ಕನ್ನಡ ನಾಡಿನ ಜನತೆಗೆ 'ಪದ್ಮವಿಭೂಷಣ' ಅರ್ಪಿಸುತ್ತಿದ್ದೇನೆ: ಎಸ್‌.ಎಂ ಕೃಷ್ಣ

ಕರ್ನಾಟಕ ಜನರ ಆಶೀರ್ವಾದದಿಂದ ನನಗೆ  ಪದ್ಮವಿಭೂಷಣ ಪ್ರಶಸ್ತಿ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ತಿಳಿಸಿದ್ದಾರೆ.
 

First Published Jan 26, 2023, 5:38 PM IST | Last Updated Jan 26, 2023, 5:38 PM IST

ಆರು ದಶಕಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಆಶೀರ್ವದಿಸಿರುವ ಕನ್ನಡ ನಾಡಿನ ಜನತೆಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಅತ್ಯಂತ ವಿನಮೃವಾಗಿ ಅರ್ಪಿಸುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ತಿಳಿಸಿದ್ದಾರೆ. ಪ್ರಶಸ್ತಿ ಬಂದಿರುವುದಕ್ಕೆ ಸಂತೋಷವಿದೆ ಎಂದು ಹೇಳಿದರು. ನಾನು ಈಗ ನಿವೃತ್ತ ವಿಶ್ರಾಂತಿ ಜೀವನವನ್ನು ನಡೆಸುತ್ತಿದ್ದೇನೆ. ಸಂಗೀತವನ್ನು ಕೇಳುವುದು, ಟೆನ್ನೀಸ್‌ ಹಾಗೂ ಫುಟ್‌ಬಾಲ್‌ ಮ್ಯಾಚ್‌'ಗಳನ್ನು ಟಿವಿಯಲ್ಲಿ ನೋಡುತ್ತೇನೆ ಎಂದು ಅವರು ತಿಳಿಸಿದ್ದಾರೆ. ನಮ್ಮ ವಯಸ್ಸನ್ನು ನಾವು ಗೌರವಿಸದೆ ಹೋದರೆ ಬೇರೆಯವರು ಹೇಗೆ ಗೌರವಿಸುತ್ತಾರೆ. ನನಗೆ 90 ವರ್ಷ, ನಾನು ರಾಜಕೀಯಕ್ಕೆ ಮತ್ತೆ ಹೋಗಲ್ಲ ಸಾಕು ಎಂದರು. ಸುದೀರ್ಘವಾದಂತಹ ರಾಜಕಾರಣವನ್ನು ಮಾಡಿದ್ದೇನೆ. ಆದ್ದರಿಂದ ನಿವೃತ್ತಿ ಘೊಷಣೆ ಮಾಡಿದ್ದೇನೆ ಎಂದು ಹೇಳಿದರು.

ಮಂಡ್ಯದ‌ ಮೇಲೆ ಕಣ್ಣಿಟ್ಟ ಮೂರು ಪಕ್ಷಗಳು: ಜೆಡಿಎಸ್ ಭದ್ರಕೋಟೆ ಗೆಲ್ಲಲು ...

Video Top Stories