Asianet Suvarna News Asianet Suvarna News

ಹರ್ ಘರ್ ತಿರಂಗಾ: 7 ತಿಂಗಳು ಮೊದಲೇ ಐಡಿಯಾ ಕೊಟ್ಟಿದ್ದು ಹುಬ್ಬಳ್ಳಿಯ ದೀಪಕ್..!

ದೇಶದಾದ್ಯಂತ ಈಗ ಆಜಾದಿಕಾ ಅಮೃತಾ ಮಹೋತ್ಸವ ಸಂಭ್ರಮ‌ ಕಳೆ ಕಟ್ಟಿದೆ. ಬ್ರಿಟಿಷರ ದಾಸ್ಯದಿಂದ ಭಾರತವನ್ನು ವಿಮೋಚನೆಗೊಳಿಸಿ ಆಗಸ್ಟ್ 15 ಕ್ಕೆ 75 ವರ್ಷ ತುಂಬಲಿರುವ ಹಿನ್ನೆಲೆ ಕೇಂದ್ರ ಸರ್ಕಾರ ಈ ಬಾರೀ 75 ನೇ ಸ್ವಾತಂತ್ರ್ಯೋತ್ಸವನ್ನ ಅರ್ಥಪೂರ್ಣ ವಾಗಿ ಆಚರಿಸಲು ಕರೆ ನೀಡಿದೆ. 
 
Aug 10, 2022, 2:58 PM IST

ದೇಶದಾದ್ಯಂತ ಈಗ ಆಜಾದಿಕಾ ಅಮೃತಾ ಮಹೋತ್ಸವ ಸಂಭ್ರಮ‌ ಕಳೆ ಕಟ್ಟಿದೆ. ಬ್ರಿಟಿಷರ ದಾಸ್ಯದಿಂದ ಭಾರತವನ್ನು ವಿಮೋಚನೆಗೊಳಿಸಿ ಆಗಸ್ಟ್ 15 ಕ್ಕೆ 75 ವರ್ಷ ತುಂಬಲಿರುವ ಹಿನ್ನೆಲೆ ಕೇಂದ್ರ ಸರ್ಕಾರ ಈ ಬಾರೀ 75 ನೇ ಸ್ವಾತಂತ್ರ್ಯೋತ್ಸವನ್ನ ಅರ್ಥಪೂರ್ಣ ವಾಗಿ ಆಚರಿಸಲು ಕರೆ ನೀಡಿದೆ. 

ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!

ಇದರ ಭಾಗವಾಗಿ ಆಗಸ್ಟ್ 13 ರಿಂದ 15 ರವರೆಗೆ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಂಡಿದ್ದು, ಇದಕ್ಕಾಗಿ ಎಲ್ಲೆಡೆ ಭರದ ಸಿದ್ದತೆ ನಡೆದಿದೆ. ಆದ್ರೇ ಈ "ಹರ್ ಘರ್‌ ತಿರಂಗಾ" ಅಭಿಯಾನ ಪರಿಕಲ್ಪನೆ ಹುಟ್ಟಿಕೊಂಡಿದ್ದು ಕರ್ನಾಟಕದಿಂದಲೇ , ಅದೂ ಹುಬ್ಬಳ್ಳಿ ಮೂಲದ ಕನ್ನಡಿಗ ದೀಪಕ್ ಬೋಚಗೇರಿ ಏಳು ತಿಂಗಳ ಹಿಂದೆ ಹರ್ ಘರ್ ತಿರಂಗಾ ಅಭಿಯಾನ ನಡೆಸುವಂತೆ ಕೇಂದ್ರಕ್ಕೆ ಸಲಹೆ ನೀಡಿದ್ರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. 

ಸತತ 20 ವರ್ಷಗಳಿಂದ ತಮ್ಮ ಮನೆಯ ಮೇಲೆ ಧ್ವಜ ಆರಿಸುವ ದೀಪಕಗೆ ಇದು ಹವ್ಯಾಸವಾಗಿತ್ತು. ಇದನ್ನೇ ದೇಶದ ಪ್ರತಿಯೊಬ್ಬರ ಮನೆ ಮೇಲೆ ಧ್ವಜ ಆರಿಸಿದ್ರೆ ಹೇಗೆ? ಎಂಬ ಕಲ್ಪನೆ ಮನದಲ್ಲಿ ಮೂಡಿದಾಗ ಕಳೆದ ಜನವರಿ 28 ರಂದು ಈ ಕುರಿತು ಕೇಂದ್ರ ಸರ್ಕಾರಕ್ಕೆ‌ ಇ- ಮೇಲ್‌ ಮೂಲಕ ವಿವರವಾದ ಸಂದೇಶ ಕಳಿಸಿದ್ರು.ಕೇಂದ್ರ ಸರ್ಕಾರದ ತಮ್ಮ ಸಲಹೆ ಸ್ವಕರಿಸಿದ ವಿಚಾರ ತೀರ ಇತ್ತೀಚಿಗೆ ತಿಳಿಯಿತು.. ಎಂದು ಏಷ್ಯಾ ನೆಟ್ ಸುವರ್ಣ ನ್ಯೂಸ್ ಜೊತೆ ಸಂತಸ ಹಂಚಿಕೊಂಡಿದ್ದಾರೆ.