಹಾವು, ವಿಡಿಯೋಗ್ರಫಿಗೆ ವಿಶೇಷ ಉಪಕರಣಗಳ ಬಳಕೆ!

ಜ್ಞಾನವಾಪಿ ಹೋರಾಟ ಇತ್ತೀಚಿಗೆ ಶುರುವಾಗಿದ್ದಲ್ಲಾ. 1991ರಿಂದಲೇ ಅನೇಕ ಅರ್ಜಿಗನ್ನ ನ್ಯಾಯಾಲಯಕ್ಕೆ ನೀಡಿ ನಮಗೆನ್ಯಾಯ ಕೊಡಿಸಿ ಅಂತ ಕೇಳಿಕೊಂಡಿದ್ದರು..ಆದ್ರೆ  ವಾರಾಣಸಿಯ ಜ್ಞಾನವ್ಯಾಪಿ ಮಸೀದಿಯ ಕುರಿತು ನ್ಯಾಯಾಲಯ ನೀಡಿರುವ ತೀರ್ಪು 1991ರ ಆರಾಧನಾ ಸ್ಥಳಗಳ ಕಾಯ್ದೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಅಂತ ಆಲ್ ಇಂಡಿಯಾ ಮಜ್ಲಿಸ್- ಇ- ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ  ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.

ಈಗಾಗಲೇ ಬಾಬರಿ ಮಸೀದಿಯನ್ನು ಕಳೆದುಕೊಂಡಿದ್ದೇವೆ. ಇನ್ನೊಂದು ಮಸೀದಿಯನ್ನು ಕಳೆದುಕೊಳ್ಳಲು ನಾನು ಬಯಸುವುದಿಲ್ಲ ಅನ್ನೋದು ಓವೈಸಿ ಮಾತು. ಆ ಮಾತಿನಲ್ಲಿ ಬೇಸರಯುತ ಎಚ್ಚರಿಕೆ ತುಂಬಾ ಸ್ಪಷ್ಟವಾಗಿ ಕಾಣಿಸ್ತಾ ಇತ್ತು.. ವಾರಾಣಸಿ ಕೋರ್ಟ್ ಆದೇಶ ಬಂದ ಮೆಲೆ ಪ್ರತಿಕ್ರಿಯೆ ನೀಡಿರೋ ಓವೈಸಿ ಇದು ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬಹುದು ಅನ್ನೋದಾಗಿ ಮಾತನ್ನಾಡಿದಾರೆ. ಅವರ ಮಾತಿನಲ್ಲಿಪದೇ ಪದೇ ಕೇಳಿ ಬಂದಿದ್ದು ಒಂದೇ.. ನಾವು ಒಂದು ಮಸೀದಿಯನ್ನ ಕಳೆದುಕೊಂಡಿದ್ದೇವೆ, ಇನ್ನೊಂದನ್ನ ಕಳೆದುಕೊಳ್ಳೋಕೆ ಇಷ್ಟ ಪಡೋದಿಲ್ಲ ಅನ್ನೋದು. ಈ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