ಗ್ಯಾನವಾಪಿ ಮಸೀದಿ ಸಮೀಕ್ಷೆ ವೇಳೆ ಪ್ರತ್ಯಕ್ಷವಾದ ನಾಗರ ಹಾವು, ವಿಡಿಯೋಗ್ರಫಿಗೆ ವಿಶೇಷ ಉಪಕರಣಗಳ ಬಳಕೆ!

* ಮತ್ತೆ ಮುಂದುವರೆದ ಗ್ಯಾನವಾಪಿ ಮಸೀದಿ ಸಮೀಕ್ಷೆ

* ಗ್ಯಾನವಾಪಿ ಸಮೀಕ್ಷೆ ವೇಳೆ ಕಂಡು ಬಂದ ನಾಗರ ಹಾವು

* ಇನ್ಮುಂದೆ ಹಾವಾಡಿರನ್ನೂ ಜೊತೆಗೊಯ್ಯಲಿದೆ ಸಮೀಕ್ಷೆ ತಂಡ

Poisonous Cobra Seen During Gyanvapi Masjid Survey pod

ವಾರಾಣಸಿ(ಮೇ.14): ಗ್ಯಾನವಾಪಿ-ಶೃಂಗಾರ ಗೌರಿ ಪ್ರಕರಣ ಸಂಬಂಧ ನ್ಯಾಯಾಲಯದ ತೀರ್ಪಿನ ಬಳಿಕ ಶನಿವಾರ ಬೆಳಗ್ಗೆ 8 ಗಂಟೆಯಿಂದ ಸರ್ವೆ ಕಾರ್ಯ ಆರಂಭಗೊಂಡಿದ್ದು, ಇಂದಿನ ಕೆಲಸ ಪೂರ್ಣಗೊಂಡಿದೆ. ಆದರೆ ಸಮೀಕ್ಷೆ ವೇಳೆ ನಾಗರ ಹಾವು ಕಂಡು ಬಂದಿದ್ದರಿಂದ ಭಾರೀ ಸಂಚಲನ ಉಂಟಾಗಿತ್ತು. ಹಾವು ಕಂಡುಬಂದಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ವೆ ವೇಳೆ ಅಧಿಕಾರಿಗಳು ಹಾವಾಡಿಗರನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಸಮೀಕ್ಷೆ ವೇಳೆ ಒಳಬಂದವರ ಮೊಬೈಲ್ ಗಳನ್ನು ಜಮಾ ಮಾಡಲಾಗಿದೆ. ಸದ್ಯ ಸಮೀಕ್ಷೆ ಪೂರ್ಣಗೊಂಡಿದೆ. ಗ್ಯಾನವಾಪಿ ಮಸೀದಿಯಲ್ಲಿ ಸಮೀಕ್ಷೆಯ ಸಂದರ್ಭದಲ್ಲಿ, ವಿಶೇಷ ಕ್ಯಾಮೆರಾಗಳು ಮತ್ತು ಲೈಟ್‌ಗಳನ್ನು ಸಹ ವಿಡಿಯೋಗ್ರಫಿಗೆ ವ್ಯವಸ್ಥೆ ಮಾಡಲಾಗಿತ್ತು.

