ನಡು ರಸ್ತೆಯಲ್ಲೇ ಜುಟ್ಟು ಹಿಡಿದು ಕಿತ್ತಾಡ್ಕೊಂಡ ಹುಡುಗೀರು: ವಿಡಿಯೋ ಫುಲ್​ ವೈರಲ್​!

ಮೊದಲೆಲ್ಲಾ ಗಂಡು ಮಕ್ಕಳು, ಕಾಲೇಜು ಹುಡುಗರು ಬೀದಿಯಲ್ಲಿ ಹೊಡೆದಾಡಿಕೊಳ್ಳುತ್ತಿದ್ದರು. ಆದರೆ ಈಗ ಕಾಲಕ್ಕೆ ತಕ್ಕಂತೆ ಮೇಳ ಎಂಬಂತೆ ಹೆಣ್ಣು ಮಕ್ಕಳು ಕೂಡ ನಡುಬೀದಿಯಲ್ಲಿ ಹೊಡೆದಾಡಿಕೊಳ್ಳಲು ಶುರು ಮಾಡಿದ್ದು ಹೆಣ್ಣು ಮಕ್ಕಳು ಹೊಡೆದಾಡಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

First Published Jul 18, 2022, 5:18 PM IST | Last Updated Jul 18, 2022, 5:18 PM IST

ಮೊದಲೆಲ್ಲಾ ಗಂಡು ಮಕ್ಕಳು, ಕಾಲೇಜು ಹುಡುಗರು ಬೀದಿಯಲ್ಲಿ ಹೊಡೆದಾಡಿಕೊಳ್ಳುತ್ತಿದ್ದರು. ಆದರೆ ಈಗ ಕಾಲಕ್ಕೆ ತಕ್ಕಂತೆ ಮೇಳ ಎಂಬಂತೆ ಹೆಣ್ಣು ಮಕ್ಕಳು ಕೂಡ ನಡುಬೀದಿಯಲ್ಲಿ ಹೊಡೆದಾಡಿಕೊಳ್ಳಲು ಶುರು ಮಾಡಿದ್ದು ಹೆಣ್ಣು ಮಕ್ಕಳು ಹೊಡೆದಾಡಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾರ ಜಗಳವನ್ನ ಬೇಕಾದ್ರು ನಿಲ್ಲಿಸ್ಬೋದು. ಆದ್ರೆ ಈ ಹೆಣ್ಮಕ್ಕಳ ಜಗಳವನ್ನ ಮಾತ್ರ ನಿಲ್ಲಿಸೋದು ಕಷ್ಟವಂತೆ ಅದೇ ರೀತಿ ಇಲ್ಲಿ ಹೆಣ್ಣು ಮಕ್ಕಳು ನಡುಬೀದಿಯಲ್ಲಿ ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿದ್ದಾರೆ. ಅಸಲಿಗೆ ಈ ಘಟನೆ ನಡೆದಿರೋದು ಉತ್ತರಾಖಂಡದ ಹಲ್ದ್ವಾನಿಯಲ್ಲಿ. ಯುವತಿಯರ 2 ಗುಂಪುಗಳ ನಡುವೆ ಭಾರಿ ಜಗಳ ನಡೆದಿದ್ದು. ನಡುರಸ್ತೆಯಲ್ಲೇ ಒಬ್ಬರಿಗೊಬ್ಬರು ಕೂದಲು ಹಿಡಿದು ರಸ್ತೆಗೆ ಬಿದ್ದು ಎದ್ದು ಹೊಡೆದಾಡಿಕೊಂಡಿದ್ದಾರೆ. ಹೀಗೆ ಒಬ್ಬರ ಜುಟ್ಟು ಹಿಡಿದು ಮತ್ತೊಬ್ಬರು ಎಳೆದಾಡ್ತಿದ್ರೆ. ಮತ್ತೊಬ್ಬಾಕೆ ದೊಣ್ಣೆಯಿಂದ ಹೊಡೆಯಲು ಮುಂದಾಗಿದ್ದಳು. ಅಲ್ದೆ ಈ ವೇಳೆ ಅಲ್ಲಿಗೆ ಇನ್ನೊಬ್ಬ ಮಹಿಳೆ ಬಂದು ಜಗಳ ಬಿಡಿಸಲು ಮುಂದಾಗ್ತಾರೆ ಆದ್ರೆ ಅದು ಸಾಧ್ಯವಾಗೋದಿಲ್ಲ.. ಅಲ್ದೆ ಅಲ್ಲೆ ನಿಂತಿದ್ದ ಮಕ್ಕಳು, ಯುವಕರು ಇವ್ರ ಈ ಕಿತ್ತಾಟವನ್ನು ನೋಡಿ ಮಜಾ ತಗೊಂಡಿದ್ದಾರೆ.