'ನಮೋ' ತವರಲ್ಲಿ ತ್ರಿಕೋನ ಸ್ಪರ್ಧೆ: ಬಿಜೆಪಿಗೆ ಸೆಡ್ಡು ಹೊಡೆಯಲು ಕೇಜ್ರಿವಾಲ್ ಪ್ಲಾನ್?

ಗುಜರಾತ್ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದ್ದು, ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಪ್ರಧಾನಿ ನರೇಂದ್ರ ಮೋದಿ 15 ದಿನಕ್ಕೊಮ್ಮೆ ಗುಜರಾತಿಗೆ ಹೋಗುತ್ತಿದ್ದು, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್‌   ವಾರಕ್ಕೊಮ್ಮೆ ಮೋದಿ ತವರಿಗೆ ಹೋಗುತ್ತಿದ್ದಾರೆ. 
 

Share this Video
  • FB
  • Linkdin
  • Whatsapp

ತಮ್ಮ ತವರು ರಾಜ್ಯದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಚುನಾವಣೆ ಗೆಲ್ಲಲು ಮೋದಿ ರಣತಂತ್ರ ರೂಪಿಸಿದ್ದು, ಗುಜರಾತ್‌ನಲ್ಲಿ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಈಗಲೇ ರ್ಯಾಲಿ, ಕಾರ್ಯಕ್ರಮಗಳು ಮತ್ತು ರೋಡ್ ಶೋಗಳನ್ನು ನಡೆಸುತ್ತಿದ್ದಾರೆ. ಜೊತೆಗೆ ಈ ಬಾರಿ ದಿಲ್ಲಿ, ಪಂಜಾಬ್‌ ನಂತರ ಆಮ್‌ ಆದ್ಮಿ ಪಕ್ಷ ಗುಜರಾತ್‌ಗೆ ಕಾಲಿಟ್ಟಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್, ಬಿಜೆಪಿ ಹಾಗೂ ಎಎಪಿ ನಡುವೆ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ.

ಸಂಚಲನ ಮೂಡಿಸಿದ ರಾಜಕೀಯ ಯಾತ್ರೆಗಳು; ಮುಂದಿನ ರಾಜಕೀಯ ಭವಿಷ್ಯಕ್ಕೆ ನಿರ್ಣಾಯಕ

Related Video