ಗ್ಯಾನವಾಪಿಯ ಅರ್ಥವೇನು? ಅದರ ಇತಿಹಾಸ, ವಿವಾದದ ಒಂದು ನೋಟ

ಸುಸೂತ್ರವಾಗಿ ನೆರವೇರಿದ ಸರ್ವೆ ಕಾರ್ಯ 

ಗ್ಯಾನವಾಪಿ ಮಸೀದಿಯ ನೆಲಮಾಳಿಗೆಯ ಮೂರು ಕೊಠಡಿಗಳ ಸರ್ವೆ ಕಾರ್ಯವೂ ಪೂರ್ಣಗೊಂಡಿದೆ. ಆದರೆ ನಾಲ್ಕನೇ ಕೊಠಡಿಯ ಸರ್ವೆ ಕಾರ್ಯ ಇನ್ನೂ ಆಗಿಲ್ಲ. ಸಮೀಕ್ಷೆಯ ಸಮಯದಲ್ಲಿ ನೆಲಮಾಳಿಗೆಯಲ್ಲಿ ಏನು ಕಂಡುಬಂದಿದೆ ಎಂಬುದು ಇನ್ನೂ ತಿಳಿದಿಲ್ಲ. ಕೋರ್ಟ್ ಕಮಿಷನರ್ ಸಮ್ಮುಖದಲ್ಲಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ಇಡೀ ತಂಡ ಪ್ರತಿಯೊಂದು ವಸ್ತುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿತು. ಸಮೀಕ್ಷಾ ತಂಡದಲ್ಲಿ ಅಡ್ವೊಕೇಟ್ ಕಮಿಷನರ್ ಜತೆಗೆ ಇಬ್ಬರು ಸಹಾಯಕರು ಇದ್ದಾರೆ. ವಾರಣಾಸಿ ಪೊಲೀಸ್ ಕಮಿಷನರ್ ಎ ಸತೀಶ್ ಗಣೇಶ್ ಗ್ಯಾನವಾಪಿ ಮಸೀದಿಯಲ್ಲಿ ಪೂರ್ಣಗೊಂಡ ಸಮೀಕ್ಷೆಯ ಬಗ್ಗೆ ಮಾತನಾಡಿ, ಇಡೀ ಪ್ರಕ್ರಿಯೆಯು ಅತ್ಯಂತ ಸುಗಮವಾಗಿ ನಡೆಯುತ್ತಿದೆ. ಇದು ನ್ಯಾಯಾಲಯದ ನಿರ್ದೇಶನ, ಅನುಷ್ಠಾನಗೊಳಿಸುವುದು ನಮ್ಮ ಕರ್ತವ್ಯ. ನಾವು ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದೇವೆ ಮತ್ತು ಇಲ್ಲಿಯವರೆಗೆ ಎಲ್ಲವೂ ಶಾಂತಿಯುತ ವಾತಾವರಣದಲ್ಲಿ ನಡೆದಿದೆ ಎಂದಿದ್ದಾರೆ

ಮಸೀದಿ ಮತ್ತು ದೇವಸ್ಥಾನದ ನಡುವೆ 10 ಅಡಿ ಆಳದ ಬಾವಿ

56 (ಸಿ) ಆಧಾರದ ಮೇಲೆ ಮುಸ್ಲಿಂ ಪಕ್ಷಗಳು ನ್ಯಾಯಾಲಯದ ಆಯುಕ್ತರನ್ನು ಬದಲಾಯಿಸಲು ಕೇಳಿಕೊಂಡಿವೆ. ವಾರಣಾಸಿ ಸಿವಿಲ್ ನ್ಯಾಯಾಧೀಶರು ಈ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ. ಆದ್ದರಿಂದ 61 (ಸಿ) ಆಧಾರದ ಮೇಲೆ ಮುಸ್ಲಿಂ ಕಡೆಯವರು ಮಸೀದಿಯೊಳಗೆ ಸಮೀಕ್ಷೆಯನ್ನು ವಿರೋಧಿಸಿದ್ದಾಎಡ. ಸರ್ವೆ ವಿಚಾರದಲ್ಲಿ ಯಾವುದೇ ಅಡೆತಡೆ ಸೃಷ್ಟಿಯಾದರೆ ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿತ್ತು. ಹಿಂದೂಗಳ ಪ್ರಕಾರ, ಮಸೀದಿ ಮತ್ತು ವಿಶ್ವನಾಥ ದೇವಾಲಯದ ನಡುವೆ 10 ಅಡಿ ಆಳದ ಬಾವಿ ಇದೆ ಎಂದು ಹೇಳಲಾಗುತ್ತದೆ. ಅವನನ್ನು ಮಾತ್ರ ಗ್ಯಾನವಾಪಿ ಎಂದು ಕರೆಯುತ್ತಾರೆ. ಸ್ಕಂದ ಪುರಾಣದಲ್ಲೂ ಇದರ ಉಲ್ಲೇಖವಿದೆ.

ಗ್ಯಾನವಾಪಿ ಮಸೀದಿ ತೀರ್ಪಿನ ಬಳಿಕ ಭಯದ ವಾತಾವರಣ, ಜಡ್ಜ್‌ ಕಳವಳ!

‘ಗ್ಯಾನವಾಪಿ-ಶೃಂಗಾರ ಗೌರಿ ಪ್ರಕರಣದಲ್ಲಿ ತೀರ್ಪು ಘೋಷಿಸಿದ ಬಳಿಕ ಭಯದ ವಾತಾವರಣ ಸೃಷ್ಟಿಯಾಗಿದ್ದು, ಕುಟುಂಬದವರು ನನ್ನ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ’ ಎಂದು ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಾಧೀಶ ರವಿ ಕುಮಾರ್‌ ದಿವಾಕರ್‌ ಹೇಳಿದ್ದಾರೆ.

ಗ್ಯಾನವಾಪಿ ಮಸೀದಿಯ ವಿಡಿಯೋಗ್ರಾಫಿ ಸಮೀಕ್ಷೆಯನ್ನು ನಡೆಸಲು ನೇಮಿಸಿದ ಅಡ್ವೊಕೇಟ್‌ ಜನರಲ್‌ ಅವರನ್ನು ಬದಲಾಯಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಾಧೀಶ ದಿವಾಕರ್‌ ಗುರುವಾರ ತಿರಸ್ಕರಿಸಿದ್ದರು. ಜೊತೆಗೆ ಮಸೀದಿಯ ಸಮೀಕ್ಷೆಯನ್ನು ಮೇ17ರ ಒಳಗಾಗಿ ಮುಗಿಸುವಂತೆ ಆದೇಶಿಸಿದ್ದರು.

ಗ್ಯಾನ್‌ವಾಪಿ ಮಸೀದಿ ವಿಡಿಯೋ ಸರ್ವೆಗೆ ಕೋರ್ಟ್‌ ಅನುಮತಿ!

ಇದೇ ತೀರ್ಪು ಪ್ರಕಟಿಸುವ ವೇಳೆ ಮಾತನಾಡಿದ ಅವರು, ‘ಈ ಸಿವಿಲ್‌ ಮೊಕದ್ದಮೆ ಅಸಾಧಾರಣ ಪ್ರಕರಣವಾಗಿ ಬದಲಾಗುವ ಮೂಲಕ, ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿದೆ. ಈ ತೀರ್ಪಿನ ಬಳಿಕ ಕುಟುಂಬದವರು ನನ್ನ ಬಗ್ಗೆ ಹಾಗೂ ನಾನು ಕುಟುಂಬದವರ ಸುರಕ್ಷತೆಯ ಬಗ್ಗೆ ಚಿಂತಿತನಾಗಿದ್ದೇನೆ. ವಿಡಿಯೋ ಚಿತ್ರೀಕರಣ ನಡೆಯುವ ಸ್ಥಳಕ್ಕೆ ನಾನೂ ಹೋಗುತ್ತೇನೆ ಎಂದು ಭಾವಿಸಿ, ಅಲ್ಲಿಗೆ ಹೋಗದಂತೆ ನನಗೆ ನನ್ನ ಪತ್ನಿ ಮತ್ತು ಪುತ್ರಿ ಸಲಹೆ ನೀಡಿದರು ಎಂದು ದಿವಾಕರ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ವಾರಾಣಸಿಯಲ್ಲಿನ ಗ್ಯಾನವಾಪಿ ಮಸೀದಿ-ಶೃಂಗಾರ ಗೌರಿ ದೇಗುಲದ ಸಮೀಕ್ಷೆ ನಡೆಸುವುದಕ್ಕೆ ತಡೆ ನೀಡಲು ಸುಪ್ರೀಂ ಕೋರ್ಚ್‌ ಶುಕ್ರವಾರ ನಿರಾಕರಿಸಿದೆ. ಆದರೆ ಸಮೀಕ್ಷೆ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣಾ ಪಟ್ಟಿಗೆ ಸೇರಿಸಲು ಸಮ್ಮತಿಸಿದೆ.

ಇದರ ನಡುವೆಯೇ ಶನಿವಾರದಿಂದ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲೇ ಇರುವ ಗ್ಯಾನವಾಪಿ ಮಸೀದಿ ವಿಡಿಯೋ ಸಮೀಕ್ಷೆಯನ್ನು ವಾರಾಣಸಿ ಕೋರ್ಚ್‌ ನೇಮಿತ ಮೂವರು ಕಮಿಷ್ನರ್‌ಗಳು ಆರಂಭಿಸಲಿದ್ದಾರೆ. ಹೀಗಾಗಿ ಕಾಶಿಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಕಾಶಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಆದರೆ ವಾರಾಣಸಿ ಕೋರ್ಚ್‌ ಆದೇಶದ ವಿರುದ್ಧ ಮಸೀದಿ ಆಡಳಿತ ಮಂಡಳಿ ರಾಜ್ಯ ಹೈಕೋರ್ಚ್‌ ಮೊರೆ ಹೋಗುವ ಸಾಧ್ಯತೆ ಇದೆ.

Latest Videos
Follow Us:
Download App:
  • android
  • ios