News Hour: ಪಂಚ ರಾಜ್ಯ ಚುನಾವಣೆಗೆ ಕರ್ನಾಟಕವೇ ಬ್ರಹ್ಮಾಸ್ತ್ರ!

ಪಂಚರಾಜ್ಯ ಚುನಾವಣೆಗೆ ಕರ್ನಾಟಕ ಮಾಡೆಲ್‌ ಚರ್ಚೆ ಆಗುತ್ತಿದೆ. ಕಾಂಗ್ರೆಸ್‌ನ ಕಿತ್ತಾಟವನ್ನೇ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಬ್ರಹ್ಮಾಸ್ತ್ರವಾಗಿ ಬಳಸುತ್ತಿದೆ. ಸಿಎಂ ಕುರ್ಚಿ ಕಿತ್ತಾಟವನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಸ್ತಾಪಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ನ.6): ಮುಂಬರುವ ಪಂಚರಾಜ್ಯ ಚುನಾವಣೆಗೆ ಕರ್ನಾಟಕ ಮಾಡೆಲ್‌ ಎನ್ನುವುದೇ ಬ್ರಹ್ಮಾಸ್ತ್ರವಾಗಿದೆ. ಚುನಾವಣಾ ಸಮಾವೇಶದಲ್ಲಿ ಲೂಟಿ ಹೊಡೆಯಲು ಸಿಎಂ ಮತ್ತು ಡಿಸಿಎಎಂ ಮಧ್ಯೆ ಪೈಪೋಟಿ ಎಂದ ಪ್ರಧಾನಿ ಮೋದಿ ಗುದ್ದು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ದಾಖಲೆ ಇಟ್ಟು ಮಾತನಾಡಿ ಎಂದು ತಿರುಗೇಟು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಬಿರುಗಾಳಿ ಮಧ್ಯೆ ದಲಿತ ಸಿಎಂ ಕೂಗು ಜೋರಾಗಿದೆ. ಜಾರಕಿಹೊಳಿ ಸಿಎಂ ಆಗಲೆಂದು ವಾಲ್ಮೀಕಿ ಸ್ವಾಮೀಜಿ ಡಿಮ್ಯಾಂಡ್ ಮಾಡಿದ್ದಾರೆ. ಹಿಂದೆ ಖರ್ಗೆಗೆ ಅವಕಾಶ ಸಿಗಲಿಲ್ಲ ಎಂದು ಸಾಹುಕಾರ್‌ ಹೇಳಿದ್ದಾರೆ.

ಇರಾನ್‌ ಅಧ್ಯಕ್ಷರ ಜೊತೆ ಮೋದಿ ಮಾತುಕತೆ, ಇಸ್ರೇಲ್‌-ಹಮಾಸ್ ಯುದ್ಧದ ಕುರಿತು ಚರ್ಚೆ!

ಡಿಕೆಶಿ ಬಳಿಕ ಸಿದ್ದರಾಮಯ್ಯ ಕೂಡ ಆಪರೇಷನ್‌ ಸುಳಿವು ನೀಡಿದ್ದಾರೆ. ಲೋಕಸಭೆ ಚುನಾವಣೆ ವೇಳೆಗೆ ನಡೆಯುತ್ತಾ ಪಕ್ಷಾಂತರ ಪಾಲಿಟಿಕ್ಸ್ ಎನ್ನುವ ಅನುಮಾನ ಕಾಡಿದೆ. ‘ಯಾರೇ ಬಂದರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ತೀವಿ’ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

Related Video