
ವಿಶ್ವ ನಾಯಕತ್ವದಲ್ಲಿ ಮತ್ತೆ ಮೋದಿ ಮ್ಯಾಜಿಕ್! ಗ್ಲೋಬಲ್ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ನಂ.1
ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕತ್ವದಲ್ಲಿ ಮತ್ತೊಮ್ಮೆ ದಾಖಲೆ ಬರೆದಿದ್ದಾರೆ. ಅಮೆರಿಕಾದ ಸಂಸ್ಥೆಯೊಂದು ಹೊರತರಿದ ಸಮೀಕ್ಷೆಯಲ್ಲಿ, ವಿಶ್ವದ ಜನಪ್ರಿಯ ನಾಯಕರೆಂದು ಮೋದಿ ಅವರಿಗೆ ನಂ.1 ಸ್ಥಾನ ಲಭಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕತ್ವದಲ್ಲಿ ಮತ್ತೊಮ್ಮೆ ದಾಖಲೆ ಬರೆದಿದ್ದಾರೆ. ಅಮೆರಿಕಾದ ಸಂಸ್ಥೆಯೊಂದು ಹೊರತರಿದ ಸಮೀಕ್ಷೆಯಲ್ಲಿ, ವಿಶ್ವದ ಜನಪ್ರಿಯ ನಾಯಕರೆಂದು ಮೋದಿ ಅವರಿಗೆ ನಂ.1 ಸ್ಥಾನ ಲಭಿಸಿದೆ. ಈ ಪಟ್ಟಿಯಲ್ಲಿ ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರು ಕಾಣಿಸಿಲ್ಲ. ಸಮೀಕ್ಷೆಯು ಜನರ ವಿಶ್ವಾಸ, ನಾಯಕತ್ವ ಸಾಮರ್ಥ್ಯ, ಪ್ರಭಾವಶೀಲತೆ ಆಧಾರದ ಮೇಲೆ ರೂಪಿತವಾಗಿದೆ. ಮೋದಿಯವರ ಗ್ಲೋಬಲ್ ಇಮೇಜ್ ಮತ್ತು ಜನಮನ್ನಣೆಯು ಹೆಚ್ಚುತ್ತಿರುವುದನ್ನು ಇದು ತೋರಿಸುತ್ತದೆ. ಭಾರತದ ನಾಯಕ ವಿಶ್ವದ ವೇದಿಕೆಯಲ್ಲಿ ಗುರುತಿಸಿಕೊಳ್ಳುತ್ತಿರುವುದು ಭಾರತದ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ.