ಹರಿಯಾಣದಲ್ಲಿ ಬಿಜೆಪಿ ಮ್ಯಾಜಿಕ್, ಜಮ್ಮು ಕಾಶ್ಮೀರದಲ್ಲಿ ಅಬ್ದುಲ್ಲಾಗಳಿಗೆ ಅಧಿಕಾರ

ಹರಿಯಾಣ ಹಾಗೂ ಜಮ್ಮು ಕಾಶ್ಮೀರ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶವನ್ನು ಮಂಗಳವಾರ ಚುನಾವಣಾ ಆಯೋಗ ಪ್ರಕಟಿಸಿದ್ದು, ಬಿಜೆಪಿ ಅಚ್ಚರಿಯ ರೀತಿಯಲ್ಲಿ ಮೂರನೇ ಬಾರಿಗೆ ಹರಿಯಾಣದಲ್ಲಿ ಅಧಿಕಾರ ಹಿಡಿದಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಅ.8): ಹರಿಯಾಣದಲ್ಲಿ ಕೇಸರಿ ಪಡೆ ದೊಡ್ಡ ಮಟ್ಟದಲ್ಲಿ ಮ್ಯಾಜಿಕ್ ಮಾಡಿದೆ. ಎಲ್ಲಾ ಸಮೀಕ್ಷೆಗಳನ್ನ ಸುಳ್ಳಾಗಿಸಿ 3ನೇ ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಗೆದ್ದೆ ಬಿಟ್ಟೆವು ಎನ್ನುತ್ತಿದ್ದ ಕಾಂಗ್ರೆಸ್​ಗೆ ಭಾರೀ ಮುಖಭಂಗವಾಗಿದೆ.

ಹರಿಯಾಣದಲ್ಲಿ ಸೋಲು ಕಂಡ ಬೆನ್ನಲ್ಲಿಯೇ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಚುನಾವಣಾ ಆಯೋಗದ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಹರಿಯಾಣ ಫಲಿತಾಂಶವನ್ನು ಯಾವುದೇ ಕಾರಣಕ್ಕೂ ಒಪ್ಪೋದಿಲ್ಲ ಎಂದು ಕಾಂಗ್ರೆಸ್‌ ಹೇಳಿದೆ.

ಕುಸ್ತಿ ಕಣದ ಹೆಣ್ಣು ಹುಲಿ ವಿನೇಶ್ ಪೊಗಾಟ್‌ಗೆ 2000ಕ್ಕೂ ಅಧಿಕ ಮತಗಳಿಂದ ಹಿನ್ನಡೆ

ಇನ್ನೊಂದೆಡೆ, ಜಮ್ಮು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಗೆ ಜಯವಾಗಿದೆ. ಆರ್ಟಿಕಲ್ 370 ಮತ್ತೆ ತರ್ತೀವಿ ಎಂದವರಿಗೆ ಮತದಾರ ಮಣೆ ಹಾಕಿದ್ದಾರೆ. ಮುಫ್ತಿ ನೇತೃತ್ವದ ಪಿಡಿಪಿಗೆ ಭಾರೀ ಮುಖಭಂಗವಾಗಿದೆ.

Related Video