Asianet Suvarna News Asianet Suvarna News

ಗುಜರಾತ್'ನಲ್ಲಿ ಮತ್ತೆ ಬಿಜೆಪಿ ಪಾರುಪತ್ಯ?: ಎಕ್ಸಿಟ್ ಪೋಲ್ ಏನು ಹೇಳುತ್ತಿವೆ?

ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಗಿದಿದ್ದು, ಮೋದಿ ತವರಿನಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಹೇಳುತ್ತಿವೆ ಸಮೀಕ್ಷೆಗಳು.
 

ಗುಜರಾತ್‌ನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷಾ ಸಂಸ್ಥೆಗಳು ಅಂದಾಜು ಮಾಡಿವೆ. ಟೈಮ್ಸ್ ನೌ, ರಿಪಬ್ಲಿಕ್, ಜನ್ ಕಿ ಬಾತ್ ಸೇರಿದಂತೆ ಹಲವು ಸಮೀಕ್ಷಾ ಸಂಸ್ಥೆಗಳು, ಬಿಜೆಪಿಗೆ ದಿಗ್ವಿಜಯದ ಸುಳಿವು ನೀಡಿವೆ. ಹಾಗೂ ಕಾಂಗ್ರೆಸ್‌'ಗಿಂತ ಗುಜರಾತ್‌ನಲ್ಲಿ ಆಪ್‌ನದ್ದೇ ಸದ್ದು ಎಂದು ಹೇಳಿವೆ. ಕಾಂಗ್ರೆಸ್‌ ಮತಗಳನ್ನು ವಿಭಜನೆ ಮಾಡಿತಾ ಎಎಪಿ ಎಂಬ ಪ್ರಶ್ನೆ ಮೂಡಿದ್ದು, ಆಪ್‌ ಎದರು ಹರಸಾಹಸ ಪಡುತ್ತಿದೆ ಕೈ ಪಾಳಯ. 27 ವರ್ಷಗಳ ಬಳಿಕವು ಗುಜರಾತ್'ನಲ್ಲಿ ಕೇಸರಿ ದರ್ಬಾರ್‌ ನಡೆಯುವ ಮುನ್ಸೂಚನೆ ಸಿಕ್ಕಿದ್ದು, ಅಧಿಕಾರದ ನಿರೀಕ್ಷೆಯಲ್ಲಿದ್ದ ಎಎಪಿಗೆ ಭಾರೀ ನಿರಾಸೆ ಆಗಿದೆ.