ಗೋಧ್ರಾ ಗಲಭೆ ಕೇಸಲ್ಲಿ ಮೋದಿಗೆ ಕ್ಲೀನ್‌ಚಿಟ್‌, ತೀಸ್ತಾ ಸೆತಲ್ವಾಡೆ ಬಂಧನದ ಹಿಂದಿನ ಕಥೆಯೇನು?

ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಅಂದರೆ 2002ರಲ್ಲಿ ನಡೆದಿದ್ದ ಗೋಧ್ರೋತ್ತರ ಗಲಭೆ ಸಂಬಂಧ ಮೋದಿ ಹಾಗೂ ಇತರೆ 63 ಮಂದಿಗೆ ಎಸ್‌ಐಟಿ ನೀಡಿದ್ದ ಕ್ಲೀನ್‌ಚಿಟ್‌ ಅನ್ನು ಇದೀಗ ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿದೆ.

First Published Jun 27, 2022, 5:15 PM IST | Last Updated Jun 27, 2022, 5:17 PM IST

ಪ್ರಧಾನಿ ನರೇಂದ್ರ ಮೋದಿ (PM Modi)  ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಅಂದರೆ 2002ರಲ್ಲಿ ನಡೆದಿದ್ದ ಗೋಧ್ರೋತ್ತರ ಗಲಭೆ ಸಂಬಂಧ ಮೋದಿ ಹಾಗೂ ಇತರೆ 63 ಮಂದಿಗೆ ಎಸ್‌ಐಟಿ ನೀಡಿದ್ದ ಕ್ಲೀನ್‌ಚಿಟ್‌ ಅನ್ನು ಇದೀಗ ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿದೆ.

2002 ಗುಜರಾತ್ ಹಿಂಸಾಚಾರದ ವೇಳೆ ನಡೆದಿದ್ದೇನು? ಸಂದರ್ಶನದಲ್ಲಿ ಮೌನ ಮುರಿದ ಗೃಹ ಸಚಿವ ಅಮಿತ್ ಶಾ!

ಗಲಭೆಯ ಕುರಿತು ಸುಳ್ಳು ದಾಖಲೆ ಸೃಷ್ಟಿಮಾಡಿದ ಆರೋಪದ ಮೇಲೆ ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ (Teesta Setalwad) ಅವರನ್ನು  ತೀಸ್ತಾ ಅವರನ್ನು ಬಂಧಿಸಲಾಗಿದೆ.  ಗೋಧ್ರಾ ಹತ್ಯಾಕಂಡದಲ್ಲಿ ಉನ್ನತಮಟ್ಟದ ಸಂಚು ಅಡಗಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದವರಲ್ಲಿ ಸೆಟಲ್ವಾಡ್‌ ಸಹ ಒಬ್ಬರು. ಎಸ್‌ಐಟಿ ಪ್ರಧಾನಿ ಮೋದಿಗೆ ಕ್ಲೀನ್‌ಚಿಟ್‌ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ನಕಲಿ ವರದಿಗಳನ್ನು ನೀಡಿದ್ದಾರೆ ಎಂಬ ಕಾರಣಕ್ಕೆ ಸೆಟಲ್ವಾಡ್‌ ವಿರುದ್ಧ ಹರಿಹಾಯ್ದಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾ ಗುಜರಾತ್‌ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದ ಮಾಜಿ ಐಪಿಎಸ್‌ ಅಧಿಕಾರಿ ಆರ್‌.ಬಿ. ಶ್ರೀಕುಮಾರ್‌ ವಿರುದ್ಧವೂ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಅಧಿಕಾರಿಗಳಾದ ಸಂಜೀವ್‌ ಭಟ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಕಸ್ಟಡಿ ಸಾವಿನ ಅನ್ಯ ಪ್ರಕರಣದಲ್ಲಿ ಭಟ್‌ ದೋಷಿಯಾಗಿದ್ದು, ಜೈಲಲ್ಲಿದ್ದಾರೆ.