ಮೊಸಳೆ ಬಾಯಿಯಿಂದ ಕ್ಷಣದಲ್ಲಿ ಎಸ್ಕೇಪ್‌ ಆದ ಸಿಂಹ.. ವಿಡಿಯೋ

ಸೋಶಿಯಲ್‌ ಮೀಡಿಯಾದಲ್ಲಿ ಈ ವಾರ ವೈರಲ್ ಆದ ಕೆಲ ಸುದ್ದಿಗಳ ಡಿಟೇಲ್ಸ್ ಇಲ್ಲಿದೆ ನೋಡಿ

First Published Jan 17, 2022, 3:35 PM IST | Last Updated Jan 17, 2022, 3:35 PM IST

ಸಿಂಹವೊಂದು ನೀರಿನಲ್ಲಿ ಈಜಾಡುತ್ತಾ ಮುಂದೆ ಸಾಗುತ್ತಿದ್ದ ಇದನ್ನು ನೋಡಿದ ನೀರಿನಲ್ಲೇ ಇದ್ದ ಮೊಸಳೆಯೊಂದು ದಾಳಿ ಮಾಡಿದೆ. ಆದರೆ ಸಿಂಹದ ಅದೃಷ್ಟ  ಚೆನ್ನಾಗಿದ್ದು, ಅದು ತಕ್ಷಣವೇ ಎಚ್ಚೆತ್ತುಕೊಂಡು ಮೊಸಳೆ ಬಾಯಿಯಿಂದ ತಪ್ಪಿಸಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಸ ಹಾಕಲು ಹೋದ ವ್ಯಕ್ತಿ ಕಸದ ವಾಹನದೊಳಗೆ ಬಿದ್ದ ಘಟನೆಯೊಂದು ನಡೆದಿದೆ. ಕಸ ಕೊಂಡೊಯ್ಯುವ ಗಾಡಿ ಬಂದಿದ್ದು, ಇದನ್ನು ನೋಡಿದ ಒಂದನೇ ಮಹಡಿಯಲ್ಲಿದ್ದ ವ್ಯಕ್ತಿ ಅಲ್ಲಿಂದಲೇ ಗಾಡಿಯೊಳಗೆ ಕಸ ಹಾಕಲು ಯತ್ನಿಸಿದ್ದು, ಈ ವೇಳೆ ಆಯಾತಪ್ಪಿ ಗಾಡಿಯೊಳಗೆ ಬಿದ್ದಿದ್ದಾನೆ. ಬಳಿಕ ಅಲ್ಲೇ ಇದ್ದ ಸ್ಥಳೀಯರು ಆತನ ರಕ್ಷಣೆ ಮಾಡಿದ್ದಾರೆ. 

ಮಹಿಳೆಯೊಬ್ಬಳು ತನ್ನ ಮುಖದ ಮೇಲೆ ಜೇನುನೊಣಗಳನ್ನು ಬಿಟ್ಟು ಕೊಂಡಿದ್ದು, ಜೇನುನೊಣಗಳ ಗುಂಪು ಮಹಿಳೆಯ ಮುಖದ ತುಂಬೆಲ್ಲಾ ಓಡಾಡುವ ದೃಶ್ಯ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಕೇರಳದ ತಿರುವನಂತಪುರದಲ್ಲಿ ನಡೆದಿದೆ.

ರಸ್ತೆ ಬದಿ ಮೊಬೈಲ್‌ ಹಿಡಿದು ನಿಂತವನ ಮೊಬೈಲ್‌ ಕದ್ದು ಕಳ್ಳರು ಎಸ್ಕೇಪ್‌ ಆದ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ ಕಳ್ಳರು ಮಾತನಾಡುತ್ತ ನಿಂತಿದ್ದ ಕಳ್ಳನ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಆದರೆ  ಬೈಕ್‌ ಸಂಖ್ಯೆ ನೋಡಿಕೊಂಡ ಪರಿಣಾಮ ಸ್ವಲ್ಪ ಸಮಯದಲ್ಲೇ ಕಳ್ಳರು ಸಿಕ್ಕಿಬಿದ್ದಿದ್ದರು.